ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು :-

ಕರ್ನಾಟಕದ  ಪ್ರಮುಖ  ನೀರಾವರಿ ಯೋಜನೆಗಳು :-

♻   ಕೃಷ್ಣ ರಾಜಸಾಗರ :-
ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ, ಶೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು 1.95ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ಕೃಷ್ಣ ಮೇಲ್ದವಡೆ ಯೋಜನೆ :-
ವಿಜಾಪುರ ಜಿಲ್ಲೆಯ ಆಲಮಟ್ಟಿ ಮತ್ತು ಯಾದಗಿರಿ ಜಿಲ್ಲೆಯ ನಾರಾಯಣಪುರದ ಕೃಷ್ಣಾನದಿಗೆ ಅಡ್ಡವಾಗಿ ನರ್ಮಿಸಲಾಗಿದೆ.ಇದು ವಿಜಾಪುರ, ಕಲಬುರ್ಗಿ, ಯಾದಗಿರಿ,ಬಾಗಲಕೋಟೆ,ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 6.22ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ಮಲಪ್ರಭಾ ಯೋಜನೆ :-
ಬೆಳಗಾವಿ ಜಿಲ್ಲೆಯ, ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.ಈ ಯೋಜನೆಯಿಂದ 2,20,028 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ಭದ್ರಾ ಜಲಾಶಯ :-
ಈ ಜಲಾಶಯವನ್ನು ಚಿಕ್ಕಮಂಗಳೂರು ಜಿಲ್ಲೆಯ, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಮತ್ತು ಬಳ್ಳಾರಿ ಜಿಲ್ಲೆಗಳ 1,05,570 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.

♻ ತುಂಗಭದ್ರಾ ಜಲಾಶಯ :-
ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ, ಹೊಸಪೇಟೆ ತಾಲ್ಲೂಕಿನ, ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಭದ್ರಾನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.ಈ ಯೋಜನೆಯು 1945. ರಲ್ಲಿ ಪ್ರಾರಂಭವಾಯಿತು. ಇದು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 3,62,795 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ತುಂಗಾ ಮೇಲ್ದಂಡೆ ಯೋಜನೆ :-
ಇದು  ಈಗ ಶಿವಮೊಗ್ಗ ಬಳಿಯಿರುವ ತುಂಗಾ ಅಣೆಕಟ್ಟಿಗೆ ಹೊಸ ರೂಪ ನೀಡಿ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳ ಸುಮಾರು 94,700 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಗುರಿ ಹೊಂದಲಾಗಿದೆ.

♻ ಹಾರಂಗಿ ಯೋಜನೆ :-
ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಕೊಡಗು,ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು 53,591ಹೆಕ್ಟೇರ್ ಭೂಮಿಗೆ ನೀರೊದಗಿಸಲಾಗುತ್ತಿದೆ.

♻ ಹೇಮಾವತಿ ಯೋಜನೆ :-
ಹಾಸನ ಜಿಲ್ಲೆಯ ಗೊರೂರು ಬಳಿ ಹೇಮಾವತಿ ನದಿಗೆ ಅಡ್ಡವಾಗಿ ಜಲಾಶಯ ನಿರ್ಮಿಸಿ ಹಾಸನ,ಕೊಡಗು, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳ ಸುಮಾರು 1,57,755 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻  ಕಬಿನಿ(ಕಪಿಲ)  ಜಲಾಶಯ :-
ಮೈಸೂರು ಜಿಲ್ಲೆ,ಹೆಚ್.ಡಿ.ಕೋಟೆ ತಾಲ್ಲೂಕಿನ ಬಿದರಹಳ್ಳಿ ಮತ್ತು ಬೀಚಹಳ್ಳಿಗಳ ಸಮೀಪ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಮೈಸೂರು ಮತ್ತು ಚಾಮರಾಜ ಜಿಲ್ಲೆಗಳ ಸುಮಾರು 87,900 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ಬೆಣ್ಣೆತೊರ ಯೋಜನೆ :-
ಕಲಬುರಗಿ  ಜಿಲ್ಲೆಯ,ಚಿತ್ತಾಪುರ ತಾಲ್ಲೂಕಿನ, ಹೆರೂರು ಗ್ರಾಮದ ಬಳಿ ಬೆಣ್ಣೆತೊರ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಕಲಬುರಗಿ ಜಿಲ್ಲೆಯ 20,234 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

♻ ಕಾರಂಜ ಯೋಜನೆ :-
ಬೀದರ್ ಜಿಲ್ಲೆಯ, ನಾಲ್ಕು ತಾಲ್ಲೂಕಿನ ಬಳಿ ಕಾರಂಜ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು 35,614 ಹೆಕ್ಟೇರ್ ನೀರು ಒದಗಿಸುತ್ತದೆ.

Post a Comment

0 Comments