ಬಂದರುಗಳು

ಬಂದರುಗಳು

# ಬಂದರು ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ, ಮುಖ್ಯವಾಗಿ ವ್ಯಾಪಾರಕ್ಕೆ ಉತ್ತಮ ಸಾರಿಗೆ ಸಂಪರ್ಕವಾಗಿದೆ. 

# ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು. ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ. ಅಥವಾ ಅವುಗಳನ್ನು ಹೂಳೆತ್ತುವ ಮೂಲಕ ನಿರ್ಮಿಸಲು ಸಾಧ್ಯ. ಮತ್ತಷ್ಟು ಆವರ್ತಕ ಹೂಳೆತ್ತುವಿಕೆ ಮೂಲಕ ಅವುಗಳ ನಿರ್ವಹಣೆ ಅಗತ್ಯವಿರುತ್ತದೆ.  

# ಭಾರತದ 90% ವಿದೇಶ ವ್ಯಾಪಾರವು ಹಡಗುಗಳ ಮುಖಾಂತರ ನಡೆಯುತ್ತದೆ.

# ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

# ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.

$.ಬಂದರು:ಮುಂಬಯಿ

ರಾಜ್ಯ:ಮಹಾರಾಷ್ಟ್ರ

ವಿಶೇಷ:ಇದು ಸ್ವಾಭಾವಿಕ ಬಂದರಾಗಿದ್ದು ದೇಶದಲ್ಲೇ ಅತಿ ದೊಡ್ಡದು.

ರಪ್ತು:ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು

ಆಮದು:ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು

$.ಬಂದರು :ಚೆನ್ನೈ

ರಾಜ್ಯ :ತಮಿಳುನಾಡು

ವಿಶೇಷ  :ಪೂರ್ವ ಕರಾವಳಿಯ ಕೃತಕ ಬಂದರು.

ರಫ್ತು:ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.

ಆಮದು:ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.

$.ಬಂದರು:ಕೊಲ್ಕತ್ತ

ರಾಜ್ಯ :ಪಶ್ಚಿಮ ಬಂಗಾಳ

ವಿಶೇಷ:ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.

ರಫ್ತು :ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,

ಆಮದು:ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.

$.ಬಂದರು :ವಿಶಾಖಪಟ್ಟಣ

ರಾಜ್ಯ :ಆಂಧ್ರಪ್ರದೇಶ

ವಿಶೇಷ :ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು

ರಫ್ತು :ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,

ಆಮದು :ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ

$.ಬಂದರು:ಮರ್ಮಗೋವಾ

ರಾಜ್ಯ :ಗೋವಾ

ವಿಶೇಷ:ಸ್ವಾಭಾವಿಕ ಬಂದರಾಗಿದೆ.

ರಫ್ತು :ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು, ಎಲೆ.

ಆಮದು:ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ

$.ಬಂದರು:ಕೊಚ್ಚಿನ್

ರಾಜ್ಯ:ಕೇರಳ

ವಿಶೇಷ:ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.

ರಫ್ತು :ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.

ಆಮದು :ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.

$.ಬಂದರು :ಕಾಂಡ್ಲಾ

ರಾಜ್ಯ :ಗುಜರಾತ್

ವಿಶೇಷ :ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.

ರಫ್ತು :ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.

ಆಮದು:ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.

$.ಬಂದರು:ಪಾರಾದೀಪ

ರಾಜ್ಯ:ಒರಿಸ್ಸಾ

ವಿಶೇಷ :ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.

ರಫ್ತು :ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು

ಆಮದು:ಯಂತ್ರಗಳು,

$.ಬಂದರು :ನವ ಮಂಗಳೂರು

ರಾಜ್ಯ:ಕರ್ನಾಟಕ

ವಿಶೇಷ :ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.

ರಫ್ತು :ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.

ಆಮದು :ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.

$.ಬಂದರು :ಟುಟಿಕಾರಿನ್

ರಾಜ್ಯ:ತಮಿಳುನಾಡು

ವಿಶೇಷ :ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರ

ು. ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

ರಫ್ತು :ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು

ಆಮದು:ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು

$.ಬಂದರ:ನವಶೇವಾ (ಜವಾಹರ್ ಲಾಲ್ ನೆಹರು ಬಂದರು)

ರಾಜ್ಯ:ಮಹಾರಾಷ್ಟ್ರ

ವಿಶೇಷ   :ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು.  
ಸಂಗ್ರಹ:ಸಾಗರ್

Post a Comment

1 Comments

  1. Super sir. Please sir any day updated new information for geography.

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)