ಪ್ರಥಮ ಪಿಯುಸಿ ಭೂಗೋಳಶಾಸ್ತ್ರ ಕ್ವಿಜ್

ವಿಷಯ :- ಭೂಗೋಳಶಾಸ್ತ್ರ.

ಸಂಗ್ರಹ :- ಪ್ರಥಮ ಪಿಯುಸಿ ಭೂಗೋಳಶಾಸ್ತ್ರ.

1) "ಭೂಗೋಳಶಾಸ್ತ್ರದ ಪಿತಾಮಹ" ಯಾರು?
* ಎರಟಾಸ್ತನಿಸ್.

2) "ಜಿಯೋಗ್ರಫಿ" ಯಾವ ಎರಡು ಪದಗಳಿಂದ ಬಂದಿದೆ?
* 'ಗ್ರೀಕ್' ಭಾಷೆಯ ಜಿಯೋ ಮತ್ತು ಗ್ರಪೋಸ್.

3) "ಎಲ್ಲಾ ವಿಜ್ಞಾನಗಳ ಮಾತೃ" ಎಂದು ಯಾವ ಶಾಸ್ತ್ರವನ್ನು ಕರೆಯುತ್ತಾರೆ?
* ಭೂಗೋಳಶಾಸ್ತ್ರ.

4) ಸೌರವ್ಯೂಹದ ಒಂದು ಸದಸ್ಯ ಗ್ರಹ ಯಾವುದು?
* ಭೂಮಿ.

5) "ಭೂಮಿಯು ಗೋಳಾಕಾರವಾಗಿದೆ" ಎಂಬುದನ್ನು ನಿರೂಪಿಸುವುದು ಯಾವ ಗ್ರಹಣ?
* ಚಂದ್ರಗ್ರಹಣ.

6) ಭೂಮಿ ಮತ್ತು ಅದರ ನಿವಾಸಿಗಳ ಬಗ್ಗೆ ತಿಳಿಸುವ ಭೂಗೋಳಶಾಸ್ತ್ರ ಯಾವುದು?
* ಆಧುನಿಕ ಭೂಗೋಳಶಾಸ್ತ್ರ.

7) 'ಭೂಪ್ರದಕ್ಷಿಣೆ'ಯನ್ನು ಪ್ರಥಮವಾಗಿ ಪೂರ್ಣಗೊಳಿಸಿದವರು ಯಾರು?
* ಫರ್ಡಿನೆಂಡ್ ಮೆಗಲನ್.

8) ಪ್ರಪಂಚದ ಮೊದಲ ನಕ್ಷೆಯನ್ನು ರಚಿಸಿದವರು ಯಾರು?
* ಎರಟಾಸ್ತನಿಸ್.

9) ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಎಷ್ಟು?
* 8850 ಮೀ.

10) "ನಿಕೋಲಸ್ ಕೊಪರ್ನಿಕಸ್" ಯಾವ ದೇಶದ ಖಗೋಳಶಾಸ್ತ್ರಜ್ಞ?
* ಪೋಲ್ಯಾಂಡ್.

11) ಭೂಮಿಯು ಸೂರ್ಯನ ಹತ್ತಿರದಲ್ಲಿ ಕಂಡು ಬರುವ ದಿನ ಯಾವುದು?
* ಜನವರಿ 3.

12) ಬೇಸಿಗೆ ಕಾಲದ ಅವಧಿ ತಿಳಿಸಿ?
* ಜೂನ್ 21 ರಿಂದ ಸೆಪ್ಟೆಂಬರ್ 22 ರವರೆಗೆ.

13) "ಮಧ್ಯರಾತ್ರಿಯ ಸೂರ್ಯನ ನಾಡು" ಯಾವುದು?
* ನಾರ್ವೆ.

14) ಭೂಮಿಯ ಹೊರ ಪದರಕ್ಕೆ ------- ಎಂದು ಕರೆಯುತ್ತಾರೆ?
* ಭೂಕವಚ.

15) ಭೂಮಿಯ ಅಂತರಾಳದ ಅತ್ಯಂತ ಒಳಪದರು ಯಾವುದು?
* ಕೇಂದ್ರಗೋಳ.

16) "ಕೊಲಾಬಾ" ಭೂಕಂಪ ದಾಖಲು ಕೇಂದ್ರ ಯಾವ ರಾಜ್ಯದಲ್ಲಿದೆ?
* ಮಹಾರಾಷ್ಟ್ರ.

17) ಎಲ್ ಡಬ್ಲ್ಯೂ ಅಲೆಗಳು ಅಂದರೆ ಯಾವು?
* ಮೇಲ್ಮೈ ಅಲೆಗಳು.

18) ಜ್ವಾಲಮುಖಿಯ ವಸ್ತುಗಳು ಹೊರ ಹರಿಯುವ ಭೂಕವಚದಲ್ಲಿನ ರಂಧ್ರ ಪ್ರದೇಶಕ್ಕೆ ---- ಎನ್ನುವರು?
* ನಾಳ.

19) "ಬ್ಯಾರನ್ ದ್ವೀಪ'' ಎಲ್ಲಿದೆ?
* ಅಂಡಮಾನ್ ಮತ್ತು ನಿಕೊಬಾರ್.

20) "ಬಸಾಲ್ಟ್" ಯಾವ ಅಗ್ನಿಶಿಲೆಗೆ ಉದಾಹರಣೆ?
* ಬಹಿಸ್ಸರಣ ಅಗ್ನಿಶಿಲೆಗಳಿಗೆ.

21) ಜಿಯೋ ಮತ್ತು ಗ್ರಪೋಸ್ ಎಂದರೆ -----.
* ಜಿಯೋ - ಭೂಮಿ,
ಗ್ರಪೋಸ್ - ಅಧ್ಯಯನ/ವಿವರಣೆ.

22) ಮೊಟ್ಟ ಮೊದಲಿಗೆ ಭೂಅಕ್ಷದ ಓಲುವಿಕೆಯನ್ನು ಲೆಕ್ಕಾಚಾರ ಹಾಕಿ ತಿಳಿಸಿದವನು ಯಾರು?
* ಎರಟಾಸ್ತನಿಸ್.

23) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ 22 ರಿಂದ ಮಾರ್ಚ್ 20 ರವರೆಗೆ.

24) "ಕಾನ್ರಾಡ್ ಸಿಮಾವಲಯ" ಯಾವ ಪದರಗಳ ನಡುವೆ ಕಂಡು ಬರುತ್ತದೆ?
* ಸಿಯಾಲ್ ಮತ್ತು ಸೀಮಾ ಪದರಗಳ ನಡುವೆ.

25) ನಿಕ್ಕಲ್ ಮತ್ತು ಕಬ್ಬಿಣ ವಸ್ತುಗಳು ಪ್ರಧಾನವಾಗಿದ್ದು ಯಾವ ಗೋಳದಲ್ಲಿ?
* ಕೇಂದ್ರಗೋಳದಲ್ಲಿ.

26) ಭೂಕಂಪಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವದನ್ನು ------ ಎಂದು ಕರೆಯುವರು?
* ಭೂಕಂಪಶಾಸ್ತ್ರ/ಸಿಸ್ಮೋಲಜಿ.

27) 26-12-2004 ರಲ್ಲಿ "ಬಂಡಾ ಏಚ್ ಸುನಾಮಿ" ಸಂಭವಿಸಿದ್ದು ಯಾವ ರಾಷ್ಟ್ರದಲ್ಲಿ?
* ಇಂಡೋನೇಷಿಯಾ.

28) ದ್ವಿತೀಯ ಅಲೆಗಳನ್ನು ಏನೆಂದು ಕರೆಯುವರು?
* ಅಡ್ಡಅಲೆಗಳು / ಕುಲುಕು ಅಲೆಗಳೆಂದು.

29) ಇಂಡೋನೇಷಿಯಾದ "ಕ್ರಕಟೋವ ಪರ್ವತ" ಜ್ವಾಲಮುಖಿಯು ಯಾವ ಜ್ವಾಲಮುಖಿಗೆ ಉದಾಹರಣೆ?
* ಸುಪ್ತ ಜ್ವಾಲಮುಖಿಗೆ.

30) "ಕೋಟಪಾಕ್ಷಿ" ಜಾಗೃತ ಜ್ವಾಲಮುಖಿ ಯಾವ ರಾಷ್ಟ್ರದ್ದು?
* ಈಕ್ವೆಡಾರ್.

31) ಜಗತ್ತಿನ ಅತಿ ಹೆಚ್ಚು ಜ್ವಾಲಮುಖಿಗಳು ಯಾವ ವಲಯದಲ್ಲಿ ದಾಖಲಾಗಿವೆ?
* ಫೆಸಿಫಿಕ್ ಸಾಗರದ ಸುತ್ತಲಿನ ವಲಯ.

32) ಜಿಪ್ಸಂ ಯಾವ ಕಣಶಿಲೆಗಳಿಗೆ ಉದಾಹರಣೆ?
* ರಾಸಾಯನಿಕವಾಗಿ ಉಂಟಾದ ಕಣಶಿಲೆಗಳಿಗೆ.

33) "ಫರ್ಡಿನೆಂಡ್ ಮೆಗಲನ್" ಯಾವ ದೇಶದ ಅನ್ವೇಷಣೆಕಾರ?
* ಪೋರ್ಚುಗೀಸ್.

34) ಮೊಟ್ಟ ಮೊದಲಿಗೆ "ಭೂಗೋಳಶಾಸ್ತ್ರ" (ಜಿಯೋಗ್ರಫಿ) ಪದವನ್ನು ಬಳಸಿದವನು ಯಾರು?
* ಎರಟಾಸ್ತನಿಸ್.

35) ಭೂಮಿಯ ಮೇಲಿನ ಅತ್ಯಂತ ತಗ್ಗಾದ ಭಾಗ ಯಾವುದು?
* ಮೃತ ಸಮುದ್ರ (ಸಮುದ್ರ ಮಟ್ಟದಿಂದ 400 ಮೀ ಆಳ).

36) "ಮೃತ ಸಮುದ್ರ" ಕಂಡು ಬರುವುದು ಯಾವ ಖಂಡದಲ್ಲಿ?
* ಏಷ್ಯಾ.

37) ಭೂಮಿಯು ತನ್ನ ಅಕ್ಷದ ಸುತ್ತಲೂ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವದನ್ನು ----- ಎನ್ನುವರು?
* ಭೂ ಅಕ್ಷಭ್ರಮಣ / ದೈನಂದಿನ ಚಲನೆ.

38) ಶರತ್ಕಾಲದ ಅವಧಿ ತಿಳಿಸಿರಿ?
* ಸೆಪ್ಟೆಂಬರ್ 23 ರಿಂದ ಡಿಸೆಂಬರ್ 21 ರವರೆಗೆ.

39) ಭೂ ಅಂತರಾಳದಲ್ಲಿನ ಕವಚದ ಒಳಭಾಗವನ್ನು ---- ಎಂದು ಕರೆಯುವರು?
* ಮ್ಯಾಂಟಲ್.

40) ಸಾಗರೀಕ ಕವಚವು ಅಧಿಕವಾಗಿ ಸಿಲಿಕ ಮತ್ತು ಮ್ಯಾಗ್ನೀಷಿಯಂ ಅಂಶಗಳನ್ನು ಒಳಗೊಂಡಿರುವುದರಿಂದ ---- ಎಂದು ಕರೆಯಲಾಗಿದೆ?
* ಸೀಮಾ.

41) ಜಗತ್ತಿನ ಅತ್ಯಂತ ಆಳವಾದ ಗಣಿ ಯಾವುದು?
* ಟೌ ಟೋನ ಗಣಿ (3.9 ಕಿ.ಮೀ ಆಳ) (ಆಫ್ರಿಕಾ).

42) 'ಸುನಾಮಿ'ಯ ಅರ್ಥ ತಿಳಿಸಿರಿ?
* ಸು - ಬಂದರು,
  ನಾಮಿ - ಅಲೆ ಎಂದರ್ಥ.

Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)