ಭಾರತದ ಪ್ರಮುಖ ಕೈಗಾರಿಕೋದ್ದಿಮೆಗಳು (GEO)
ಮುಖ್ಯಾಂಶಗಳು:
• ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಲದ ಕುಲ್ಟಿ ಎಂಬಲ್ಲಿ 1870 ರಲ್ಲಿ ಸ್ಥಾಪಿತಗೊಂಡಿತು.
• ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವದನ್ನೇ ಜವಳಿ ಕೈಗಾರಿಕೆ ಎಂದುಕರೆಯುವರು.
• ಸಕ್ಕರೆ ಕೈಗಾರಿಕೆಯ ಮುಖ್ಯ ಕಚ್ಚಾ ವಸ್ತು ಕಬ್ಬು.
• ಭಾರತದ ಮೊದಲ ಕಾಗದದ ಕೈಗಾರಿಕೆಯು 1840 ರಲ್ಲಿ ಪಶ್ಚಿಮ ಬಂಗಾಳದ ಸೆರಾಂಪುರದಲ್ಲಿ ಹೂಗ್ಲಿನದಿಯ ದಡದಲ್ಲಿ ಸ್ಥಾಪನೆಗೊಂಡಿತು.
• ಭಾರತದಲ್ಲಿ 8 ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ.
• ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎಂದು ಕರೆಯುತ್ತಾರೆ.
• 1907 ರಲ್ಲಿ ಟಾಟಾ ಐರನ್ & ಸ್ಟೀಲ್ ಕಂಪನಿ ಜಮಶೆಡ್‍ಪುರ ಬಳಿ, 1919 ರಲ್ಲಿ ದಿ ಇಂಡಿಯನ್ ಐರನ್ & ಸ್ಟೀಲ್ ಕಂಪನಿಯು ಪಶ್ಚಿಮ ಬಂಗಾಳದ ಬರ್ನಪುರ ಬಳಿಯು, 1923 ರಲ್ಲಿ ದಿ ಮೈಸೂರ್ ಐರನ್ ಸ್ಟೀಲ್ ವಕ್ರ್ಸ ಕೈಗಾರಿಕೆ ಭದ್ರಾವತಿ ಬಳಿಯು ಸ್ಥಾಪಿಸಿತು.
• ಭಾರತದಲ್ಲಿ ಮೊದಲ ಹತ್ತಿ ಬಟ್ಟೆ ಕೈಗಾರಿಕೆಗಳು 1854 ರಲ್ಲಿ ಮುಂಬೈ & ಬರೂಚ್‍ಗಳಲ್ಲಿ ಸ್ಥಾಪಿಸಲ್ಪಟ್ಟವು.
• ಮಾಹಾರಾಷ್ಟ್ರದ ಮುಂಬಯಿಯಲ್ಲಿ ಅತಿ ಹೆಚ್ಚು ಹತ್ತಿ ಬಟ್ಟೆ ಗಿರಿಣಿಗಳಿದ್ದು, ಇದನ್ನು ಭಾರತದ ‘ಮ್ಯಾಂಚೆಸ್ಟರ್’ ಅಥವಾ ಭಾರತದ ‘ಕಾಟನೋಪೊಲಿಸ್’ ಎಂದು ಕರೆಯುತ್ತಾರೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕೈಗಾರಿಕಾ ವಲಯಗಳನ್ನು ಪಟ್ಟಿಮಾಡಿ.
ಭಾರತದಲ್ಲಿ 8 ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ.
• ಹೂಗ್ಲಿ ಪ್ರದೇಶ, 2. ಮುಂಬೈ-ಪೂನಾ ಪ್ರದೇಶ,
• ಅಹಮದಾಬಾದ್-ವಡೋದರಾ ಪ್ರದೇಶ. 4. ದಾಮೋದರ ಕಣಿವೆ ಪ್ರದೇಶ.
• ದಕ್ಷಿಣದ ಕೈಗಾರಿಕಾ ಪ್ರದೇಶ 6. £ಂಚಿμಂ�’Àಲ್ ಕ್ಯಾಪಿಟಲ್ ಪ್ರದೇಶ.
• ವಿಶಾಖಪಟ್ಟಣ – ಗುಂಟೂರ ಪ್ರದೇಶ. 8. ಕೊಲ್ಲಂ-ತಿರುವಂತಪುರ ಪ್ರದೇಶ.
2. ಕಬ್ಬಿಣ & ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವವು?
• ಝಾರ್ಖಂಡ್ ರಾಜ್ಯದ ಜಮ್‍ಶೆಡ್‍ಪುರ – ಟಾಟಾ ಕಬ್ಬಿಣ & ಉಕ್ಕಿನ ಕೈಗಾರಿಕೆ
• ಪಶ್ಚಿಮಬಂಗಾಳ ರಾಜ್ಯದ ಬರ್ನಪುರ – ಇಂಡಿಯನ್ ಐರನ್ & ಸ್ಟೀಲ್ ಕಂಪನಿ
• ಕರ್ನಾಟಕ ರಾಜ್ಯದ ಭದ್ರಾವತಿ - ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕಿನ ಕೈಗಾರಿಕೆ
• ಛತ್ತೀಸ್‍ಘಡ್‍ದ ಬಿಲಾಯಿ 5. ಒರಿಸ್ಸಾದ ರೂರ್ಕೆಲಾ 6. ಪಶ್ಚಿಮಬಂಗಾಳದ ದುರ್ಗಾಪುರ
• ಝಾರ್ಖಂಡ್‍ದ ಬೋಕಾರೊ 8. ತಮಿಳುನಾಡುನ ಸೇಲಂ
ಆಂದ್ರಪ್ರದೇಶದ ವಿಶಾಖಪಟ್ಟಣ
3. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವವು?
• ಕಚ್ಚಾ ವಸ್ತುಗಳ ಲಭ್ಯತೆ, ಶಕ್ತಿ ಸಂಪನ್ಮೂಲಗಳ ಲಭ್ಯತೆ, ಮಾರುಕಟ್ಟೆ, ಸಂಚಾರ ಸೌಲಭ್ಯ,
• ಕಾರ್ಮಿಕರ ಪೂರೈಕೆ, ಬಂದರುಗಳ ಸೌಲಭ್ಯ ಮೊದಲಾದ ಅಂಶಗಳು ಕೈಗಾರಿಕೆಗಳ
• ಸ್ಥಾನೀಕರಣದ ಮೇಲೆ ಪ್ರಭಾವ ಬೀರುತ್ತವೆ.
• ಕೈಗಾರಿಕೆಗಳ ಸ್ಥಾನವು ಕಡಿಮೆ ದರದ ಭೂಮಿ ದೊರೆಯುವಿಕೆ, ತಾಂತ್ರಿಕತೆ, ಸರ್ಕಾರದ
• ನೀತಿ ನಿಯಮಗಳಿಂದಲೂ ಪ್ರಭಾವಿತವಾಗಿರುವುದು.
4. ಗಂಗಾನದಿ ಬಯಲು ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಗಳು ಹೆಚ್ಚು ಕೇಂದ್ರಿಕೃತವಾಗಿವೆ. ಏಕೆ?
• ಮಧ್ಯ ಗಂಗಾ ಬಯಲು ಪ್ರದೇಶವು ಸಕ್ಕರೆ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳು ಹೇರಳವಾಗಿ ದೊರೆಯುತ್ತವೆ.
• ಮೈದಾನ ಪ್ರದೇಶವಾದ್ದರಿಂದ ರಸ್ತೆ ಮತ್ತು ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿವೆ.
• ಹೆಚ್ಚು ಜನಸಾಂದ್ರತೆ ಹೊಂದಿದ್ದು ಮಾರುಕಟ್ಟೆ ಹಾಗೂ ಕಾರ್ಮಿಕ ಬಲದ ಸೌಕರ್ಯವಿದೆ.
5. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವವು?
ಮರದ ತಿರುಳು, ಬಿದಿರು, ಸಬಾಯಿ ಹುಲ್ಲು, ಕಬ್ಬಿನ ಸಿಪ್ಪೆ, ಮೃದುಜಲ, ರಾಸಾಯನಿಕ ವಸ್ತುಗಳು ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳಾಗಿವೆ.
6. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.
ಹತ್ತಿ ಬಟ್ಟೆ ಕೈಗಾರಿಕೆಗಳು ಹೆಚ್ಚಾಗಿ ಮºಂgಂμಂಔಛಿ, ಗುಜರಾತ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಹಂಚಿಕೆಯಾಗಿವೆ.
7. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು?
ಜೈವಿಕ ತಂತ್ರಜ್ಞಾನದಿಂದ ಸಸ್ಯ, ಪ್ರಾಣಿ ಮೊದಲಾದವುಗಳಿಗೆ ಕಸಿ ಮಾಡುವಿಕೆಯಿಂದ ಹೊಸ ಹೊಸ ಬೀಜ, ಔಷಧ, ರಸಗೊಬ್ಬರ ಉತ್ಪಾದನೆಯಾಗುತ್ತದೆ. ಜೈವಿಕ ಗೊಬ್ಬರ ಬಳಕೆಯಿಂದ ಸೋಯಾ,
ಅವರೆ, ಮಕ್ಕೆಜೋಳ, ಹತ್ತಿ ಮೊದಲಾದ ಸಮ್ಮಿಶ್ರ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
8. ಸುಧಾರಿತ ತಂತ್ರಜ್ಞಾನ ಬಳಕೆಯಿಂದ ಆದ ಬದಲಾವಣೆಗಳೇನು?
• ಟೆಲಿಫೋನ್, ಅಂತರ್‍ಜಾಲ ಸಂಪರ್ಕ, ರಕ್ಷಣಾ ಇಲಾಖೆಗೆ
ಸಂಬಂಧಿಸಿದಂತೆ ಯುದ್ಧ ಸಾಮಗ್ರಿಗಳ ತಯಾರಿಕೆ,
• ಅಣುಬಾಂಬ್ ತಯಾರಿಕೆ, ಉಪಗ್ರಹ ಉಡಾವಣೆ, ಚಂದ್ರನ
ಮೇಲೆ ಪಾದಾರ್ಪಣೆ,
• ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ-ಆಡಳಿತ, ಜಾಗತೀಕ
ಅರ್ಥವ್ಯವಸ್ಥೆ ಸುಧಾರಣೆ ಮುಂತಾದ ಬದಲಾವಣೆಗಳಾಗಿವೆ
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments