✍ಕರಾವಳಿ ಪ್ರದೇಶಗಳು
# ಕರಾವಳಿ ಪ್ರದೇಶ ಪಶ್ಚಿಮದಲ್ಲಿ ಗುಜರಾತ್ ನ "ಕಛ್"ನಿಂದ ಪೂರ್ವದಲ್ಲಿ ಗಂಗಾನದಿಯ ಮುಖಜ ಭೂಮಿಯವರೆಗೆ ಹಬ್ಬಿದೆ.
# ಭಾರತದ ಕರಾವಳಿಯ ಉದ್ದ6,100 ಕಿ.ಮೀ (ದ್ವೀಪಗಳನ್ನು ಹೊರತುಪಡಿಸಿ).
# ಭಾರತದ ಕರಾವಳಿಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.
ಪೂರ್ವ ಕರಾವಳಿ
ಪಶ್ಚಿಮ ಕರಾವಳಿ
👉🏾ಪೂರ್ವ ಕರಾವಳಿ
# ಉತ್ತರದ ಗಂಗಾನದಿ ಮುಖಜ ಭೂಮಿಯಿಂದ ದಕ್ಷಿಣದ ಕನ್ಯಾಕುಮಾರಿ ಯವರೆಗೂ, ಬಂಗಾಳ ಕೊಲ್ಲಿ ಮತ್ತು ಪೂರ್ವ ಘಟ್ಟಗಳ ನಡುವೆ ಹರಡಿದೆ.
# ಪೂರ್ವ ಕರಾವಳಿ ಪ್ರದೇಶವು ಹೆಚ್ಚು ಅಗಲವಾಗಿ ಮತ್ತು ಒಂದೇ ರೀತಿ ಸಮತಟ್ಟಾಗಿದೆ.
# ಪೂರ್ವ ಕರಾವಳಿ ತೀರದಲ್ಲಿ ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಕೆಲವು ಲಗೂನ್ (ಸರೋವರ)ಗಳಿವೆ. ಅಂತಹ ಲಗೂನ್ ಗಳಿಗೆ ಉದಾ: ತಮಿಳುನಾಡಿನ 'ಪುಲಿಕಾಟ್' ಮತ್ತು ಒರಿಸ್ಸಾದ 'ಚಿಲ್ಕಾ' ಸರೋವರಗಳು.
# ಚಿಲ್ಕಾ ಸರೋವರ ಭಾರತದ ಅತಿ ದೊಡ್ಡ ಸರೋವರವಾಗಿದೆ.
# ಆಂಧ್ರಪ್ರದೇಶದ ಬಳಿ ಇರುವ ಶ್ರೀ ಹರಿಕೋಟಾ ದ್ವೀಪದಲ್ಲಿ ಇಸ್ರೋ (ISRO)ದ ಕೃತಕ ಉಪಗ್ರಹ ಉಡಾವಣಾ ಕೇಂದ್ರವಿದೆ.
# ಪೂರ್ವ ಕರಾವಳಿಯ ಉತ್ತರ ಭಾಗವನ್ನು "ಉತ್ಕಲ ತೀರ" ಮತ್ತು ದಕ್ಷಿಣ ಭಾಗವನ್ನು "ಕೋರಮಂಡಲ ತೀರ" ವೆಂದು ಕರೆಯುತ್ತಾರೆ.
# ಪೂರ್ವ ಕರಾವಳಿಯಲ್ಲಿ ಕಾಣ ಬಹುದುದಾದ ಪ್ರಮುಖ ಬಂದರುಗಳು ಹೀಗಿವೆ : ಪಾರಾದೀಪ್, ಹಲ್ದಿಯಾ, ಕೋಲ್ಕತ್ತಾ, ವಿಶಾಖಪಟ್ಟಣ, ಚೆನ್ನೈ ಮತ್ತು ಟುಟಿಕಾರ್ನ್.
👉🏾ಪಶ್ಚಿಮ ಕರಾವಳಿ
# ಗುಜರಾತಿನ "ಕಛ್" ಪ್ರದೇಶದಿಂದ ಕನ್ಯಾಕುಮಾರಿ ಯವರೆಗೂ, ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಮಧ್ಯೆ ಹರಡಿದೆ.
# ಪಶ್ಚಿಮ ಕರಾವಳಿಯ ಉದ್ದ ಸುಮಾರು 1,500 ಕಿಲೋ ಮೀಟರ್ ನಷ್ಟಿದೆ.
# ಈ ಕರಾವಳಿ ಪ್ರದೇಶ ನೇರವಾಗಿ ರುವುದರಿಂದಲೂ, ವರ್ಷದ 6 ತಿಂಗಳು ಮಾನ್ಸೂನ್ ಮಾರುತಗಳಿಗೆ ಒಳಗಾಗುವುದರಿಂದ ಇಲ್ಲಿ ಸ್ವಾಭಾವಿಕ ಬಂದರುಗಳು ಕಡಿಮೆ ಪ್ರಮಾಣದಲ್ಲಿವೆ.
# ಪಶ್ಚಿಮ ಕರಾವಳಿಯನ್ನು ಮಲಬಾರ್ ತೀರ, ಕರ್ನಾಟಕ ಕರಾವಳಿ, ಕೊಂಕಣಿ ತೀರ, ಗುಜರಾತ್ ಕರಾವಳಿ, ಕಛ್ ಮತ್ತು ಕಾಟೇವಾಡ ಎಂಬ ಪರ್ಯಾಯ ದ್ವೀಪಗಳೆಂದು ವಿಭಾಗಿಸಲಾಗಿದೆ.
# ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗುಜರಾತ್".# ಅತಿ ಕಡಿಮೆ ಕರಾವಳಿ ಪ್ರದೇಶ ಹೊಂದಿರುವ ರಾಜ್ಯ "ಗೋವಾ".
# ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳು, ಮರ್ಮ ಗೋವಾ, ಕೊಚ್ಚಿ, ಕಾರವಾರ, ಮುಂಬಯಿ, ನವಶೇವ, ಮಂಗಳೂರು ಕಾಂಡ್ಲ .
✍ಕರಾವಳಿ ಪ್ರದೇಶದ ಉದ್ದ
👉🏾ರಾಜ್ಯಗಳು
👉🏾ಉದ್ದ
1. ಗುಜರಾತ್ ಕರಾವಳಿ ಉದ್ದ 1600 ಕಿ.ಮೀ
2. ಆಂಧ್ರಪ್ರದೇಶದ ಕರಾವಳಿ ಉದ್ದ 1000 ಕಿ.ಮೀ
3. ತಮಿಳುನಾಡು 910 ಕಿ.ಮೀ
4. ಮಹಾರಾಷ್ಟ್ರ 720 ಕಿ.ಮೀ
5. ಕೇರಳ 580 ಕಿ.ಮೀ
6. ಒರಿಸ್ಸಾ 480 ಕಿ.ಮೀ
7. ಪಶ್ಚಿಮ ಬಂಗಾಳ 350 ಕಿ.ಮೀ
8. ಕರ್ನಾಟಕ 320 ಕಿ.ಮೀ
9. ಗೋವಾ
👉🏾ಪೂರ್ವ ಕರಾವಳಿ ರಾಜ್ಯಗಳು :-
1.ಪಶ್ಚಿಮ ಬಂಗಾಳ
2.ಒರಿಸ್ಸಾ
3.ಆಂಧ್ರಪ್ರದೇಶ
4.ತಮಿಳುನಾಡು
👉🏾ಪಶ್ಚಿಮ ಕರಾವಳಿ ರಾಜ್ಯಗಳು :-
1.ಗುಜರಾತ್
2.ಮಹಾರಾಷ್ಟ್ರ
3.ಗೋವಾ
4.ಕರ್ನಾಟಕ
5.ಕೇರಳ
👉🏾ದ್ವೀಪಗಳು
# ಭಾರತಕ್ಕೆ ಸೇರಿದ 247ದ್ವೀಪಗಳಿವೆ.
# 247 ದ್ವೀಪಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
# ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
# ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.
3 Comments
Goudappa
ReplyDeleteತಮಿಳು ನಾಡಿನಲ್ಲಿ ಪಶ್ಚಿಮ ಕರಾವಳಿ ಇದೆ (ಕನ್ಯಾಕುಮಾರಿ)
ReplyDeleteಧನ್ಯವಾದಗಳು ಸರ್
ReplyDelete