---:::--ಭಾರತದಲ್ಲಿರುವ ಬಂದರುಗಳು---:::---
ಭಾರತದಲ್ಲಿ 14 ಬಂದರುಗಳಿದ್ದು
A) ಪಶ್ಚಿಮ ಕರಾವಳಿಯಲ್ಲಿ 6 ಬಂದರುಗಳು
B) ಪೂರ್ವ ಕರಾವಳಿಯಲ್ಲಿ 7 ಬಂದರುಗಳು
ದ್ವೀಪ ಬಂದರು 1.
A) ಪಶ್ಚಮ ಕರಾವಳಿಯ ಬಂದರುಗಳು --:--
1) ಕಾಂಡ್ಲಾ 1955 --::---
*ಸ್ವತಂತ್ರ ಭಾರತದ ಮೊದಲ ಬಂದರು. ಗುಜರಾತ್ ಕಛ್ ಕರಾವಳಿಯ ಅತೀ ದೊಡ್ಡ ಬಂದರು. 1955 ರಲ್ಲಿ ಘೋಷಣೆ.
2) ಮುಂಬೈ ಬಂದರು 1865 --::--
* ಭಾರತದ ಮೊದಲ ಸ್ವಾಭಾವಿಕ ಬಂದರು. ಬ್ರಿಟಿಷರ ಕಾಲದಲ್ಲಿ ಬೆಳೆವಣಿಗೆಯಾದ ಬಂದರು. " ಭಾರತದ ಹೆಬ್ಬಾಗಿಲು".
3) ನವಸೇನಾ 1982 --::--
* ಮುಂಬೈ ಬಂದರಿನ ಒತ್ತಡವನ್ನು ತಡೆಗಟ್ಟಲು ಸ್ಥಾಪನೆಯಾಗಿದ್ದು, ಇದಕ್ಕೆ " ಜವಹರಲಾಲ್ ನೆಹರು " ಎಂದು ನಾಮಕರಣ ಮಾಡಲಾಗಿದೆ. " WIFI CONECT " ಹೊಂದಿದ ಮೊದಲ ಬಂದರು.
4) ಮರ್ಮಗೋವಾ 1964 --::--
* ಭಾರತದ ಅತ್ಯಂತ ಚಿಕ್ಕ ಬಂದರು, ಗೋವಾ ರಾಜ್ಯದ ಅತಿ ದೊಡ್ಡ ಬಂದರು.ಅತೀ ಹೆಚ್ಚು ರಫ್ತು - ಕಬ್ಬಿಣ.
5) ನವಮಂಗಳೂರು 1974 ಮೇ 14 --::--
* ಇದನ್ನು " ಕರ್ನಾಟಕದ ಹೆಬ್ಬಾಗಿಲು" ಎನ್ನುವರು. ಅತೀ ಹೆಚ್ಚು ಕಾಫಿ ರಫ್ತು ಮಾಡುವುದರಿಂದ ಇದನ್ನು " ಕಾಫಿ ಬಂದರು " ಎನ್ನುವರು.
6) ಕೊಚ್ಚಿನ್ 1972 --::--
* " ಪಶ್ಚಿಮ ಕರಾವಳಿಯ ಕೊನೆಯ ಬಂದರು", "ಕೇರಳದ ಅತಿ ದೊಡ್ಡ ಬಂದರು" ಆಗಿದೆ. ಇದು ಅತೀ ಹೆಚ್ಚು ಮಸಾಲೆ ರಫ್ತು ಮಾಡುವುದರಿಂದ ಇದನ್ನು " ಮಸಾಲಿಯ ಬಂದರು " ಎನ್ನುವರು.
**** ಇದು ದೇಶದಲ್ಲಿಯೇ ಅತೀ ಸುಂದರವಾಗಿದ್ದರಿಂದ " ಅರಬ್ಬೀ ಸಮುದ್ರದ ರಾಣಿ " ಎನ್ನುವರು. ಇದರ ಪಕ್ಕದಲ್ಲಿ --ಕೊಲ್ಲಂ--ಬಂದರು ಕಂಡು ಬಂದು ಇದನ್ನು " ಅರಬ್ಬೀ ಸಮುದ್ರದ ರಾಜ " ಎನ್ನುವರು.
B) ಪೂರ್ವ ಕರಾವಳಿಯ ಬಂದರುಗಳು ---::---
7) ಟುಟುಕೋರಿನ್ ಬಂದರು --::--1978
* " ಪೂರ್ವ ಕರಾವಳಿಯ ಕೊನೆಯ ಬಂದರು ". ತಮಿಳುನಾಡಿನ ಕೋರಮಂಡಲ ತೀರದಲ್ಲಿ ಕಂಡು ಬಂದು ಈ ಬಂದರಿನ ಮೂಲಕ ಅತೀ ಹೆಚ್ಚು ಹವಳ ಮುತ್ತುಗಳು ರಫ್ತು ಮಾಡುವುದರಿಂದ " ಹವಳದ ಬಂದರು " ಎನ್ನುವರು.
8) ಚನೈ ಬಂದರು 1875 --::---
* " ದಕ್ಷಿಣ ಭಾರತದ ಹೆಬ್ಬಾಗಿಲು " ಇಲ್ಲಿ ಅತೀ ಹೆಚ್ಚು ಚರ್ಮ ರಫ್ತು ಮಾಡುವುದರಿಂದ ಇದನ್ನು " ಚರ್ಮದ ಬಂದರು " ಎನ್ನುವರು.
9) ಎನ್ನೋರ ಬಂದರು 2001 --::--
* " ಭಾರತ ದೇಶದ ಏಕೈಕ ಖಾಸಗಿ ಬಂದರು ". 2013 ರಲ್ಲಿ ಇದನ್ನು " ಕಾಮರಾಜ ಬಂದರು " ಎಂದು ನಾಮಕರಣ ಮಾಡಲಾಗಿದೆ. ಇದು ತಮಿಳುನಾಡಿನ ಬಂದರು.
10) ವಿಶಾಖ ಪಟ್ಟಣ 1933 --::--
* "ಭಾರತ ದೇಶದ ಅತ್ಯಂತ ಆಳವಾದ ಬಂದರು". "ಆಂಧ್ರಪ್ರದೇಶದ ಅತಿ ದೊಡ್ಡ ಬಂದರು". " ಪೂರ್ವ ಕರಾವಳಿಯ ಅತಿ ದೊಡ್ಡ ನೈಸರ್ಗಿಕ ಬಂದರು ". ಇಲ್ಲಿ ಅತೀ ಹೆಚ್ಚು ಸಿದ್ಧ ಹಡಗುಗಳನ್ನು ರಫ್ತು ಮಾಡಲಾಗುತ್ತದೆ.
* ಈ ಬಂದರಿನ ಪಕ್ಕದಲ್ಲಿ " ಗಂಗಾವರಂ " ಎಂಬ ಚಿಕ್ಕ ಬಂದರು ಕಂಡು ಬಂದು ಇದು " ಭಾರತ ದೇಶದಲ್ಲಿಯೇ ಅತ್ಯಂತ ಆಳವಾದ ಚಿಕ್ಕ ಬಂದರ "ವಾಗಿದೆ - ಆಳ - 21ಮೀ.
11) ಪಾರಾದೀಪ ಬಂದರು 1966 --::--
* "ಓಡಿಸ್ಸಾ ರಾಜ್ಯದ ಅತೀ ದೊಡ್ಡ ಬಂದರು". ರಫ್ತು - ಖನಿಜ ಸಂಪನ್ಮೂಲಗಳು.
12) ಕೊಲ್ಕತ್ತಾ ಬಂದರು --::--
* " ಭಾರತ ದೇಶದ ಏಕೈಕ ನದಿಯ ಬಂದರು ". ಔರಂಗಜೇಬನ ಕಾಲದಲ್ಲಿ ನಿರ್ಮಾಣ. ಅತೀ ಹೆಚ್ಚು ಚಹಾ ರಫ್ತು ಮಾಡುವುದರಿಂದ" ಚಹಾದ ಬಂದರು " & ಸೆಣಬು ರಫ್ತು ಮಾಡುವುದರಿಂದ " GOLDEN FIBER " ( ಬಂಗಾರದ ನಾರು) ಎನ್ನುವರು.
* ಇದನ್ನು " ಪೂರ್ವ ಭಾರತದ ಹೆಬ್ಬಾಗಿಲು " ಎನ್ನುವರು.
13) ಹಾಲ್ದಯಾ ಬಂದರು 1979 --::--
* ಕೊಲ್ಕತ್ತ ಬಂದರಿನ ಒತ್ತಡವನ್ನು ತಡೆಗಟ್ಟಲು ಈ ಬಂದರು ಸ್ಥಾಪನೆ ಮಾಡಿದ್ದು ಪ.ಬಂಗಾಳದಲ್ಲಿ ಇದೆ.
14) ಪೋರ್ಟಬ್ಲಯರ್ 2013--::---
* ಇದು " ಭಾರತದ ಏಕೈಕ ದ್ವೀಪ ಬಂದರು ". ಅತೀ ಹೆಚ್ಚು ರಫ್ತು - ರಬ್ಬರ್.
*** ಪಶ್ಚಿಮ ಕರಾವಳಿಯಲ್ಲಿರುವ ಎಲ್ಲಾ ಬಂದರು-
-ಸ್ವಾಭಾವಿಕ ಬಂದರುಗಳು.
* ಪೂರ್ವ ಕರಾವಳಿಯಲ್ಲಿರುವ ಎಲ್ಲಾ ಬಂದರು-
-ಕೃತಕ ಬಂದರುಗಳು ( ವಿಶಾಖ ಪಟ್ಟಣ ಹೊರತು ಪಡಿಸಿ).
5 Comments
Nice information thank you
ReplyDeleteSuperrrr
ReplyDeleteವಿಶ್ವದ ಕಾಫಿ ಬಂದರು ನಗರ ಯಾವ್ದು ಹೇಳ್ತೀರ
ReplyDeleteTqs sir
ReplyDeleteಧನ್ಯವಾದಗಳು ಗುರುಗಳೆ
ReplyDelete