ಸಂಪರ್ಕ (GEO)
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಂಪರ್ಕ ಮಾಧ್ಯಮ ಎಂದರೇನು?
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುದ್ದಿ ಸಮಾಚಾರ ಮತ್ತು ವಿಷಯಗಳನ್ನು ರವಾನಿಸುವ ಮಾಧ್ಯಮಗಳಿಗೆ ಸಂಪರ್ಕ ಮಾಧ್ಯಮಗಳೆನ್ನುವರು. ಉದಾ : ವೃತ್ತ ಪತ್ರಿಕೆ, ರೇಡಿಯೋ
2. ಸಂಪರ್ಕದ ಸಾಧನಗಳಾವವು?
ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತಪತ್ರಿಕೆಗಳ ಜೊತೆಗೆ ರೇಡಿಯೋ, ಅಂತರ್ಜಾಲ, ಇ-ಮೇಲ್, ದೂರವಾಣಿ, ಕಂಪ್ಯೂಟರ್, ದೂರದರ್ಶನ, ಕೃತಕ ಉಪಗ್ರಹಗಳು, ಸಂಚಾರಿ ದೂರವಾಣಿಗಳು ಮೊದಲಾದವುಗಳು ಇಂದು ಸಂಪರ್ಕದ ಸಾಧನಗಳಾಗಿವೆ.
3. ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿ.
• ಸಂಪರ್ಕ ಮಾಧ್ಯಮಗಳು ದೇಶದ ಜನರಿಗೆ ವಿವಿಧ ಪ್ರದೇಶದ ಆಗು-ಹೋಗುಗಳನ್ನು ತಿಳಿಯಲು ಅಗತ್ಯವಾಗಿದೆ.
• ಸರಕಾರದ ನೀತಿ ನಿಯಮಗಳನ್ನು ತಿಳಿಯಪಡಿಸಿ ಅದರ ಬಗ್ಗೆ ತಿಳುವಳಿಕೆಯನ್ನು ಮೂಡಿಸಬಹುದು.
• ವಾಣಿಜ್ಯ ವ್ಯಾಪಾರದ ಅಭಿವೃದ್ಧಿಗೆ ಸಂಪರ್ಕ ಮಾಧ್ಯಮಗಳು ಮೂಲ ಅಗತ್ಯವಾಗಿವೆ.
• ದೇಶದ ಏಕತೆ, ಒಗ್ಗಟ್ಟು ಹಾಗೂ ಸ್ಥಿರvಂÉiÀುನ್ನು ಕಾಪಾಡಿಕೊಳ್ಳಲು ಅನುಕೂಲವಾಗುವದು.
4. ಗ್ಲೋಬಲ್ ಪೊಜಿಶನಿಂಗ್ (ಜಿಪಿಎಸ್) ಸಿಸ್ಟಂನ ಕಾರ್ಯವನ್ನು
ಕುರಿತು ಬರೆಯಿರಿ.
ಗ್ಲೋಬಲ್ ಪೊಜಿಶನಿಂಗ್ ಸಿಸ್ಟಂನ ಮುಖ್ಯ ಕಾರ್ಯ ಭೂ ಮೈಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥª ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವದು ಹಾಗೂ ಆ ವಸ್ತುವಿನ ಎತ್ತರವನ್ನು ಸಹ ಸೂಚಿಸುವುದು.
5. ದೂರಸಂವೇದಿ ತಂತ್ರಜ್ಞಾನವನ್ನು ಕುರಿತು ಬರೆಯಿರಿ.
ವಸ್ತುಗಳನ್ನು ಭೌತಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ‘ದೂರ ಸಂವೇದಿ’ ಎಂದು ಕರೆಯುವರು. ವೈಮಾನಿಕ ಚಿತ್ರಗಳು ಹಾಗೂ
ಉಪಗ್ರಹದಿಂದ ಪಡೆದ ಚಿತ್ರಗಳು ದೂರ ಸಂವೇದಿ ಚಿತ್ರಗಳಾಗಿವೆ.
6. ಜಿ.ಐ.ಎಸ್. ಎಂದರೇನು? ಹಾಗೂ ಅದರ ಉಪಯೋಗಗಳನ್ನು ತಿಳಿಸಿರಿ.
ಪೃಥ್ವಿಯ ಮೇಲ್ಮೈನ ಅಂಕಿ ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಪ್ರಭಲ ಸಲಕರಣೆಯ ಸಮೂಹವನ್ನು ಭೌಗೋಳಿಕ ಮಾಹಿತಿ (ಜಿ.ಐ.ಎಸ್) ವ್ಯವಸ್ಥೆ ಎಂದು ಕರೆಯಲಾಗಿದೆ.
ಇದರ ಉಪಯೋಗಗಳು
• ಜಿ.ಐ.ಎಸ್. ತಂತ್ರಜ್ಞಾನ ಆಧಾರಿತ ನಕ್ಷೆಗಳು ಹೆಚ್ಚು ಆಕರ್ಷಕ ಹಾಗೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತವೆ.
• ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿಐಎಸ್ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚು ಕಂಡುಬರುತ್ತದೆ.
7. ಜಿಪಿಎಸ್ ವ್ಯವಸ್ಥೆಯ ಉಪಯೋಗವನ್ನು ತಿಳಿಸಿ.
• ಪ್ರಾಕೃತಿಕ ವಿಕೋಪಗಳ ಸ್ಪಷ್ಟ ಭೌಗೋಳಿಕ ಸ್ಥಾನವನ್ನು ಗುರುತಿಸಿ ಪರಿಹಾರ ಕೈಗೊಳ್ಳಲು ಇವುಗಳು ಉಪಯುಕ್ತ.
• ಸೈನಿಕರು, ವೈಮಾನಿಕರು, ಮೀನುಗಾರರು ಹಾಗೂ ನಾವಿಕರು ಸರಿಯಾದ ಮಾರ್ಗವನ್ನುಅನುಸರಿಸಲು ಜಿ.ಪಿ.ಎಸ್. ವ್ಯವಸ್ಥೆ ಅಗತ್ಯ ಮಾಹಿತಿಯನ್ನು ನೀಡುವದು.
8. ದೂರ ಸಂವೇದಿ ತಂತ್ರಜ್ಞಾನದಿಂದಾಗುವ ಉಪಯೋಗಗಳೇನು?
• ಇದರ ಚಿತ್ರಗಳಿಂದ ಆ ಕಾಲದ ಅವಧಿಯಲ್ಲಿನ ನೈಜ ಹಾಗೂ ನಂಬಲರ್ಹವಾದ ಸ್ಪಷ್ಟ ಮಾಹಿತಿ ದೊರೆಯುವದು.
• ಇದರಿಂದ ಪಡೆದ ಮಾಹಿತಿಯನ್ನು ಸುಲಭವಾಗಿ ಕಂಪ್ಯೂಟರ್‍ಗಳಿಂದ ವಿಶ್ಷೇಷಿಸಬಹುದು.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments