ಭಾರತದ ಸಾರಿಗೆ

ಭಾರತದ ಸಾರಿಗೆ (GEO)

ಮುಖ್ಯಾಂಶಗಳು:.
• ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ನಾಡ ಪ್ರಭು ಕೆಂಪೇಗೌಡ
• ಹಳ್ಳಿಗಳು & ಕೃಷಿ ಅಭಿವೃದ್ಧಿಗೆ ರಸ್ತೆಗಳು ಅವಶ್ಯಕವಾಗಿವೆ.
• ಭಾರತದ ಹೆಬ್ಬಾಗಿಲು ಎಂದು ಮುಂಬಯಿ ಬಂದರನ್ನು ಕರೆಯುತ್ತಾರೆ.
• ವಸ್ತುಗಳು, ಸೇವೆಗಳು, ಮಾಹಿತಿ & ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವದನ್ನೇ ಸಾರಿಗೆ ಎಂದು ಕರೆಯುವರು.
• ಭಾರತ ಸರಕಾರವು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಗೆ 1989 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಿದೆ.
• ಕುಲುಮನಾಲಿ ಮತ್ತು ಲ್ಹೇಗಳನ್ನು ಸಂಪರ್ಕಿಸುವ ಹೆದ್ದಾರಿ 4267 ಮೀ. ಎತ್ತರದಲ್ಲಿದೆ. ಇದು ಜಗತ್ತಿನ ಎತ್ತರದ ರಸ್ತೆ ಮಾರ್ಗವಾಗಿದೆ.
• ಕಾಂಡ್ಲಾ ಕಛ್ ಖಾರಿಯ ಶಿರೋಭಾಗದಲ್ಲಿದೆ.
• ಮುಂಬಯಿ ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.
• ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ.
• ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.
• ಹಾಲ್ಡಿಯಾ ಬಂದರು ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ.
• ಭಾರತ ಸರಕಾರವು 1955 ರಲ್ಲಿ ‘ದಿ ಏರ್‍ಪೋರ್ಟ ಅಥಾರಿಟಿ ಆಫ್ ಇಂಡಿಯಾ’
• ಸಂಸ್ಥೆಯನ್ನು ಸ್ಥಾಪಿಸಿದ್ದು, ದೇಶದ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ನೀಡಲಾಗಿದೆ.
• ಸಹರಾ & ಸಾತ್ರಾಕ್ರೂಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮುಂಬೈನಲ್ಲಿವೆ.
• ದೆಹಲಿ : ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ : : ಚನ್ನೈ : ಅಣ್ಣಾ
• ಅಂತರಾಷ್ಟ್ರೀಯ ವಿಮಾನ ನಿಲ್ದಾಣ : : ಕೊಲ್ಕತ್ತಾ : ಸುಭಾಸ್‍ಚಂದ್ರ ಬೋಸ್ ವಿಮಾನ ನಿಲ್ದಾಣ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಾರಿಗೆಯಿಂದಾಗುವ ಪ್ರಯೋಜನಗಳೇನು?
  ಸಾರಿಗೆಯು ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ವಹಿಸುವ ಪಾತ್ರ ಮಹತ್ತರವಾದುದು. ಆರ್ಥಿಕತೆಯ ಮುಖ್ಯ ಕ್ಷೇತ್ರಗಳಾದ ವ್ಯವಸಾಯ, ಕೈಗಾರಿಕೆ, ಗಣಿಗಾರಿಕೆ, ಅರಣ್ಯಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮೊದಲಾದವುಗಳನ್ನು ಸಾರಿಗೆಯು ಮಾರುಕಟ್ಟೆಗಳೊಡನೆ ಸಂಪರ್ಕಿಸುವದು. ಇದರಿಂದ ತ್ವರಿತಗತಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ಉಂಟಾಗುವದು.

2. ಭಾರತದಲ್ಲಿರುವ ನಾಲ್ಕು ಪ್ರಕಾರದ ಸಾರಿಗೆಗಳಾವವು?
  1. ರಸ್ತೆ ಸಾರಿಗೆ, 2. ರೈಲುಸಾರಿಗೆ, 3. ವಾಯುಸಾರಿಗೆ, 4. ಜಲಸಾರಿಗೆ.

3. ಭಾರತದಲ್ಲಿರುವ ನಾಲ್ಕು ಪ್ರಕಾರದ ರಸ್ತೆ ಸಾರಿಗೆಗಳಾವವು?
  1. ರಾಷ್ಟ್ರೀಯ ಹೆದ್ದಾರಿಗಳು 2. ರಾಜ್ಯ ಹೆದ್ದಾರಿಗಳು 3. ಜಿಲ್ಲಾ
    ರಸ್ತೆಗಳು 4. ಗ್ರಾಮೀಣ ರಸ್ತೆಗಳು

4. ಸುವರ್ಣ ಚತುಷ್ಪತ�’À ಯೋಜನೆ ಎಂದರೇನು?
   ಈ ಯೋಜನೆಯು ಚತಷ್ಪತ ರಸ್ತೆಗಳನ್ನು ಹೊಂದಿದ 15000 ಕಿ.ಮೀ. ಉದ್ದವಾಗಿರುವ ರಾಷ್ಟ್ರೀಯ ಹೆದ್ದಾರಿಯಾಗಿದೆ.

5. ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಗಳನ್ನು ತಿಳಿಸಿ.
  ಇವು ದೇಶದ ಅತಿ ಮುಖ್ಯ ರಸ್ತೆಗಳು. ದೇಶದ ಉದ್ದಗಲಕ್ಕೂ ನಿರ್ಮಿತವಾಗಿವೆ. ರಾಜ್ಯದ ರಾಜದಾನಿಗಳು, ಪ್ರಧಾನ ಬಂದರುಗಳು ಮತ್ತು ಕೈಗಾರಿಕಾ ನಗರಗಳನ್ನು ಸಂಪರ್ಕಿಸುತ್ತವೆ.

6. ಭಾರತದಲ್ಲಿರುವ ಪ್ರಮುಖ ಬಂದರುಗಳನ್ನು ಪಟ್ಟಿ ಮಾಡಿರಿ.
   ಭಾರತದಲ್ಲಿ ಒಟ್ಟು 12 ಅತ್ಯಾಧುನಿಕ ಬಂದರುಗಳಿವೆ.
• ಪಶ್ಚಿಮ ಕರಾವಳಿಯಲ್ಲಿ ಕಾಂಡ್ಲಾ, ಮುಂಬಯಿ, ನವಶೇವಾ,
  ಮರ್ಮಗೋವಾ, ನವಮಂಗಳೂರು, ಕೊಚ್ಚಿನ್
• ಪೂರ್ವ ಕರಾವಳಿಯಲ್ಲಿ ತುತುಕುಡಿ, ಚನ್ನೈ, ವಿಶಾಖಪಟ್ಟಣ,
  ಪಾರಾದೀಪ, ಕೋಲ್ಕತ್ತಾ & ಹಾಲ್ಡಿಯಾ ಪ್ರಮುಖ 
  ಬಂದರುಗಳಾಗಿವೆ.

7. ರಸ್ತೆ ಸಾರಿಗೆಯ ತೊಡಕುಗಳನ್ನು ತಿಳಿಸಿರಿ.
• ಅನೇಕ ಗ್ರಾಮೀಣ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಅನುಪಯುಕ್ತವಾಗಿವೆ.
• ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ ಕಾರಣವಾಗಿವೆ.
• ರಸ್ತೆಗಳು ಪ್ರತಿ ªಂμಂಜ ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ಹಾಳಾಗುತ್ತವೆ.
• ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ & ನಿರ್ವಹಣೆಯೂ ಅಸಮರ್ಪಕವಾಗಿದೆ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments