ಭಾರತದ ನದಿಗಳು

★ ಭಾರತದ ಪ್ರಾಕೃತಿಕ ಭೂಗೋಳ.
(Indian Physical Geography)

★ ಭಾರತದ ನದಿಗಳು
(Indian Drainage System)

ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ಅತ್ಯುಪಯುಕ್ತವೆಂದೆನಿಸಿದ ಭೌಗೋಳಿಕವಾಗಿ ಪ್ರಮುಖವೆಂದೆನಿಸಿದ ಭಾರತದ ಕೆಲವು ನದಿಗಳು ಹಾಗೂ ಅವುಗಳ ವಿಶೇಷತೆಗಳೊಂದಿಗೆ  ವಿವರಿಸಲು ಪ್ರಯತ್ನಿಸಲಾಗಿದ್ದು, ಏನಾದರೂ ತಪ್ಪುತಡಿಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.

★ ದಕ್ಷಿಣ ಭಾರತದ ನದಿಗಳು :

1.ನದಿ :— ಕೃಷ್ಣಾ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು
●.ವಿಶೇಷತೆಗಳು : —
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.

2..ನದಿ :— ನರ್ಮದಾ (ರೇವಾ) (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)
●.ವ್ಯಾಪ್ತಿ ರಾಜ್ಯಗಳು :— ಮಧ್ಯ ಪ್ರದೇಶ, ಮಹಾರಾಷ್ಟ್ರ ಗುಜರಾತ್
●.ಪ್ರಮುಖ ಉಪನದಿಗಳು :— ಶೇರ್, ಶಕ್ಕರ್, ದುಧಿ, ತವಾ, ಹಿರನ್, ಬರ್ನ, ಚೊರಲ್, ಕರಮ್
●.ಪ್ರಮುಖ ಅಣೆಕಟ್ಟುಗಳು :— ಸರ್ದಾರ್ ಸರೋವರ್ (ಗುಜರಾತ್), ನರ್ಮದಾ ಸಾಗರ್ (ಮಧ್ಯಪ್ರದೇಶ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕನ್ಹಾ ರಾಷ್ಟ್ರೀಯ ಉದ್ಯಾನ (ಸುರ್ಪನ್ ನದಿ)
●.ವಿಶೇಷತೆಗಳು :—
1. ಭಾರತೀಯ ಉಪಖಂಡದಲ್ಲಿ ಹರಿಯುವ 5ನೇ ಉದ್ದದ ನದಿ.
2.ಇದು ಪಶ್ಚಿಮಕ್ಕೆ ಹರಿಯುವ ಉದ್ದವಾದ ನದಿಗಳಲ್ಲಿ 1ನೇಯದು.
3.ಇದು ಕಪಿಲಧಾರ್, ಧರ್ದಿ ಮತ್ತು ಧುವಂಧರ್ ಗಳೆಂಬ ಮೂರು ಜಲಪಾತಗಳನ್ನು ಹೊಂದಿದೆ.
4. 'ಅಲಿಯಾಬೆಟ್' ಎಂಬುವುದು ನರ್ಮದಾ ನದಿ ನಿರ್ಮಿತ ದ್ವೀಪಗಳಲ್ಲಿ ಅತಿದೊಡ್ಡ ದ್ವೀಪ.

3.ನದಿ :— ಮಹಾನದಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ನಗರಿ ಟೌನ್, ಛತ್ತೀಸ್ ಗಢ.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ (ಒಡಿಶಾ)
●.ವ್ಯಾಪ್ತಿ ರಾಜ್ಯಗಳು :— ಛತ್ತೀಸ್ ಗಢ, ಒಡಿಶಾ
●.ಪ್ರಮುಖ ಉಪನದಿಗಳು :— ಸೆಯೊನಾಥ್, ಹಸ್ಡೆಯೋ, ಜೋಂಕ್, ಇಬ್, ಓಂಗ್, ಮಂಡ್, ಟೆಲೆನ್, ಸುವರ್ಣರೇಖಾ.
●.ಪ್ರಮುಖ ಅಣೆಕಟ್ಟುಗಳು :— ಹಿರಾಕುಡ್ ಅಣೆಕಟ್ಟು (ದೊಡ್ಡ ಅಣೆಕಟ್ಟು), ತಿಕ್ಕರಪಾರಾ ಅಣೆಕಟ್ಟು, ನಾರಾಜು ಅಣೆಕಟ್ಟು.

4.ನದಿ :— ಕಾವೇರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಕೊಡಗು, ಕರ್ನಾಟಕ.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳುನಾಡು
●.ಪ್ರಮುಖ ಉಪನದಿಗಳು :— ಅಮರಾವತಿ, ಹಾರಂಗಿ,, ಲೋಕಪಾವನಿ, ಅರ್ಕಾವತಿ, ಲಕ್ಷಣತೀರ್ಥ, ಕಪಿಲಾ,, ಶಿಂಷಾ, ಹೇಮಾವತಿ, ನೋಯಲ್ , ಕಬಿನಿ, ಸುವರ್ಣಾವತಿ, ಭವಾನಿ ಮತ್ತು ಅಮರಾವತಿ.
●.ಪ್ರಮುಖ ಅಣೆಕಟ್ಟುಗಳು :— ಕೃಷ್ಣ ರಾಜ ಸಾಗರ ಅಣೆಕಟ್ಟು, ಮೆಟ್ಟೂರ್ ಅಣೆಕಟ್ಟು, ಬನಸುರಾ ಸಾಗರ ಅಣೆಕಟ್ಟು (ಕಬಿನಿ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಮುದುಮಲೈ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ), ಬಂಡೀಪುರ ರಾಷ್ಟ್ರೀಯ ಉದ್ಯಾನ (ಮೊಯರ್ ನದಿ)
●.ವಿಶೇಷತೆಗಳು :—
1. ಇದನ್ನು 'ದಕ್ಷಿಣದ ಗಂಗೆ' ಎಂದು ಕರೆಯುವರು.
2.(ಶಿವನಸಮುದ್ರಂ) ಗಗನಚುಕ್ಕಿ ಮತ್ತು ಭರಚುಕ್ಕಿ, ಚುಂಚನಕಟ್ಡೆ ಮತ್ತು ಹೊಗೇನಕಲ್ ಜಲಪಾತಗಳನ್ನು ಹೊಂದಿದೆ.
3. ಇದು ಮೂರು ಅಂತರ್ ನದಿ ದ್ವೀಪಗಳನ್ನು ಒಳಗೊಂಡಿದೆ.
1)ಶ್ರೀರಂಗಪಟ್ಟಣ 2)ಶಿವನಸಮುದ್ರಂ 3) ಶ್ರೀರಂಗ.

5.ನದಿ :— ಗೋದಾವರಿ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ತ್ರಿಯಂಬಕ್, ನಾಸಿಕ್
●.ಕೊನೆಗೆ ಸೇರುವ ಪ್ರದೇಶ :— ಆಂಧ್ರಪ್ರದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ, ಛತ್ತೀಸ್ಗಢ
●.ಪ್ರಮುಖ ಉಪನದಿಗಳು :— ಪೂರ್ಣಾ, ಪ್ರವರ, ಇಂದ್ರಾವತಿ, ಮಂಜೀರಾ, ಬಿಂದುಸಾರ, ಶಬರಿ, ವಾರ್ಧಾ, ವೇನ್ ಗಾಂಗಾ
●.ಪ್ರಮುಖ ಅಣೆಕಟ್ಟುಗಳು :— ಜಯಕ್ವಾಡಿ ಅಣೆಕಟ್ಟು , ಪೊಲಾವರಮ್ ಪ್ರಾಜೆಕ್ಟ್
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●.ವಿಶೇಷತೆಗಳು :—
1. ಸಂಪೂರ್ಣವಾಗಿ ಭಾರತದೊಳಗೆ ಹರಿಯುವ ಉದ್ದವಾದ ನದಿಗಳಲ್ಲಿ ಮೊದಲನೆಯದು.
2.ದಕ್ಷಿಣ ಭಾರತದ ಅತಿ ಉದ್ದವಾದ ನದಿ
3.ದಕ್ಷಿಣ ಭಾರತದ ವೃದ್ಧ ನದಿ.

6.ನದಿ :— ತಪತಿ (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)

●.ನದಿಯ ಉಗಮ ಸ್ಥಾನ :— ಬೇತುಲ್, ಮಧ್ಯಪ್ರದೇಶ
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ (ಗುಜರಾತ್)
●.ವ್ಯಾಪ್ತಿ ರಾಜ್ಯಗಳು :— ಮಧ್ಯಪ್ರದೇಶ, ಗುಜರಾತ್
●.ಪ್ರಮುಖ ಉಪನದಿಗಳು :—ಪೂರ್ಣ, ಬೆಟುಲ್, ಗುಲಿ, ಬೊಕಾರ್, ಗಂಜಾಲ್, ದತ್ ಗಂಜ್, ಬೊಕಾಡ್, ಮಿಂಡೊಲಾ, ಗಿರ್ಣ, ಪಂಝರಾ, ವಾಘೂರ್, ಬೋರಿ, ಆನೆರ್.
●.ಪ್ರಮುಖ ಅಣೆಕಟ್ಟುಗಳು :— ಊಕಾಯಿ ಅಣೆಕಟ್ಟು, ಹಥನೂರ್ ಅಣೆಕಟ್ಟು (ಮಹಾರಾಷ್ಟ್ರ),

Post a Comment

0 Comments