ಜಲ ಸಂಪನ್ಮೂಲಗಳು

ಜಲ ಸಂಪನ್ಮೂಲಗಳು (GEO)

ಮುಖ್ಯಾಂಶಗಳು:
• ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಬಿಹಾರದ ಕಣ್ಣೀರಿನ ನದಿ ಕೋಸಿ ನದಿ.
• ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆ.
• ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ವಿದ್ಯುಚ್ಛಕ್ತಿ ಯೋಜನೆಯನ್ನು ನಿರ್ಮಿಸಲಾಗಿದೆ.
• ಹಿರಾಕುಡ್ ಯೋಜನೆಯನ್ನು ಮಹಾನದಿಗೆ ನಿರ್ಮಿಸಲಾಗಿದೆ.
• ದಾಮೋದರ ನದಿ ಕಣಿವೆ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದೋದ್ದೇಶನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಭಾಕ್ರಾ ನಂಗಲ್  : ಗೋವಿಂದ ಸಾಗರ : : ತುಂಗಭದ್ರಾ : ಪಂಪಸಾಗರ.
• ಮಹಾನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.
• ಹಿರಾಕುಡ್ ಆಣೆಕಟ್ಟು ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟಾಗಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ನೀರಾವರಿ ಎಂದರೇನು? ನೀರಾವರಿಯ ವಿಧಗಳಾವವು?
  ನೀರಾವರಿ ಎಂದರೆ ವ್ಯವಸಾಯ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ & ಕರೆಗಳಿಂದ ನೀರು ಸರಬರಾಜು ಮಾಡುವುದಾಗಿದೆ.
ನೀರಾವರಿಯ ವಿಧಗಳು - ಬಾವಿ ನೀರಾವರಿ, ಕಾಲುವೆ ನೀರಾವರಿ & ಕೆರೆ ನೀರಾವರಿ

2. ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದರೇನು? ಅದರ
   ಉದ್ದೇಶಗಳಾವವು?
   ವ್ಯವಸಾಯಕ್ಕೆ ನೀರನ್ನು ಒದಗಿಸುವದಲ್ಲದೆ ಜಲಸಂಪತ್ತಿನ ಗರಿಷ್ಟ ಪ್ರಮಾಣದ ಉಪಯೋಗಕ್ಕಾಗಿ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ರೂಪಿಸಿದ ಯೋಜನೆಯನ್ನು ವಿವಿದೋದ್ದೇಶ ನದಿ ಕಣಿವೆ ಯೋಜನೆ ಎಂದು ಕರೆಯುತ್ತಾರೆ.
ವಿವಿದೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳು
• ನೀರಾವರಿ ಸೌಲಭ್ಯವನ್ನು ಒದಗಿಸುವದು.
• ಜಲವಿದ್ಯುಚ್ಛಕ್ತಿ ಉತ್ಪಾದಿಸುವದು.
• ನದಿಗಳ ಪ್ರವಾಹಗಳನ್ನು ನಿಯಂತ್ರಿಸುವದು.
• ನೌಕಾಯಾನದ ಸೌಲಭ್ಯವನ್ನು ಒದಗಿಸುವದು.
• ಗೃಹಬಳಕೆ ಹಾಗೂ ಕೈಗಾರಿಕೆಗಳಿಗೆ ನೀರನ್ನು ಒದಗಿಸುವದು.
• ಮಣ್ಣಿನ ಸವಕಳಿಯನ್ನು ನಿಯಂತ್ರಿಸುವದು.
• ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.
• ಅರಣ್ಯ ಸಂಪತ್ತನ್ನು ವೃದ್ಧಿಸುವದು.

3. ಸರ್ವಕಾಲಿಕ ಕಾಲುವೆ ಎಂದರೇನು?
   ನದಿಗಳಿಗೆ ಆಣೆಕಟ್ಟನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸಿ, ಕೃಷಿ ಭೂಮಿಗೆ ನೀರನ್ನೊದಗಿಸಲು ತೋಡುವ ಕಾಲುವೆಗಳಿಗೆ ‘ಸರ್ವಕಾಲಿಕ ಕಾಲುವೆ’ಗಳೆಂದು ಕರೆಯುವರು.

4. ಭಾಕ್ರಾನಂಗಲ್ ಯೋಜನೆಯನ್ನು ಕುರಿತು ಬರೆಯಿರಿ.
• ಭಾಕ್ರಾ ನಂಗಲ್ ಯೋಜನೆಯು ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಹಿಮಾಚಲ ಪ್ರದೇಶದ ಭಾಕ್ರಾ & ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ.
• ಹಿಮಾಚಲ ಪ್ರದೇಶ & ದೆಹಲಿಗಳು ನೀರಾವರಿ & ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆಯುತ್ತವೆ.
• ಈ ಜಲಾಶಯವನ್ನು ಗೋವಿಂದಸಾಗರ ಎಂದು ಕರೆಯುತ್ತಾರೆ.

5. ಮಳೆಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಇಂದು ಕಡ್ಡಾಯವಾಗಿದೆ. ಏಕೆ?
• ಭಾರತದಲ್ಲಿ ಜಲಸಂಪತ್ತು ಅಪಾರ ಪ್ರಮಾಣದಲ್ಲಿದ್ದರೂ ಅದು ಅಸಮಾನತೆಯಿಂದ ಕೂಡಿದೆ.
• ಮಳೆಗಾಲದ ಅವಧಿ ಕಡಿಮೆ ಇದ್ದು ಬೇಸಿಗೆಯಲ್ಲಿ ನೀರಿನ ಕೊರತೆ ಕಂಡುಬರುತ್ತದೆ.
• ದೇಶದಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಪರಿಹಾರಕ್ಕೆ ಇರುವ ಸರಳ ಮಾರ್ಗವೆಂದರೆ
• ಮಳೆ ಕೊಯ್ಲು ಅಥವಾ ಮಳೆ ನೀರಿನ ಸಂಗ್ರಹಣೆ ಮಾಡುವುದು ಇಂದು ಕಡ್ಡಾಯವಾಗಿದೆ.

6. ಕರ್ನಾಟಕದ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಹೆಸರಿಸಿ.
   ಶಿವನಸಮುದ್ರ, ತುಂಗಭದ್ರಾ, ಜೋಗ, ಭದ್ರಾ, ಕೃಷ್ಣಾ ಯೋಜನೆ, ಕಾಳಿ ಯೋಜನೆಗಳು ಕರ್ನಾಟಕದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳಾಗಿವೆ.

7. ಸಣ್ಣ ಹಿಡುವಳಿದಾರರಿಗೆ ಬಾವಿ ನೀರಾವರಿಯು ಅತ್ಯಂತ
   ಸೂಕ್ತವಾದದು ಏಕೆ?
  ಸಣ್ಣ ಹಿಡುವಳಿದಾರರರಿಗೆ ಬಾವಿ ನೀರಾವರಿಯು ಸೂಕ್ತವಾದದು ಏಕೆಂದರೆ ಬಾವಿಗಳ ನಿರ್ಮಾಣಕ್ಕೆ ಅಧಿಕ ಬಂಡವಾಳ ಅಥವಾ ತಾಂತ್ರಿಕತೆಯ ಅವಶ್ಯಕತೆ ಇಲ್ಲ. ವರ್ಷದ ಎಲ್ಲಾ ಕಾಲದಲ್ಲಿಯೂ ಬಾವಿಗಳಿಂದ ನೀರಾವರಿ ಸೌಲಭ್ಯ ಸಾಧ್ಯ.

8. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು?
   ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ಪ್ರದೇಶಗಳಿಗೆ ಸಾಗಿಸಲು ಹಾಗೂ ವಿದ್ಯುತ್ತನ್ನು ಸಮರ್ಪಕವಾಗಿ ಪ್ರಸರಣ ಮಾಡಲು ಅಳವಡಿಸಿರುವ ವಿದ್ಯುತ್ ಜಾಲವನ್ನೇ ರಾಷ್ಟ್ರೀಯ ವಿದ್ಯುತ್ ಜಾಲ ಎನ್ನುವರು.

9. ಭಾರತದ ಪ್ರಮುಖ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು
ಯಾವವು?
• ದಾಮೋದರ ನದಿ ಕಣಿವೆ ಯೋಜನೆ 2. ಭಾಕ್ರಾ ನಂಗಲ್ ಯೋಜನೆ
• ಕೋಸಿ ಯೋಜನೆ 4. ಹಿರಾಕುಡ್ ಯೋಜನೆ
• ತುಂಗಭದ್ರಾ ಯೋಜನೆ 6. ನಾಗಾರ್ಜುನ ಸಾಗರ ಯೋಜನೆ
• ಕೃಷ್ಣಾ ಮೇಲ್ದಂಡೆ ಯೋಜನೆ 8 ನರ್ಮದಾ ನದಿ ಕಣಿವೆ ಯೋಜನೆ.

10. ಮಳೆ ಕೊಯ್ಲಿನಲ್ಲಿ ಎಷ್ಟು ಪ್ರಕಾರ? ಅವು ಯಾವವು?
• ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವದು. ಉದಾ : ಮನೆಯ ಮೇಲ್ಚಾವಣಿಯಿಂದ.
• ಮಳೆ ಬಿದ್ದ ನಂತರ ಹರಿಯುವ ನೀರನ್ನು ಸಂಗ್ರಹಿಸುವದು. ಉದಾ : ಒಡ್ಡು ಕಟ್ಟಿ ನೀರನ್ನು ಸಂಗ್ರಹಿಸುವದು

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments