ಭಾರತದ ಮಣ್ಣುಗಳು (GEO)

ಭಾರತದ ಮಣ್ಣುಗಳು (GEO)

ಮುಖ್ಯಾಂಶಗಳು:
• ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಹೆಸರು.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
• ರಾಜಸ್ತಾನದಲ್ಲಿ ಮರಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವದು.
• ಜೋಳ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ.
• ರಾಗಿ & ಎಣ್ಣೆ ಕಾಳು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕಪ್ಪು ಮಣ್ಣು ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ?
• ಕಪ್ಪು ಮಣ್ಣು - ಹತ್ತಿ, ಜೋಳ, ಗೋದಿ, ಈರುಳ್ಳಿ,
ಮೆಣಸಿನಕಾಯಿ, ಹೊಗೆಸೊಪ್ಪು,
• ಎಣ್ಣೆಕಾಳುಗಳು, ನಿಂಬೆ & ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ.

2. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ಪ್ರಕಾರಗಳಾವವು?
ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ – 1. ಮೆಕ್ಕಲುಮಣ್ಣು, 2. ಕಪ್ಪುಮಣ್ಣು,
3. ಕೆಂಪುಮಣ್ಣು, 4. ಜಂಬಿಟ್ಟಿಗೆ ಮಣ್ಣು,
5. ಮರು¨Àೂsಮಿ ಮಣು,್ಣ 6. ಪರ್ವತ ಮಣ್ಣು.

3. ಉತ್ತರ ಮೈದಾನ ಪ್ರದೇಶದಲ್ಲಿ ಯಾವ ಮಣ್ಣು ಕಂಡು ಬರುತ್ತದೆ?
ಉತ್ತರ ಮೈದಾನ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಕಂಡು ಬರುತ್ತದೆ.

4. ಮಣ್ಣಿನ ಸಂರಕ್ಷಣೆ ಎಂದರೇನು? ಅದರ ವಿಧಾನಗಳನ್ನು ಪಟ್ಟಿ ಮಾಡಿರಿ.
   ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ
ಫಲವತ್ತತೆಯನ್ನು ಕಾಪಾಡುವುದೇ ‘ಮಣ್ಣಿನ ಸಂರಕ್ಷಣೆ’ ಎನ್ನುವರು. ಮಣ್ಣಿನ ಸವೆತವನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳೆಂದರೆ –
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
• ಅಡ್ಡ ಬದುಗಳನ್ನು ನಿರ್ಮಿಸುವದು.
• ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸುವದು.
• ಅರಣ್ಯ ನಾಶವನ್ನು ತಡೆಗಟ್ಟಿ ಕಾಡನ್ನು ಬೆಳೆಸುವದು.
• ನೀರಿನ ಸೂಕ್ತ ಬಳಕೆ ಮಾಡುವದು.
• ಚೆಕ್ ಡ್ಯಾಮ್‍ಗಳ ನಿರ್ಮಾಣ.

5. ಮಣ್ಣಿನ ಸವೆತಕ್ಕೆ ಕಾರಣಗಳೇನು?
• ಅರಣ್ಯಗಳ ನಾಶ, 2. ಸಾಕು ಪ್ರಾಣಿಗಳನ್ನು ಮೇಯಿಸುವದು,
• ಅವೈಜ್ಞಾನಿಕ ಬೇಸಾಯ, 4. ಅಧಿಕ ನೀರಾವರಿ ಬಳಕೆ.

6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಸಮಾರು 7.7 ದಶಲಕ್ಷ ಚ.ಕಿ.ಮೀ. ಪ್ರದೇಶಗಳಲ್ಲಿ ಹರಡಿದೆ.
• ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತುತಂದು ಸಂಚಯಿಸಿರುವ ಮಣ್ಣಿನಿಂದ ರಚಿತವಾಗಿದೆ.
• ಈ ಮಣ್ಣಿನಲ್ಲಿ ¥ಇಂmಂಚಿμi ಮತ್ತು ಸುಣ್ಣ ಹೆಚ್ಚಾಗಿರುತ್ತದೆ.
• ಜೈವಿಕಾಂಶ & ಸಾರಜನಕ ಕಡಿಮೆ ಪ್ರಮಾಣದಲ್ಲಿರುತ್ತವೆ.
• 5 ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.

7. ಮಣ್ಣಿನ ಸವೆತ ಎಂದರೇನು? ಅದರಿಂದ ಉಂಟಾಗುವ ಸಮಸ್ಯೆಗಳು ಅಥವಾ ಪರಿಣಾಮಗಳನ್ನು ಪಟ್ಟಿಮಾಡಿ.
    ಭೂಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.
• ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
• ನದಿಗಳು ತಮ್ಮ ದಿಕ್ಕನ್ನು ಬದಲಾಯಿಸಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುತ್ತವೆ.
• ಜಲಾಶಯ ಅಥವಾ ಕರೆಗಳಲ್ಲಿ ಹೂಳು ತುಂಬುವದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವದು.

8. ಕಪ್ಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿರಿ.
• ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
• ಈ ಮಣ್ಣು ಅಗ್ನಿಶಿಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
• ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ.
• ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
• ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
• ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ.

9. ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
• ಈ ಮಣ್ಣು ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುತ್ತದೆ.
• ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ
• ಇದು ಕೆಂಪು ಬಣ್ಣವನ್ನು ಹೊಂದಿದೆ.
• ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಈ ಮಣ್ಣಿನಲ್ಲಿದೆ.
• ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.

10. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು
ಬರುವುದು?
   ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನೊಳಗೊಂಡ ಮಣ್ಣು ಕಂಡು ಬರುವದು

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments