ಸ್ಪರ್ಧಾತ್ಮಕ ಪರೀಕ್ಷೆಗಾಗಿ ಭೂಮಿಯ ಕುರಿತ ಸಮಗ್ರ ಮಾಹಿತಿ ನಿಮಗಾಗಿ
> ಪೃಥ್ವಿಯ ಭೂ ಮೇಲ್ಮೆ ವಿಸ್ತೀರ್ಣ : 512070000 ಚ .ಕಿಮೀ
> ಪೃಥ್ವಿಯ ಮೇಲಿನ ಜಲಭಾಗ : 362544000 ಚ. ಕಿ.ಮೀ
> ಪೃಥ್ವಿಯ ಮೇಲ್ಮೈನ ಭೂಭಾಗ : 149526000 ಚ. ಕಿ.ಮೀ
> ಪೃಥ್ವಿಯ ಸಮಭಾಜಕ ವೃತ್ತದ ಪರಿಧಿ : 40.077 ಕಿ.ಮೀ
> ಧೃವೀಯ ಪರಿಧಿ : 40.0009 ಕಿ.ಮೀ
> ದ್ರವ್ಯರಾಶಿ : 5.97 * 10.24 ಕಿ.ಗ್ರಾಂ
ವ್ಯಾಸ:
> ಭೂ ಮಧ್ಯ ರೇಖಾವ್ಯಾಸ : 12.756 ಕಿ.ಮೀ
> ಧೃವೀಯ ವ್ಯಾಸ : 12,713 ಕಿ.ಮೀ
> ಭೂ ಭಾಗದಿಂದ ಆವೃತ್ತ ಭಾಗ : ಶೇ 29%
> ಜಲ ಭಾಗದಿಂದ ಆವೃತ್ತ ಭಾಗ : ಶೇ. 71%
> ಭೂಮಿಯ ವಯಸ್ಸು : 4550 ಮಿಲಿಯನ್ ವರ್ಷ
> ಸಾಂದ್ರತೆ : 5.52 gಟ. ಅm 3
> ಎತ್ತರದ ಭೂಭಾಗ : 29.2%
> ಆಳವಾದ ಭೂ ಭಾಗ : 70.8%
> ಭೂಪಥದ ಉದ್ದ : 928000000 ಕಿ.ಮೀ
> ಭೂಮಿ ಸೂರ್ಯರ ನಡುವಿನ ಅಂತರ : 148800000 ಕಿ.ಮೀ
> ನೀಚ ಸ್ಥಾನದಲ್ಲಿ ಭೂಮಿ ಸೂರ್ಯನ ನಡುವಿನ ಅಂತರ :146400000 ಕಿ.ಮೀ
> ಉಚ್ಚ ಸ್ಥಾನದಲ್ಲಿ ಭೂಮಿ ಸೂರ್ಯರ ನಡುವಿನ ಅಂತರ :151200000 ಕಿ.ಮೀ
> ಭೂಮಿಯ ಚಲನಾ ವೇಗ(ಪ್ರತಿ ಸೆಕೆಂಡಿಗೆ) : 2906 ಕಿ.ಮೀ
> ಭೂ ಪಥದಲ್ಲಿ ಭೂಮಿಯ ಚಲನಾ ವೇಗ(ಪ್ರತಿ ಗಂಟೆಗೆ) : 1062.00 ಕಿ.ಮೀ
> ಭೂ ಮಧ್ಯ ರೇಖೆಯ ಬಳಿ ದೈನಿಕ ಚಲನಾ ವೇಗ ಪ್ರತಿ ಗಂಟೆಗೆ : 1600 ಕಿ.ಮೀ
> ಭೂಮಿ ತನ್ನ ಅಕ್ಷದ ಮೇಲೆ ಪರಿಭ್ರಮಿಸುವ ಅವಧಿ : 23 ಗಂಟೆ 56 ನಿ 4 ಸೆಂ
> ಭೂಮಿಯ ಅತಿ ಆಳವಾದ ಭಾಗ : ಮರಿಯಾನ ಕಂದರ ಫೆಸಿಫಿಕ್ ಸಾಗರ (11.033 ಮೀಟರ್)
> ಭೂಮಿಯ ಅತಿ ಎತ್ತರ ಪ್ರದೇಶ : ಮೌಂಟ್ ಎವರೆಸ್ಟ್ ಶಿಖರ -8848 ಮೀ
> ಭೂಮಿಯ ಅತಿ ಆಳವಾದ ಪ್ರದೇಶ : ಮೃತ ಸಮುದ್ರ 756 ಮೀಟರ್ (ಸಮುದ್ರ ಮಟ್ಟಕ್ಕಿಂತ)
> ಭೂ ಸಮಭಾಜಕ ವಾತಾವರಣ ಉಷ್ಣಾಂಶ : 14 ಸೆ.
>ಸೂರ್ಯನಿಂದ ಅತಿ ದೂರ : ಜುಲೈ 2 ಮತ್ತು 5 ಸುಮಾರು 152 ಮಿಲಿಯನ್ ಕಿ.ಮೀ
> ಅತಿ ಕಡಿಮೆ ದೂರ: ಜನವರಿ 4 ಮತ್ತು 5 ಸುಮಾರು 152 ಮಿಲಿಯನ್ ಕಿ.ಮೀ
ಉಷ್ಣಾಂಶ :
ಅತಿ ಹೆಚ್ಚು ದಾಖಲು : ಅಲ್‍ಜಜೀಯಾ ಲಿಬಿಯಾ 58 ಸೆ
ಅತಿ ಕಡಿಮೆ ದಾಖಲು : ಅಂಟಾರ್ಟಿಕ ಸುಮಾರು – 89.6 ಸೆ.
ವಾತಾವರಣದಲ್ಲಿ : ಸಾರಜನಕ(ನೈಟ್ರೋಜನ್) 78%, ಆಮ್ಲಜನಕ: 21%, ಇತರೆ: 1%
ಭುಮಿಯ ವಿವಿಧ ಪ್ರದೇಶಗಳ ಶೇಕಡವಾರು ಹಂಚಿಕೆ
1. ಮೈದಾನ ಪ್ರದೇಶ : 43.3% 2. ಪರ್ವತ ಪ್ರದೇಶ : 29.3% 3. ಪ್ರಸ್ಥಭೂಮಿ : 27.4%
ಭೂ ಭಾಗವನ್ನು ವಿವಿಧ ಉದ್ದೇಶಗಳಿಗಾಗಿ ಬಳಕೆ
1. ನಿವ್ಹಳ ಸಾಗುವಳಿ ಪ್ರದೇಶ 46% / 2. ಅರಣ್ಯ ಪ್ರದೇಶ 22% / 3. ಬೀಳು ಭೂಮಿ 10% / 4. ಸಾಗುವಳಿ ಯೋಗ್ಯವಲ್ಲದ ಪ್ರದೇಶ 5%
5. ಕೃಷಿಯೇತರ ಬಳಕೆ 5% / 6. ಮರಗಳು ಮತ್ತು ಹಸಿರು ಹುಲ್ಲುಗಾವಲು 12%
> ಅಂತರಿಕ್ಷದ ಭೂಮಿ ಗ್ರಹ ನೀಲಿ ಬಣ್ಣದಾಗಿ ಕಾಣತ್ತದೆ ಇದಕ್ಕೆ ಕಾರಣ ಭೂ ಗ್ರಹ ಭಾಗ (ಶೇ.71%) ನೀರಿನಿಂದ ಆವೃತ್ತವಾಗಿರುವುದು. ಆದ್ದರಿಂದ ಕೆಲವೊಮ್ಮೆ ನೀಲಗ್ರಹ ಎಂದು ಕರೆಯಲಾಗಿದೆ.
> ಅಂತರಿಕ್ಷದಿಂದ ನೋಡಿದರೆ ಪೃಥ್ವಿ ಸಂಪೂರ್ಣವಾಗಿ ಗೋಳಾಕಾರವಾಗಿ ಕಾಣುತ್ತದೆ. ಆದರೆ ಅದು ವಾಸ್ತಕವಿಲ್ಲ. ಭೂ ಗ್ರಹ ಸಮಭಾಜಕ ವೃತ್ತದ ಬಳಿ ಉಬ್ಬಾಗಿದ್ದು ಧೃವ ಪ್ರದೇಶಗಳಲ್ಲಿ ಚಪ್ಪಟೆಯಾಗಿದೆ.
> ಅಂತರಿಕ್ಷದಿಂದ ಭೂಮಿಯ ಛಾಯಚಿತ್ರ ತೆಗೆದಾಗ ಅಲ್ಲಲ್ಲಿ ಕಂದು ಕಲೆಗಳು ಕಾಣಿಸುತ್ತವೆ. ಆ ಕಲೆಗಳು ಭೂ ಭಾಗಗಳಾಗಿ ಹಾಗೆ ಛಾಯಚಿತ್ರದಲ್ಲಿ ಕಾಣುವ ಗಾಢ ಕಪ್ಪು ಹಾಗೂ ನೀಲಿ ಪ್ರದೇಶಗಳು ಸಾಗರ ಕಂದರಗಳಾಗಿವೆ. ಹಾಗೆ ಕಂದು ಭಾಗಗಳ ಮೇಲಿನ ಮಸುಕು ಪಟ್ಟಿಗಳು ಪರ್ವತ ಶ್ರೇಣಿಗಳಾಗಿವೆ.
> ಪೃಥ್ವಿಯ ವಾಯುಮಂಡಲದ ರಚನೆ ಶುಕ್ರಗ್ರಹ ರಚನೆಯನ್ನು ಹೋಲುವುದಾದರೂ ವೃಶಿಷ್ಟತೆಯಿಂದ ಕೂಡಿದೆ ಸೂರ್ಯನಿಂದ ಹೊರ ಬಂದ ಕಿರಣಗಳು ಹಾದುಹೋಗುವ ತೆಳುವಾಗ ಪೊರೆ ಹೊಂದಿದೆ. ಆದರೆ ಸೂರ್ಯನ ಅಪಾಯ ಕಿರಣಗಳನ್ನು ತಡೆಯುವ ಸಾಮಥ್ರ್ಯವಿದೆ. ನೀಲರೋಹಾತೀತದಂತಹ ಅಪಾಯ ಕಿರಣಗಳನ್ನು ತಡೆದು ಭುಮಿಯನ್ನು ಜೀವಪೋಷಕ ಗ್ರಹವಾಗಿಸಿದೆ. ಹಾಗೆ ಅಂತರಿಕ್ಷದಿಂದ ಬೀಳುವ ಉಲ್ಕೆಗಳ ವೇಗವನ್ನು ವಾಯು ಮಂಡಲ ತಡೆದು ಉಲ್ಕೆ ಎಂದು ಬೀಳುವಂತೆ ಮಾಡುತ್ತದೆ. ಅಲ್ಲದೆ ನಮಗೆ ಉಸಿರಾಡಲು ಬೇಕಾದ ಆಮ್ಲಜನಕವನ್ನು ಒದಗಿಸುತ್ತದೆ.
> ಸುಮಾರು 460 ದಶಲಕ್ಷ ವರ್ಷಗಳ ಹಿಂದೆ ಪೃಥ್ವಿಯು ಕರಗಿದ ಪದಾರ್ಥದ ಚೆಂಡಿನಂತಿತ್ತು. ಪೃಥ್ವಿಯ ಮೇಲೆ ಆಮ್ಲಜನಕವಿಲ್ಲದೆ ಜೀವಿಸುತ್ತಿದ್ದ ಮೊದಲ ಜೀವ ರೂಪವು 350 ದಶಲಕ್ಷ ವರ್ಷಗಳ ಹಿಂದೆ ಅಸ್ಥಿತ್ವದಲ್ಲಿತ್ತು.
ಪೃಥ್ವಿಯ ಸುತ್ತಳತೆ
• ಪೃಥ್ವಿಯು ಗೋಳಾಕಾರವಾಗಿದೆ ಎಂದು ಗ್ರೀಕರು ಮೊದಲ ಬಾರಿಗೆ ಪೃಥ್ವಿಯನ್ನು ಅಳೆಯುವ ಪ್ರಯತ್ನಪಟ್ಟರು. ಅವರಲ್ಲಿ ಮೊದಲಿಗ ಗ್ರೀಕ್‍ನ ಇರಟೋಸ್ತೆನಿಸ್. ಈತ ಪೃಥ್ವಿಯನ್ನು ಕ್ರಿ.ಪೂ 240 ರ ಸುಮಾರಿನಲ್ಲಿ ಅಳೆದು ಪೃಥ್ವಿಯ ಗಾತ್ರ 48000 ಮೈಲಿ ಎಂದನು.
• ಅಂತಿಮವಾಗಿ ಭೂಮಿಯ ಸುತ್ತಳತೆ ಸಮಭಾಜಕ ವೃತ್ತದ ಬಳಿ 40.077 ಕಿ.ಮೀ ಮತ್ತು ಧೃವ ಪ್ರದೇಶದ ಬಳಿ 40007 ಕಿ.ಮೀಗಳಾಗಿವೆ. ಇವೆರಡರ ನಡುವಿನ ಅಂತರ 68 ಕಿ.ಮೀಗಳಾಗಿವೆ. ಈ ಅಂತರ ನಿರ್ಮಾಣಕ್ಕೆ ಕಾರಣ ಸಮಭಾಜಕ ವೃತ್ತದಲ್ಲಿ ಭೂಮಿ ಉಬ್ಬಿಕೊಂಡಿರುವುದು ಹಾಗೂ ಧೃವ ಪ್ರದೇಶದಲ್ಲಿ ಚಪ್ಪಟೆಯಾಗಿರುವುದು ಹಾಗೆ ಸಮಭಾಜಕ ವೃತ್ತದ ಬಳಿಯ ವ್ಯಾಸ 12,757 ಕಿ.ಮೀ ಮತ್ತು ಧೃವಗಳಲ್ಲಿ 12.713 ಕಿ.ಮೀ ಗಳಾಗಿವೆ ಇವೆರಡರ ನಡುವಿನ ವ್ಯತ್ಯಾಸ 43 ಕಿ.ಮೀ.
• ಕ್ರಿ.ಶ 2ನೇ ಶತಮಾನದಲ್ಲಿ ಜೀವಿಸಿದ್ದ ಕ್ಲಾಡಿಯಸ್ ಟಾಲಾಮಿ ಭೂಮಿಯು ಸೌರವ್ಯೂಹ ಕೇಂದ್ರ ಬಿಂದು. ಸೂರ್ಯ ಸೇರಿದಂತೆ ಎಲ್ಲ ಗ್ರಹಗಳು ಭೂಮಿಯ ಸುತ್ತ ಸುತ್ತುತ್ತದೆ ಎಂದು ಹೇಳಿದನು. ಈ ವಾದವೇ ಭೂ ಕೇಂದ್ರಿಯ ಸಿದ್ದಾಂತ ಈ ಸಿದ್ದಾಂತದ ಕಲ್ಪನೆಗೆ ಸಾಕಷ್ಟು ಆಧಾರಗಳು ಭೌತಿಕವಾಗಿ ಕಣ್ಣಿಗೆ ಕಾಣುವಂತೆ ಹಗಲು-ರಾತ್ರಿ ಸಾಗರದ ಅಂಚು ಕಾಣುತ್ತಿದ್ದರಿಂದ ಬಹುಮಂದಿ ಈ ವಾದವನ್ನು ಒಪ್ಪಿಕೊಂಡರು ಮಧ್ಯಯುಗದಲ್ಲಿ ಹೆಚ್ಚು ಪ್ರಚಲಿತವಾಗಿತ್ತು.
ಕ್ರಿ.ಶ 45ನೇ ಸುಮಾರಿನಲ್ಲಿ ಕೋಪರ್ನಿಕಸನು ಮತ್ತೆ ಸೂರ್ಯ ಕೇಂದ್ರೀಯ ಸಿದ್ದಾಂತವನ್ನು ಬಲಪಡಿಸಿದನು. ಕ್ರಿ.ಪೂ 340 ರ ಸುಮಾರಿನಲ್ಲಿ ಅರಿಸ್ಟಾಟಲ್ ಚಂದ್ರ ಗ್ರಹಣವನ್ನು ವೀಕ್ಷಿಸಿ ಚಂದ್ರನ ಮೇಲೆ ಸೂರ್ಯನ ನೆರಳು ಗುಂಡಾಗಿ ಗೋಚರವಾದ ಕಾರಣ ಸೂರ್ಯ ದುಂಡಾಗಿದ್ದಾನೆ ಎಂದು ಪ್ರತಿಪಾದಿಸಿದನು. ಈ ಎಲ್ಲಾ ಬಾಯಿ ಮಾತಿನ ವಾದಗಳಿಗೆ ವೈಜ್ಞಾನಿಕ ಪುರಾವೆ ಒದಗಿಸಿದವನು ಗಲಿಲಿಯೊ, ಇವನು ತನ್ನ ದೂರದರ್ಶಕದ ಮೂಲಕ ಸೂರ್ಯ ಕೇಂದ್ರ ಸಿದ್ದಾಂತವನ್ನು ಪುಷ್ಟೀಕರಿಸಿದನು. ಕೇಪ್ಲರ್ ಹಾಗೂ ನ್ಯೂಟನ್ನನ ಗುರುತ್ವಾಕರ್ಷಣೆ ನಿಯಮಗಳು ಸೂರ್ಯ ಕೇಂದ್ರೀಯ ವಾದವನ್ನು ಮತ್ತÀಷ್ಟು ಗಟ್ಟಿಗೊಳಿಸಿದವು. ಪೃಥ್ವಿ ದುಂಡಾಗಿದೆ ಎಂದು ನಂಬಿದ ಕೋಲಂಬಸ್. ಪೃಥ್ವಿಯ ಸುತ್ತ ನೌಕಾಯಾನದ ಮಾಡಬಹುದೆಂದು ಪಶ್ಚಿಮ ಕಡೆಯಿಂದ ನೌಕಾಯಾನ ಮಾಡಬಹುದಾದ ಒಂದು ದ್ವೀಪಕ್ಕೆ ತಲುಪಿ ಎದು ಭಾರತವೆಂದು ತಿಳಿದನು. 1519 ರಂದು ಮೆಗಲನ್ ಮತ್ತು ಅವನ ಹಡಗು ಸಿಬ್ಬಂದಿ ಭೂ ಪ್ರದಕ್ಷಿಣೆ ಕೈಗೊಂಡು ಮೆಲಗನ್ ಫಿಲಫೈನ್ಸ್‍ನಲ್ಲಿ ಕೊಲ್ಲಲ್ಟಟ್ಟರು. ಅವನ ಸಂಗಡಿಗರು ಭೂಮಿಯನ್ನು ಪ್ರದಕ್ಷಿಣೆ ಮಾಡಿ ಯುರೋಪಿಗೆ ಮರಳಿದರು. ಮುಂತಾದ ಅನೇಕ ನಿದರ್ಶನಗಳು ಭೂಮಿ ದುಂಡಾಗಿದೆ ಎಂಬುದನ್ನು ಸ್ಪಷ್ಟಪಡಿಸಿತು.
ದೈನಂದಿನ ಚಲನೆ:
ಭೂಮಿ ತನ್ನ ಅಕ್ಷದ ಸುತ್ತ ಪಶ್ಚಿಮದಿಂದ ಪೂರ್ವದ ಕಡೆಗೆ ತಿರುಗುತ್ತದೆ. ಈ ಭೂಮಿಯ ಈ ಚಲನೆಯನ್ನು “ಭೂ ಆಕ್ಷಭ್ರಮಣ” ಅತವಾ “ದೈನಂದಿನ ಚಲನೆ” ಎಂದು ಅಕರೆಯುತ್ತಾರೆ. ” ಒಂದು ನಕ್ಷತ್ರ ನೆತ್ತಿಯಿಂದ ಹೊರಡು ಮತತೆ ನೆತ್ತಿಗೆ ಬರಲು ತೆಗೆದುಕೊಳ್ಳುವ ಕಾಲವಾಗಿರುವುದರಿಂದ ಇದನ್ನು ನಾಕ್ಷತ್ರಿಕ ದಿನ ಎಂದು ಕರೆಯುತ್ತಾರೆ”. ಒಂದು ಸುರ್ಯೋದಯದಿಂದ ಮತ್ತೊಂದು ಸೂರ್ಯೋದಯಕ್ಕೆ 24 ಗಂಟೆಗಳು.ಇದನ್ನೆ “ಸೌರದಿನ” ಎಂದು ಕರೆಯುವರು. ಹೀಗಾಗಿ ನಕ್ಷತ್ರಿಕ ದಿನ ಮತ್ತು ಸೌರದಿನಗಳ ನಡುವೆ 3 ನಿಮಿಷ 56 ಸೆಕೆಂಡುಗಳ ವ್ಯತ್ಯಾಸಕ್ಕೆ ಕಾರಣ ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತ ಸೂರ್ಯನನ್ನು ಸುತ್ತಲು ತನ್ನ ಪಥದಲ್ಲಿ 10 ಮುಂದೆ ಚಲಿಸಿರುವುದು.
ವಾರ್ಷಿಕ ಚಲನೆ :
ಪೃಥ್ವಿಯ ಧೀರ್ಘ ವೃತ್ತಾಕಾರವಾಗಿ ಅಥವಾ ಅಂಡಕಾರವಾಗಿ ಸೂರ್ಯನ ಸುತ್ತಲೂ ತಿರುಗುತ್ತದೆ. ಈ ಮಾರ್ಗಕ್ಕೆ “ಕಕ್ಷೆ” ಅಥವಾ “ಪಥ” ಎನ್ನುವರು ಪೃಥ್ವಿಯ ಅಕ್ಷವು ಒಂದು ಕಾಲ್ಪನಿಕ ರೇಖೆಯಾಗಿದೆ. ಭುಮಿ ತನ್ನ ಅಕ್ಷದ ಮೇಲೆ ಸುತ್ತುವಂತೆ ಸೂರ್ಯನ ಸುತ್ತ ಸುತ್ತುತ್ತದೆ ಹೀಗೆ ಸೂರ್ಯನನ್ನು ಸುತ್ತಲು ಭೂಮಿ 365 ದಿನ 5 ಗಂಟೆ. 48 ನಿಮಿಷ 45.68 ಸೆಕೆಂಡುಗಳ ಕಾಲ ತೆಗೆದುಕೊಳ್ಳುವುದು. ಇದನ್ನು “ವಾರ್ಷಿಕ ಚಲನೆ” ಎಂದು ಸುತ್ತುವಿಕೆಯನ್ನು ಪರಿಭ್ರಮಣೆ ಎಂದು ಕರೆಯುತ್ತಾರೆ. ಭೂಮಿ ಸೂರ್ಯನ ನಿರ್ದಿಷ್ಟ ಅಕ್ಷದ ಮೇಲೆ ಸುತ್ತುವುದು ಪಥವನ್ನು ಭೂಪಥ ಎಂದು ಕರೆಯುತ್ತಾರೆ. ಭೂಪಥವು 927.7 ದ.ಕ. ಕಿ.ಮೀ ಸುತ್ತಳತೆ ಹೊಂದಿದ್ದು ಈ ದೂರವನ್ನು ಭಮಿಯು ಒಂದು ವರ್ಷದ ಅವಧಿಯಲ್ಲಿ ಪ್ರತಿ ಸೆಕೆಂಡಿಗೆ 29.6 ಕಿ.ಮೀ ಪ್ರತಿ ನಿಮಿಷಕ್ಕೆ 1760 ಹಾಗೂ ಪ್ರತಿ ಘಂಟೆಗೆ 105824 ಕಿ.ಮೀ ವೇಗದಲ್ಲಿ ಚಲಿಸುವುದು. ಭೂಮಿಯು ಸೂರ್ಯನಿಗೆ ಸ್ಥಿತಿ ಸಮೀಪದಲ್ಲಿರುವ ಅಪೀಲಿಯನ್ ಸ್ಥಾನದಲ್ಲಿ ವೇಗವಾಗಿ ಚಲಿಸುವುದು ಅಂದರೆ ಭೂಮಿ ಸೂರ್ಯದ ನಡುವಿನ ಅಂತರ ಹೆಚ್ಚಾಗಿದ್ದಾಗ ಪರಿಭ್ರಮಣವೇಗ ಹೆಚ್ಚಾಗಿಯೂ ಇವುಗಳ ಅಂತರ ಕಡಿಮೆಯಿದ್ದಾಗ ಪರಿಭ್ರಮಣ ವೇಗ ಕಡಿಮೆಯಾಗಿರುತ್ತದೆ.
ಭೂಮಿಯ ವಾಲುವಿಕೆ :
ಭೂ ಅಕ್ಷದ ಉತ್ತರಭಾಗ ಅಥವಾ ಉತ್ತರ ಧೃವವು ನಿರಂತರವಾಗಿ ಧೃವ ನಕ್ಷತ್ರದ ಕಡೆಗೆ ಓರೆಯಾಗಿರುವುದು. ಭೂ ಅಕ್ಷವು ಭೂಮಿಯ ಪಥಕ್ಕೆ 661/2 ಅಥವಾ ಭೂ ಪಥದ ಲಂಭಕ್ಕೆ 231/2 ಕೋನದಲ್ಲಿರುವುದು. ಈ ಬಾಗಿರುವಿಕೆಯನ್ನು “ಭೂಮಿಯ ವಾಲುವಿಕೆ ಅಥವಾ ಓರೆ” ಎಂದು ಕರೆಯುತ್ತಾರೆ. ಈ ವಾಲುವಿಕೆ ಭೂಮಿಯ ಎಲ್ಲಾ ಭಾಗಗಳಲ್ಲೂ ಒಂದೇ ಪ್ರಮಾಣದಲ್ಲಿರುವುದು ಆದ್ದರಿಂದ ಹಗಲುರಾತ್ರಿ ಋತು ಭೇದಗಳು ಉಂಟಾಗುತ್ತದೆ.
ಪ್ರಧಾನ ಅಕ್ಷಾಂಶಗಳು:
ಭೂಗೋಳವನ್ನು ಪ್ರಧಾನವಾದ ಐದು ಅಕ್ಷಾಂಶಗಳ ಆಧಾರದ ಮೇಲೆ ಐದು ವಲಯಗಳಾಗಿ ವಿಂಗಡಿಸಲಾಗಿದೆ.
ಸಮಭಾಜಕ ವೃತ್ತ ಅಕ್ಷಾಂಶ: 00 ಅಕ್ಷಾಂಶವಗಿದ್ದು ಇದು ಭುಮಿಯ 900 ಸಮನಾಂತರವಾಗಿ ಉತ್ತರ ದಕ್ಷಿಣ ಅಕ್ಷಾಂಶಗಳಾಗಿ ವಿಂಗಡಿಸುವುದು. ಇದು ಅತ್ಯಂತ ದೀರ್ಘವಾದ ಅಕ್ಷಾಂಶವಾಗಿದ್ದು ಇದರ ಆಧಾರದ ಮೇಲೆ ಇತರೆ ಅಕ್ಷಾಂಶಗಳನ್ನು ಎಳೆಯಲಾಗವುದು.
ಕರ್ಕಾಟಕ ಸಂಕ್ರಾಂತಿ ವೃತ್ತ :ಸಮಭಾಜಕ ವೃತತದ ಉತ್ತರದಲ್ಲಿರುವ 23 1/20 ಅಕ್ಷಾಂಶವನ್ನು ಕರ್ಕಾಟಕ ಸಂಕ್ರಾಂತಿ ವೃತ್ತವೆಂದು ಕರೆಯುತ್ತಾರೆ. 23 1/2 ದಕ್ಷಿಣದ ಅಕ್ಷಾಂಶವನ್ನು ಮಕರ ಸಂಕ್ರಾಂತಿ ವೃತ್ತವೆಂತಲೂ ಕರೆಯುತ್ತಾರೆ. ಸಮಭಾಜಕ ವೃತ್ತದಿಂದ ಕರ್ಕಾಟಕ ಮತ್ತು ಮಕರ ಸಂಕ್ರಾಂತಿ ವೃತ್ತಗಳವರೆಗಿನ ಅಕ್ಷಾಂಶಗಳನ್ನು ನೀಚ ಅಥವಾ ಕೆಳ ಅಕ್ಷಾಂಶ ಎಂದು ಕರೆಯುತ್ತಾರೆ. ಈ ಭೂ ಪ್ರದೇಶವನ್ನು ಉಷ್ಣವಲಯವೆಂತಲೂ ಕರೆಯುತ್ತಾರೆ.
ಆರ್ಕಟಿಕ್ & ಅಂಟಾರ್ಟಿಕ್ ವೃತ್ತ : ದಕ್ಷಿಣಾರ್ಧಗೋಳದ 66 1/20 ಅಕ್ಷಾಂಶವನ್ನು “ಅಂಟಾರ್ಟಿಕ್ ವೃತ್ತ”ವೆಂದು ಉತ್ತರಾರ್ಧಗೋಳದ 66 1/20 ಅಕ್ಷಾಂಶವನ್ನು “ಆರ್ಕಟಿಕ್ ವೃತ್ತ”ವೆಂದು ಕರೆಯುವರು. ಈ ಅಕ್ಷಾಂಶಗಳನ್ನು ಮಧ್ಯ ಅಕ್ಷಾಂಶ ಎಂದು ಕರೆಯುತ್ತಾರೆ. ಹಾಗೂ ಈ ಭು ಪ್ರದೇಶವನ್ನು ಸಮಶೀತೋಷ್ಣವಲಯ ಎಂತಲೂ ಕರೆಯುತ್ತಾರೆ.
ಧೃವ ಪ್ರದೇಶಗಳು: 66 1/20 ಉತ್ತರದಿಂದ 90 ಡಿಗ್ರಿ ಅಕ್ಷಾಂಶವನ್ನು ಉತ್ತರಧೃವವೃತ್ತವೆಂದು ಹಾಗೂ 66 1/20 ದಕ್ಷಿಣದಿಂದ 900 ವರೆಗಿನ ಅಕ್ಷಾಂಶವನ್ನು ದಕ್ಷಿಣಧೃವವೆಂದು ಕರೆಯುತ್ತಾರೆ. ಈ ಅಕ್ಷಾಂಶಗಳನ್ನು ಉಚ್ಚ ಅಕ್ಷಾಂಶವೆಂತಲೂ ಭೂ ಪ್ರದೇಶವನ್ನು ಶೀತವಲಯವೆಂತಲೂ ಕರೆಯುತ್ತಾರೆ.
ಸಂಕ್ರಾಂತಿ ವೃತ್ತಗಳು: ವಿಷವೃತ್ತದಿಂದ ಸೂರ್ಯನು ಉತ್ತರ- ದಕ್ಷಿಣಕ್ಕೆ ಚಲಿಸದಂತೆ ಆಯಾ ಭಾಗದ ಭೂ ಪ್ರದೇಶಗಳು ಹೆಚ್ಚಿನ ಸೂರ್ಯರಶ್ಮಿ ಪಡೆಯುತ್ತದೆ. ಅಂಥ ಸ್ಥಾನಗಳನ್ನು ಸಂಕ್ರಾಂತಿಗಳೆನ್ನುವರು.
ವಿಷವತ್ ಸಂಕ್ರಾಂತಿ ಮಾರ್ಚ್ 21 ಮತ್ತು ಸೆಪ್ಟೆಂಬರ್ 23
1. ಮೇಷ ಅಥವಾ ವಸಂತ ಸಂಕ್ರಾಂತಿ ಮಾರ್ಚ್21
2. ತುಲಾ ಅಥವಾ ಶರತ್ ಸಂಕ್ರಾಂತಿ ಸೆಪ್ಟಂಬರ್ 23
3. ಕರ್ಕ ಸಂಕ್ರಾಂತಿ ಜೂನ್ 21
4. ಮಕರ ಸಂಕ್ರಾಂತಿ ಡಿಸೆಂಬರ್ 22
ಅಕ್ಷಾಂಶ : ಭೂಮಿಯ ಮೇಲೆ ಪೂರ್ವ ಪಶ್ಚಿಮವಾಗಿ ಸಮಭಾಜಕ ವೃತ್ತಕ್ಕೆ ಸಮನಾಂತರವಾಗಿ ಎಳೆಯಲಾದ ಕಾಲ್ಪನಿಕ ರೇಖೆಗಳಿಗೆ ಅಕ್ಷಾಂಶಗಳೆನ್ನುವರು.
ರೇಖಾಂಶ: ಭೂಗೋಳದ ಮೇಲೆ ಉತ್ತರ ದಕ್ಷಿಣ ಧೃವಗಳನ್ನು ಸೇರಿಸಲು ಕಾಲ್ಪನಿಕವಾಗಿ ಎಳೆಯಲಾಗಿರುವ ರೇಖೆಗಳನ್ನು ರೇಖಾಂಶಗಳೆಂದು ಕರೆಯುತ್ತಾರೆ. ರೇಖಾಂಶಗಳನ್ನು ಸಹ ಅಕ್ಷಾಂಸಗಳಂತೆ ಅಂಸಗಳಲ್ಲಿ ಅಳೆಯಲಾಗುತ್ತದೆ. ಗೋಳಾಕಾರವಾಗಿ ಭೂಮಿಯನ್ನು 3600 ಅಂಶಗಳಾಗಿ ವಿಭಾಗಿಸಲಾಗಿದೆ. ಈ ರೇಖಾಂಶಗಳಿಂದ ಪ್ರಪಂಚದ ಮೇಲಿನ ಯಾವುದೇ ಭೂ ಭಾಗವನ್ನು ಕರಾರುವಕ್ಕಾಗಿ ಗುರುತಿಸಬಹುದು. ಅಲ್ಲದೆ ಪ್ರಪಂಚದ ವಿವಿಧ ದೇಶಗಳ ಕಾಲ ಮತ್ತು ದಿನಾಂಕವನ್ನು ನಿಗದಿಪಡಿಸಬಹುದು.
ರೇಖಾಂಶ ಮತ್ತು ಕಾಲಮಾನ :
ಭೂಮಿಯ ಪಶ್ಚಿಮದಿಂದ ಪೂರ್ವಕ್ಕೆ ತನ್ನ ಅಕ್ಷದ ಮೇಲೆ ನಿರ್ದಿಷ್ಟ ಪತದಲ್ಲಿ ಸುತ್ತುವುದು. ಹೀಗಾಗಿ ಭೂಗೋಳದ ಮೇಲಿನ ಪ್ರತಿಯೊಂದು ರೇಖಾಂಶವು ಸೂರ್ಯನ ಕಿರಣಗಳನ್ನು ಪಡೆದು ದಾಟುತ್ತದೆ. ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ದಾಟಲು4 ನಿಮಿಷ 15 ರೇಖಾಂಶ ದಾಟಿದರೆ 1 ಗಂಟೆ 360 ರೇಖಾಂಶವನ್ನು ದಾಟಿದರೆ 24 ಗಂಟೆ ಅಥವಾ ದಿನವಾಗುತ್ತದೆ. ವೇಳೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಗ್ರೀನ್ ವಿಚ್‍ನಲ್ಲಿ 1 ಗಂಟೆಯಾಗಿದ್ದರೆ, ಭಾರತದಲ್ಲಿ ಅದೇ ಸಮಯದಲ್ಲಿ 6.30 ನಿಮಿಷವಾಗಿರುತ್ತದೆ. ಗ್ರೀನ್‍ವಿಚ್ ರೇಖೆಯಿಂದ ಪೂರ್ವಕ್ಕೆ ಪ್ರಯಣ ಬೆಳೆಸಿದರೆ ಪ್ರತಿ 15 ರೇಖಾಂಶ ದಾಟಿದರೆ 1 ಅಗಂಟೆ ಹೆಚ್ಚಾಗುತ್ತಾ ಹೋಗುವುದು. ಗ್ರೀನ್‍ವಿಚ್ ರೇಖೆಯಿಂದ ಪಶ್ಚಿಮಕ್ಕೆ ಹೊರಟರೆ 1 ತಾಸು ಹಿಂದಾಗುತ್ತದೆ. ಇದಕ್ಕೆ ಕಾರಣ ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು.
ಸ್ಥಾನಿಕ ವೇಳೆ :
ಪ್ರತಿಯೊಂದು ರೇಖಾಂಶವು ಸೂರ್ಯನಿಗೆ ಪ್ರತಿದಿನ ಎದುರಾಗುತ್ತದೆ. ಒಂದು ರೇಖಾಂಶದ ನೆತ್ತಿಯ ಮೇಲೆ ಸೂರ್ಯ ಬಂದರೆ ಆಗ ಆ ರೇಖಾಂಶದ ಮೇಲಿರುವ ಎಲ್ಲಾ ಭೂ ಸ್ಥಾಳಗಳ ವೇಳೆ 12 ಗಂಟೆಯಾಗಿರುತ್ತದೆ.
ಪ್ರಯಾಣವೇಳೆ:
ಒಂದೇ ದೇಶ ವಿಶಾಲವಾದ ಭೂ ಪ್ರದೇಶ ಹೊಂದಿರುವುದರಿಂದ ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ಮಾಡಿವವರು ಆಯಾ ಸ್ಥಾನಿಕ ವೇಳೆಗೆ ಅನುಗುಣವಾಗಿ ಗಡಿಯಾರದ ಮುಳ್ಳನ್ನು ಹಿಂದೆ ಮುಂದೆ ಮಾಡಿಕೊಳ್ಳಬೇಕಾಗುತ್ತದೆ. ಇದು ಏಕ ಕಾಲಮಾನ ನಿರ್ಧಾರಕ್ಕೆ ಹಾಗೂ ನಾವಿಕರು, ಗಗನಯಾತ್ತಿಗಳಿಗೆ ತೊಂದರೆಯನ್ನುಂಟು ಮಡುತ್ತಿದ್ದ ಕಾರಣ ಪ್ರತಿಯೊಂಧು ದೇಶ ತನ್ನ ದೇಶದ ಮೇಲೆ ಹಾದು ಹೋಗುವ ಒಂದು ರೇಖಾಂಶವನ್ನು ಪ್ರಧಾನ ರೇಖಾಂಶ ಅಥವಾ ಪ್ರಮಾಣ ರೇಖಾಂಶ ಎಂದು ಪರಿಗಣಿಸುತ್ತಾರೆ.
ಅಂತರರಾಷ್ಟ್ರೀಯ ದಿನ ರೇಖೆ :
ಗ್ರೀನ್ ವಿಚ್ ನಗರದ ರಾಯಲ್ ಖಗೋಳ ವೀಕ್ಷಣಾಲಯ ಕೇಂದ್ರವನ್ನು ದಾಟಿ ಹೋಗುವ ರೇಖಾಂಶವೇ ಪ್ರಧಾನ ರೇಖಾಂಶ ಅಥವಾ ಗ್ರೀನ್ ವಿಚ್ ರೇಖಾಂಶವಾಗಿದೆ. ಈ ರೇಖಾಂಶ 00 ರೇಖಾಂಶವನ್ನು ಹೊಂದಿದೆ 00 ರೇಖಾಂಶದಿಂದ 10 ರೇಖಾಂಶ ದಾಟಿದರೆ 40 ನಿಮಿಷವಾಗುತ್ತದೆ. ಹಾಗೆ 150 ರೇಖಾಂಶ ದಾಟಿದರೆ 10 ಗಂಟೆಯಾಗುತ್ತದೆ. 00 ರೇಖಾಂಶದಿಂದ 1800 ದಾಟಿದರೆ ಅದು 120 ಗಂಟೆಯಾಗುತ್ತದೆ. ಗ್ರೀನ್ಚಿಚ್‍ನಿಂದ 1800 ಪಶ್ಚಿಮ ಅಥವಾ ಪೂರ್ವಾ ರೇಖಾಂಶ ಈ ಅಂಶವನ್ನು “ಅಂತರರಾಷ್ಟ್ರೀಯ ದಿನ ರೇಖೆ” ಎಂದು ಕರೆಯಲಾಗಿದೆ.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments