ಭಾರತದ ಅರಣ್ಯಗಳು (GEO)

ಭಾರತದ ಅರಣ್ಯಗಳು (GEO)

ಮುಖ್ಯಾಂಶಗಳು:
• ಅಸ್ಸಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರವು ನಿತ್ಯ ಹರಿದ್ವರ್ಣ ಅರಣ್ಯ ಆಗಿದೆ.
• ಹಿಮಾಲಯದಲ್ಲಿ ಅಲ್ಫೈನ್ ಅರಣ್ಯಗಳು ಕಂಡುಬರುತ್ತವೆ.
• ಗಂಗಾನದಿ ಮುಖಜ ಭೂಮಿಯನ್ನು ಸುಂದರಬನ ಎಂದು ಕರೆಯುತ್ತಾರೆ.
• ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಕರ್ನಾಟಕ ರಾಜ್ಯದಲ್ಲಿದೆ.
• ಸುಂದರಬನ್ ಎಂದು ಕರೆಯಲು ಸುಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣ್ಯ ಪ್ರದೇಶದ ಹಂಚಿಕೆಯಲ್ಲಿ ಮಧ್ಯಪ್ರದೇಶ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ,
• ಹರಿಯಾಣ ರಾಜ್ಯವು ಕೊನೆ ಸ್ಥಾನದಲ್ಲಿದ್ದು, ಕರ್ನಾಟಕವು 13ನೇ ಸ್ಥಾನದಲ್ಲಿದೆ.
• ಭಾರತದಲ್ಲಿ ಇಂದು 523 ವನ್ಯಜೀವಿ ಧಾಮಗಳಿವೆ.
• ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್.
• ಜೀವವ್ಯವಸ್ಥೆಯನ್ನು ಕಾಪಾಡಲು ದೇಶದಲ್ಲಿ 18 ಜೈವಿಕ ವಲಯಗಳನ್ನು ಸಂರಕ್ಷಿಸಲಾಗಿದೆ.
• ದೇಶದಲ್ಲಿ ಪ್ರಥಮ ಜೈವಿಕ ಸಂರಕ್ಷಣಾ ವಲಯ ನೀಲಗಿರಿ ಸಂರಕ್ಷಣಾ ವಲಯ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತವು ಹೊಂದಿರುವ ಅರಣ್ಯ ಪ್ರದೇಶಗ¼ಇμಂಂಔ?
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ.(69.0 ದ.ಲ.ಹೇ.) ಅಂದರೇ ಭೌಗೋಳಿಕ ಕ್ಷೇತ್ರದ ಶೇ. 21.02  ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.

2. ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸಿ.
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು : ಬಂಡಿಪುರ, ನಾಗರಹೊಳೆ, ಬನ್ನೇರುಘಟ್ಟ.

3. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲಾ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.

4. ಭಾರತದ ಸಸ್ಯವರ್ಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?
• ಭಾರತದ ಸಸ್ಯವರ್ಗವನ್ನು ಆರು ವಿಧಗಳಾಗಿ ವಿಂಗಡಿಸಬಹುದು.
• 1. ಉಷ್ಟವಲಯದ ನಿತ್ಯ ಹರಿದ್ವರ್ಣ ಕಾಡುಗಳು
2. ಉಷ್ಟವಲಯದ ಎಲೆ ಉದುರುವಕಾಡುಗಳು
3. ಉಷ್ಟವಲಯದ ಮುಳ್ಳುಗಿಡಗಳು ಮತ್ತು ಪೊದೆಗಳು
4. ಮರುಭೂಮಿ ಸಸ್ಯವರ್ಗ
5. ಮ್ಯಾಂಗ್ರೋವ್ ಕಾಡುಗಳು
6. ಹಿಮಾಲಯ ಸಸ್ಯವರ್ಗ

5. ಜೈವಿಕ ವೈವಿದ್ಯತೆ ಎಂದರೇನು?
ಭಾರತದಲ್ಲಿ ವೈವಿಧ್ಯಮಯವಾದ ಭೂಸ್ವರೂಪ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಕ್ಕೆ ಅನುಗುಣವಾಗಿ ಇಲ್ಲಿನ ಪ್ರಾಣಿವರ್ಗ ಮತ್ತು ಪಕ್ಷಿಸಂಕುಲಗಳೂ ವೈವಿಧ್ಯಮಯವಾಗಿವೆ.
ಆದ್ದರಿಂದ ಇದನ್ನು ಜೈವಿಕ ವೈವಿದ್ಯತೆ ಎನ್ನುತ್ತಾರೆ.

6. ದೇಶದಲ್ಲಿ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಯೇನು? ಅಥವಾ
ಅರಣ್ಯ ಸಂರಕ್ಷಣೆ ಎಂದರೇನು? ಸಂರಕ್ಷಣಾ ವಿಧಾನಗಳನ್ನು ತಿಳಿಸಿ.
     ಅರಣ್ಯಗಳನ್ನು ಮಾನವ, ಪ್ರಾಣಿಗಳಿಂದ ಹಾಗೂ ನೈಸರ್ಗಿಕ ವಿಪತ್ತುಗಳಿಂದ ಕಾಪಾಡುವದನ್ನೇ ಅರಣ್ಯ ಸಂರಕ್ಷಣೆ ಎಂದು ಕರೆಯುವರು.
ಅರಣ್ಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು
• ಅರಣ್ಯದ ಮರಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸುವದು.
• ಸಸಿಗಳನ್ನು ನೆಡುವದು, ಬೀಜಗಳನ್ನು ಹರಡುವದು.
• ಕಾನೂನು ಬಾಹಿರವಾಗಿ ಮರ ಕಡಿಯುವದನ್ನು ನಿಯಂತ್ರಿಸುವದು.
• ಸಾರ್ವಜನಿಕರನ್ನು ಮರ ನೆಡಲು ಪ್ರೋತ್ಸಾಹಿಸುವದು.
• ಅರಣ್ಯಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸುವದನ್ನು ನಿಯಂತ್ರಿಸುವದು.
• ಅರಣ್ಯಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ನೀಡಿ ರಕ್ಷಣೆಗೆ ಪ್ರೇರೇಪಿಸುವದು.

7. ಭಾರತದಲ್ಲಿ ಎಲೆ ಉದುರುವ ಅರಣ್ಯಗಳ ಲಕ್ಷಣ ಮತ್ತು
ಹಂಚಿಕೆಯನ್ನು ತಿಳಿಸಿ.
• ವಾರ್ಷಿಕ ಸರಾಸರಿ 75 ರಿಂದ 250 ಸೆಂ.ಮೀ. ಮಳೆ ಬೀಳುವ ಕಡೆಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ.
• ಈ ಕಾಡುಗಳಲ್ಲಿ ಮರಗಳು ವಿರಳವಾಗಿಯೂ, ಕಡಿಮೆ ಎತ್ತರವಾಗಿಯೂ ಬೆಳೆದಿರುತ್ತವೆ.
• ಬೇಸಿಗೆಯ ಆರಂಭದಲ್ಲಿ ಈ ಮರಗಳ ಎಲೆಗಳು ಉದುರುತ್ತವೆ.
• ಬೆಲೆ ಬಾಳುವ ತೇಗ, ಸಾಲ, ಶ್ರೀಗಂಧ ಮರಗಳು ಹೆಚ್ಚಾಗಿ ಕಂಡುಬರುತ್ತವೆ.
• ಇವು ಪಶ್ಚಿಮ ಘಟ್ಟದ ಪೂರ್ವದ ಇಳಿಜಾರು, ಜಮ್ಮು & ಕಾಶ್ಮೀರ, ಬಂಗಾಳ, ಛತ್ತೀಸಘಡ್,
• ಒರಿಸ್ಸಾ, ಬಿಹಾರ & ಝಾರ್ಖಂಡ್‍ಗಳಲ್ಲಿ ಕಂಡುಬರುತ್ತವೆ.

8. ಭಾರತದಲ್ಲಿ ನಿತ್ಯಹರಿದ್ವರ್ಣ ಕಾಡುಗಳ ಲಕ್ಷಣ ಮತ್ತು ಹಂಚಿಕೆಯನ್ನು ತಿಳಿಸಿ.
• ಈ ಸಸ್ಯವರ್ಗವು ವರ್ಷದಲ್ಲಿ 250 ಸೇಂ.ಮೀ.ಗಿಂತ ಹೆಚ್ಚು ಮಳೆ ಬೀಳುವ ಮತ್ತು 25’ರಿಂದ
• 27’ಸೆ. ಉಷ್ಣಾಂಶವಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
• ಇಲ್ಲಿನ ಮರಗಳು 60 ಮೀಟರ ಎತ್ತರವಾಗಿ ಬೆಳೆದಿರುತ್ತವೆ.
• ಇಲ್ಲಿನ ಮುಖ್ಯ ಮರಗಳೆಂದರೆ ಎಬೋನಿ, ಮಹಾಗನಿ, ಕರಿಮರ, ಬಿದಿರು ಮತ್ತು ರಬ್ಬರ
• ಭಾರತದಲ್ಲಿ ಈ ಕಾಡುಗಳು ಪಶ್ಚಿಮ ಘಟ್ಟದ ಪಶ್ಚಿಮ ಭಾಗ, ಈಶಾನ್ಯ ಬೆಟ್ಟ ಗುಡ್ಡಗಳಪ್ರದೇಶ, ಅಂಡಮಾನ್ ಮತ್ತು ನಿಕೋಬಾರ ದ್ವೀಪಗಲ್ಲಿ ಕಂಡು ಬರುತ್ತವೆ.

8. ಮಾನ್ಸೂನ್ ಕಾಡುಗಳು ಮತ್ತು ಮಾನ್‍ಗ್ರೋವ್ ಕಾಡುಗಳಲ್ಲಿ
ಕಂಡುಬರುವ ವ್ಯತ್ಯಾಸಗಳೇನು?
    ಮಾನ್ಸೂನ್ ಕಾಡುಗಳು 75 ರಿಂದ 250 ಸೆಂ.ಮೀ. ಮಳೆ
    ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಬೇಸಿಗೆ ಆರಂಭದಲ್ಲಿ
    ಈ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ. ಆದರೆ
    ಮ್ಯಾನ್‍ಗ್ರೋವ್ ಅರಣ್ಯಗಳು ತೀರ ಪ್ರದೇಶಗಳ
    ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ
    ಆವರಿಸಲ್ಪಡುತ್ತವೆ. ಈ ಕಾಡುಗಳು ನದಿಮುಖಜ ಮತ್ತು ನದಿ
    ಅಳಿವೆಗಳ ತಗ್ಗು ಪ್ರದೇಶಗಳಲಿ ಕಂಡುಬರುತ್ತವೆ.

10. ಸುಂದರಬನ್ಸ ಎಂದರೇನು?
    ಗಂಗಾನದಿಯ ಮುಖಜಭೂಮಿಯಲ್ಲಿ ಸುಂದರಿ ಮರಗಳು ಅಧಿಕವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ಸ ಕಾಡುಗಳು ಎಂದು ಕರೆಯುತ್ತಾರೆ.

11. ಅರಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ.
• ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಗಿಡಮೂಲಿಕೆಗಳು, ಪಶುಗಳಿಗೆ ಆಹಾರವನ್ನು ಒದಗಿಸುತ್ತವೆ.
• ಕಾಡುಗಳು ತೇವಾಂಶವನ್ನು ಪೂರೈಸಿ ಉμಂUಂ�}Àವನ್ನು ಮಾರ್ಪಡಿಸುತ್ತವೆ.
• ತೇವಾಂಶವುಳ್ಳ ಮಾರುತಗಳನ್ನು ತಡೆದು ಮಳೆ ಬೀಳುವದಕ್ಕೆ ನೆರವಾಗುತ್ತವೆ.
• ಕಾಡುಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತವೆ.
• ಕಾಡುಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿವೆ.
• ಕಾಡುಗಳು ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತವೆ.
• ವನ್ಯಧಾಮಗಳನ್ನೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments