ನೈಸರ್ಗಿಕ ವಿನಾಶಕಾರಕಗಳು

ನೈಸರ್ಗಿಕ ವಿನಾಶಕಾರಕಗಳು

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಪ್ರಾಕೃತಿಕ ವಿನಾಶಗಳು ಎಂದರೇನು?
  ಪ್ರಾಕೃತಿಕವಾಗಿ ಸಂಭವಿಸುವ ಮಾನವನ ಪ್ರಾಣ, ಆಸ್ತಿ-ಪಾಸ್ತಿ ಸೇರಿದಂತೆ ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ಪ್ರಾಕೃತಿಕ ವಿನಾಶಕಾರಕಗಳೆಂದು
ಕರೆಯುವರು.

2. ಚಂಡಮಾರುತಗಳ ಪರಿಣಾಮಗಳಾವವು?
• ಇವುಗಳಿಂದ ಅಪಾರ ಸಾವು ನೋವು ಉಂಟಾಗುತ್ತದೆ.
• ಬೆಳೆಗಳು ಸಂಪೂರ್ಣ ನಾಶವಾಗುತ್ತವೆ.
• ಸಾರಿಗೆ ಸಂಪರ್ಕ, ವಿದ್ಯುತ್ ಸೌಕರ್ಯ, ಜನಜೀವನ ಅಸ್ತವ್ಯಸ್ತವಾಗುವದು.

3. ಪ್ರವಾಹಗಳೆಂದರೇನು?
  ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಹಿಮ ಕರಗಿದಾಗ ನದಿಗಳ ನೀರಿನ ಪ್ರಮಾಣವು ಅವುಗಳ ಸಾಮಥ್ರ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡೆಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯವುದು. ಇದನ್ನು ಪ್ರವಾಹ ಎನ್ನುವರು.

4. ಭೂಕುಸಿತ ಎಂದರೇನು?
   ಪರ್ವತಗಳ ಅಥವಾ ಬೆಟ್ಟಗಳ ಮೇಲ್ಬಾಗದಿಂದ ಕಡಿದಾದ ಇಳಿಜಾರಿನಗುಂಟ ಕೆಳಕ್ಕೆ ಜಾರುವ  ಭೂರಾಶಿಗೆ ಭೂಕುಸಿತಗಳೆನ್ನುವರು.

5. ಭೂಕಂಪ ಎಂದರೇನು?
  ಭೂಮೇಲ್ಮೈ ಕಂಪಿಸುವುದು, ನಡುಗುವುದು ಅಥವಾ ಅಲುಗಾಡುವುದನ್ನು ‘ಭೂಕಂಪ’ವೆಂದು ಕರೆಯುವರು.
6. ಪ್ರವಾಹಗಳಿಂದುಂಟಾಗುವ ಪರಿಣಾಮಗಳೇನು?
• ಪ್ರವಾಹಗಳು ಜನರ ಆಸ್ತಿ-ಪಾಸ್ತಿ, ಮನೆ, ಭೂಮಿ ಮತ್ತು ಬೆಳೆಗಳನ್ನು ಹಾನಿಗೀಡುಮಾಡುತ್ತದೆ.
• ದೂರ ಸಂಪರ್ಕ, ವಿದ್ಯುತ್ ಪೂರೈಕೆ, ಸಾರಿಗೆ ಸೌಲಭ್ಯ ಮುಂತಾದವುಗಳು ಅಸ್ತ-ವ್ಯಸ್ತಗೊಳ್ಳುತ್ತವೆ.

7. ಕಡಲ ಕೊರೆತ ಎಂದರೇನು? ಅದರ ನಿರ್ವಹಣೆಯನ್ನು ತಿಳಿಸಿ.
  ಸಮುದ್ರದ ಅಲೆಗಳು ನಿರಂತರವಾಗಿ ತೀರ ಪ್ರದೇಶಗಳಿಗೆ ಅಪ್ಪಳಿಸುತ್ತವೆ. ಇವುಗಳಿಂದ ತೀರ ಪ್ರದೇಶವು ಸವೆತಕ್ಕಿಡಾಗುತ್ತದೆ. ಇದನ್ನು ಕಡಲ ಕೊರೆತ ಎನ್ನುವರು.
ಕಡಲ ಕೊರೆತದ ನಿರ್ವಹಣೆ
• ತೀರ ಪ್ರದೇಶದಲ್ಲಿ ಮರಳು ತೆಗೆಯುವದನ್ನು ನಿಯಂತ್ರಿಸುವದು.
• ತೀರ ಪ್ರದೇಶದುದ್ದಕ್ಕೂ ಅಲೆಗಳು ಪ್ರಭಲವಾಗಿರುವ ಕಡೆ ತಡೆಗೋಡೆಯನ್ನು ನಿರ್ಮಿಸುವದು.
• ತೀರದುದ್ದಕ್ಕೂ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸುವದು ಅತ್ಯಂತ ಪರಿಣಾಮಕಾರಿ.

8. ಪ್ರವಾಹಗಳುಂಟಾಗಲು ಕಾರಣಗಳೇನು?
• ಕೆಲವು ವೇಳೆ ಅತ್ಯಧಿಕ ಮಳೆ ಬೀಳುವದರಿಂದ ಪ್ರವಾಹಗಳುಂಟಾಗುತ್ತವೆ.
• ನದಿಯ ಪಾತ್ರಗಳಲ್ಲಿ ಹೂಳು ತುಂಬಿ ನೀರು ಇಕ್ಕೆಲಗಳಲ್ಲಿಯೂ ಹರಿದು ಪ್ರವಾಹಗಳು  ಉಂಟಾಗುತ್ತವೆ.
• ಸಮುದ್ರದ ಮಧ್ಯೆ ಭೂಕಂಪನಗಳು ಸಂಭವಿಸುವುದರಿಂದಲೂ ಪ್ರವಾಹಗಳುಂಟಾಗುತ್ತವೆ.

9. ಪ್ರವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು?
• ಜಲಾನಯನ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸುವದು.
• ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿ ಇತರ ಕಡೆಗಳಿಗೆ ನೀರನ್ನು ಹರಿಸುವದು.

10. ಭೂಕಂಪದ ಪರಿಣಾಮಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ.
ಭೂಕಂಪದ ಪರಿಣಾಮಗಳು
• ಸಾರಿಗೆ ಸಂಪರ್ಕಗಳ ಕಡಿತ ಉಂಟಾಗುವದು.
• ನದಿಯ ದಿಕ್ಕು ಬದಲಾಯಿಸುವದು.
• ಸಾರ್ವಜನಿಕ ಆಸ್ತಿಗೆ ಹಾನಿಯಾಗುವದು.
ಭೂಕಂಪದ ಮುನ್ನೆಚ್ಚರಿಕೆಯ ಕ್ರಮಗಳು
• ಭೂಕಂಪನ ಹೆಚ್ಚು ಸಂಭವಿಸುವ ವಲಯಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ನಿμಇಂ�‘üಸುವದು.
• ಕಟ್ಟಡಗಳು ಸ್ಥಿತಿ ಸ್ಥಾಪಕತ್ವ ಗುಣವನ್ನು ಹೊಂದುವಂತೆ ನಿರ್ಮಿಸುವದು.
• ಭೂಕಂಪನ ಉಂಟಾದಾಗ ಶೀಘ್ರವೇ ವಿದ್ಯುತ್ ಸಂಪರ್ಕವನ್ನು ಕತ್ತರಿಸುವದು.

11. ಭೂಕುಸಿದ ಪರಿಣಾಮಗಳೇನು?
• ಸಾರಿಗೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ.
• ಜೀವಹಾನಿ ಮತ್ತು ಆಸ್ತಿ ಹಾನಿಯನ್ನುಂಟುಮಾಡುತ್ತವೆ.

12. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಪರಿಹಾರೋಪಾಯಗಳೇನು?
• ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಿದ್ದಪಡಿಸಿದ ಆಹಾರ, ಆಹಾರದ ಹಂಚಿಕೆ,
• ಶುದ್ಧ ಕುಡಿಯುವ ನೀರಿನ ಪೂರೈಕೆ, ಔμಂ�‘ü ಹಂಚಿಕೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಅಗತ್ಯ
• ಸೌಕರ್ಯಗಳನ್ನು ತುರ್ತಾಗಿ ಒದಗಿಸುವಂತಹ ಕ್ರಮಗಳನ್ನು ಕೈಗೊಳ್ಳುವದು.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments