ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು (GEO)

ಖನಿಜ ಮತ್ತು ಶಕ್ತಿ ಸಂಪನ್ಮೂಲಗಳು (GEO)

ಮುಖ್ಯಾಂಶಗಳು:
• ಭಾರತದಲ್ಲಿ ಝಾರ್ಖಂಡ್ & ಓರಿಸ್ಸಾ ರಾಜ್ಯಗಳು ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪವನ್ನು ಹೊಂದಿವೆ.
• ಬಾಕ್ಸೈಟ್ ಅದಿರಿನಿಂದ ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುತ್ತಾರೆ.
• ಅಭ್ರಕವನ್ನು ಕಾಗೆ ಬಂಗಾರ ಎಂದು ಕರೆಯುತ್ತಾರೆ.
• ಕಬ್ಬಿಣದ ಮಿಶ್ರ ಲೋಹಗಳಲ್ಲಿ ಅತಿ ಮುಖ್ಯವಾದ ಮಿಶ್ರ ಲೋಹ ಮಾಂಗನೀಸ್ ಆಗಿದೆ.
• ಭಾರತವು ಅಭ್ರಕ ಅದಿರಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಅಗ್ರ ಸ್ಥಾನದಲ್ಲಿದೆ.
• ಚಿನ್ನವು ಪ್ರಾಚೀನ ಕಾಲದಿಂದಲೂ ಪ್ರಪಂಚದಾದ್ಯಂತ ಅತ್ಯಂತ ಹೆಚ್ಚಿನ ಮೌಲ್ಯವನ್ನು ಹೊಂದಿದ
• ಲೋಹವಾಗಿದೆ.
• ದ್ರವರೂಪದ ಚಿನ್ನ : ಪೇಟ್ರೋಲಿಯಂ : : ಕಪ್ಪು ಬಂಗಾರ : ಕಲ್ಲಿದ್ದಲು.
• ಭಾರತದ ಆಸ್ಸಾಂನ ‘ದಿಗ್ಬಾಯಿ’ ಎಂಬಲ್ಲಿ ಪೆಟ್ರೋಲಿಯಂನ್ನು ಮೊದಲು ಪತ್ತೆ ಹಚ್ಚಲಾಯಿತು.
• ಬಾಂಬೈ ಹೈ ಪ್ರದೇಶವು ಭಾರತದ ಅತಿ ದೊಡ್ಡ ತೈಲ ನಿಕ್ಷೇಪವಾಗಿದೆ.
• ಭಾರತದಲ್ಲಿ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ರಾಜಸ್ತಾನದ ಬಾರ್‍ಮರ್‍ನಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತದಲ್ಲಿ ದೊರಕುವ ಖನಿಜ ಸಂಪನ್ಮೂಲಗಳಾವವು?
  ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಅದಿರು, ಅಭ್ರಕ, ಚಿನ್ನದ ಅದಿರು ಭಾರತದಲ್ಲಿ ದೊರಕುವ ಪ್ರಮುಖ ಖನಿಜ ಸಂಪನ್ಮೂಲಗಳಾಗಿವೆ.

2. ಭಾರತದಲ್ಲಿ ಮ್ಯಾಂಗನೀಸ್ ಅದಿರು ಉತ್ಪಾದಿಸುವ ಪ್ರಮುಖ ರಾಜ್ಯಗಳು ಯಾವವು?
  ಒಡಿಸ್ಸಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಮಧ್ಯಪ್ರದೇಶಗಳು ಮ್ಯಾಂಗನೀಸ್ ಅದಿರನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.

3. ಭಾರತದಲ್ಲಿ ಉತ್ಪಾದಿಸುವ ಕಬ್ಬಿಣದ ಅದಿರಿನ ವಿಧಗಳು ಯಾವವು?
   ಮ್ಯಾಗ್ನಟೈಟ್ & ಹೇಮಟೈಟ್ ಕಬ್ಬಿಣದ ಅದಿರುಗಳು ಭಾರತದಲ್ಲಿ ಉತ್ಪಾದಿಸುವ ಕಬ್ಬಿಣದ ಅದಿರಿನ ವಿಧಗಳಾಗಿವೆ.

4. ಭಾರತದ ಪ್ರಮುಖ ಶಕ್ತಿ ಸಂಪನ್ಮೂಲಗಳಾವವು? ವಿವರಿಸಿ.
   ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ, ಅಣು ಖನಿಜಗಳು ಹಾಗೂ ಮುಗಿದು ಹೋಗದೇ ಇರುವ ಶಕ್ತಿ ಸಂಪನ್ಮೂಲಗಳಲ್ಲಿ ಸೌರಶಕ್ತಿ, ಪವನ ಶಕ್ತಿ, ಜೈವಿಕ ಅನಿಲ ಶಕ್ತಿ ಮುಂತಾದವು ಭಾರತದ ಪ್ರಮುಖ ಶಕ್ತಿ ಸಂಪನ್ಮೂಲಗಳಾಗಿವೆ.

5. ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳೆಂದರೇನು?
   ಪುನರ್ ಬಳಕೆ ಮಾಡಬಹುದಾದ ಶಕ್ತಿ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಸಾಗರ ನೀರಿನ ಉಬ್ಬರವಿಳಿತ ಶಕ್ತಿ, ಜೈವಿಕ ಅನಿಲ ಶಕ್ತಿ ಮೊದಲಾದವುಗಳನ್ನು ಅಸಂಪ್ರದಾಯಕ ಶಕ್ತಿ
ಸಂಪನ್ಮೂಲಗಳೆಂದು ಕರೆಯುವರು.

6. ಕರ್ನಾಟಕದಲ್ಲಿ ಕಂಡು ಬರುವ ಕಬ್ಬಿಣ ಅದಿರಿನ ನಿಕ್ಷೇಪಗಳು
   ಯಾವವು?
   ಕರ್ನಾಟಕದ ಕೆಮ್ಮಣ್ಣುಗುಂಡಿ, ಹೊಸಪೇಟೆ, ಸೊಂಡುರು, ಕುದುರೆಮುಖಗಳಲ್ಲಿ ಕಬ್ಬಿಣ ಅದಿರಿನ ನಿಕ್ಷೇಪಗಳಿವೆ.

7. ಭಾರತದಲ್ಲಿ ಕಂಡುಬರುವ ಪ್ರಮುಖ ಅಣು ಖನಿಜಗಳಾವವು?
   ಭಾರತದಲ್ಲಿ ಕಂಡು ಬರುವ ಅಣು ಖನಿಜಗಳಲ್ಲಿ ಯುರೋನಿಯಂ, ಥೋರಿಯಂ, ಬೆರಿಲಿಯಂ, ಲಿಥಿಯಂ ಮುಂತಾದವುಗಳು ಪ್ರಮುಖವಾಗಿವೆ.

8. ಶಕ್ತಿ ಸಂಪನ್ಮೂಲಗಳ ಕೊರತೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳಾವವು?
• ಅಸಂಪ್ರದಾಯಕ ಶಕ್ತಿ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವದು.
• ಜಲವಿದ್ಯುತ್ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವದು.
• ನಿರುಪಯುಕ್ತ ವಸ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವದು.

9. ಮ್ಯಾಂಗನೀಸ್ ಅದಿರಿನ ಉಪಯೋಗಗಳೇನು?
   ಮ್ಯಾಂಗನೀಸ್ ಅದಿರನ್ನು ಉಕ್ಕಿನ ಉತ್ಪಾದನೆಯಲ್ಲಿ ಬಳಸುವರು. ರಾಸಾಯನಿಕ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸುವರು.

10. ಬಾಕ್ಸೈಟ್‍ನ್ನು 20 ನೇ ಶತಮಾನದ ಅದ್ಭುತ ಲೋಹವೆಂದು ಕರೆಯಲು ಕಾರಣವೇನು?
   ಬಾಕ್ಸೈಟ್ ವೈವಿದ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುವದರಿಂದ ಇದನ್ನು 20 ನೇ ಶತಮಾನದ ಅದ್ಭುತ ಲೋಹವೆಂದು ಕರೆಯುತ್ತಾರೆ.

11. ಅಭ್ರಕನಲ್ಲಿರುವ ಗುಣವಿಶೇಷತೆಗಳು ಏನು?
   ಅಭ್ರಕವು ಒಳ್ಳೆಯ ಪಾರದರ್ಶಕತೆ, ಸ್ಥಿತಿ ಸ್ಥಾಪಕತ್ವ, ಶಾಖ ನಿರೋಧಕ
   ಹಾಗೂ ಹೊಳಪುಳ್ಳ ಸಿಲಿಕೇಟ ಖನಿಜವಾಗಿದೆ.

12. ಕರ್ನಾಟಕದಲ್ಲಿ ಚಿನ್ನದ ನಿಕ್ಷೇಪಗಳು ಎಲ್ಲಿ ಕಂಡು ಬರುತ್ತವೆ?
ಕರ್ನಾಟಕದ ಕೋಲಾರ, ರಾಯಚೂರು ಜಿಲ್ಲೆಯ ಹಟ್ಟಿ, ಗದಗ ಬಳಿಯ ಕಪ್ಪತಗುಡ್ಡದಲ್ಲಿ ಬೆಣಚುಕಲ್ಲಿನ ಶಿಲಾಸ್ತರಗಳಲ್ಲಿ ಚಿನ್ನದ ನಿಕ್ಷೇಪಗಳು ಕಂಡು ಬರುತ್ತವೆ.

13. ಕಲ್ಲಿದ್ದಲಿನ ಉಪಯೋಗವನ್ನು ತಿಳಿಸಿರಿ. ಅಥವಾ
    ಕಲ್ಲಿದ್ದಲನ್ನು ಕಪ್ಪು ಬಂಗಾರ ಎಂದು ಕರೆಯಲು ಕಾರಣವೇನು?
    ಕಲ್ಲಿದ್ದಲು ಕೇವಲ ಶಕ್ತಿಯ ಖನಿಜವಾಗಿರದೇ ಕೀಟ ನಿರೋಧಕಗಳು, ಸ್ಪೋಟಕ ವಸ್ತುಗಳು, ಕೃತಕ ನಾರು, ಕೃತಕ ರಬ್ಬರ್, ಪ್ಲಾಸ್ಟಿಕ್, ರಾಸಾಯನಿಕ ಗೊಬ್ಬರ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೀಗೆ ಬಹು ಉಪಯೋಗಿ ಖನಿಜವಾದ್ದರಿಂದ ಇದನ್ನು ಕಪ್ಪು ಬಂಗಾರ ಎಂದು ಕರೆಯುತ್ತಾರೆ.

13. ಪೆಟ್ರೋಲಿಯಂನ್ನು ಶುದ್ಧೀಕರಿಸಿದಾಗ ದೊರೆಯುವ
ವಸ್ತುಗಳಾವವು?
   ಪೆಟ್ರೋಲಿಯಂನ್ನು ಶುದ್ಧೀಕರಿಸಿದಾಗ ಗ್ಯಾಸೋಲಿನ್, ಪೆಟ್ರೋಲ್, ಡಿಸೇಲ್ & ಸೀಮೆಎಣ್ಣೆ ಮುಂತಾದವುಗಳು ದೊರೆಯುವವು.

15. ಪೆಟ್ರೋಲಿಯಂನ್ನು ದ್ರವರೂಪದ ಚಿನ್ನ ಎಂದು ಕರೆಯಲು ಕಾರಣವೇನು?
   ವ್ಯವಸಾಯ, ಕೈಗಾರಿಕೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ಪೆಟ್ರೋಲಿಯಂ ಅಮೂಲ್ಯ ಶಕ್ತಿ ಸಂಪನ್ಮೂಲ. ಇದು ಶಾಂತಿ ಹಾಗೂ ಯುದ್ಧ ಕಾಲಗಳೆರಡರಲ್ಲೂ ಅಮೂಲ್ಯವಾದದು. ಆದುದರಿಂದಲೇ ಇದನ್ನು ‘ದ್ರವರೂಪದ ಚಿನ್ನ’ ಎಂದು ಕರೆಯಲಾಗುತ್ತದೆ.

16. ಭಾರತದ ಪ್ರಮುಖ ತೈಲ ನಿಕ್ಷೇಪಗಳಾವವು?
   ಅಸ್ಸಾಂನ ದಿಗ್ಬಾಯಿ, ಲಕಿಮಪುರ, ಹುಗ್ರಿಜಾನ್,ನಹರ್‍ಕಟಿಯಾ, ಗುಜರಾತ್ ರಾಜ್ಯದ ಅಂಕಲೇಶ್ವರ, ಮಹಾರಾಷ್ಟ್ರದ ಬಾಂಬೈ ಹೈ ಪ್ರದೇಶಗಳು ಭಾರತದ ಪ್ರಮುಖ ತೈಲ ನಿಕ್ಷೇಪಗಳಾಗಿವೆ.

17. ಗ್ಲೋಬಲ್ ವಾರ್ಮಿಂಗ್ ಎಂದರೇನು?
   ಪ್ರಪಂಚದಾದ್ಯಂತ ಸಾಂಪ್ರದಾಯಕ ಶಕ್ತಿ ಮೂಲಗಳ ಬಳಕೆಯಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತಿದ್ದು, ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುವ ಸಂಭವನೀಯತೆಯನ್ನು ಗಮನಿಸಲಾಗಿದೆ. ಇದನ್ನೇ ಗ್ಲೋಬಲ್ ವಾರ್ಮಿಂಗ್ ಎಂದು ಕರೆಯಲಾಗಿದೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments