ಭಾರತ ನಮ್ಮ ಭೂಮಿ (GEO)
ಮುಖ್ಯಾಂಶಗಳು:
• ಇಂಡಿಯಾ ಎಂಬ ಹೆಸರು ಸಿಂದೂ ನದಿಯಿಂದ ಬಳಕೆಗೆ ಬಂದಿದೆ.
• ಭಾರತವು ಒಟ್ಟು 32,87,263 ಚದರ ಕಿ.ಮೀ. ವಿಸ್ತಾರವಾಗಿದೆ.
• ಭಾರತದ ಮಧ್ಯಭಾಗದಲ್ಲಿ 23 ಳಿº ಉತ್ತರ ಅಕ್ಷಾಂಶ ಹಾಯ್ದು ಹೋಗುತ್ತದೆ.
• ಭಾರತದ ದಕ್ಷಿಣ ತುದಿಯಲ್ಲಿರುವ ದೇಶ ಶ್ರೀಲಂಕಾ
• ಭಾರತವು ಹೊಂದಿರುವ ಉದ್ದವಾದ ಕರಾವಳಿಯು 6100 ಕಿ.ಮೀ. ಆಗಿದೆ.
• ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿದೆ.
• ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದೆ.
• ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್
• ಭಾರತದ ದಕ್ಷಿಣದ ಭಾಗದ ಭೂಶಿರದ ಹೆಸರು ಕನ್ಯಾಕುಮಾರಿ
• ಇಂದಿರಾಪಾಯಿಂಟ್ ಇರುವ ದ್ವೀಪ ಗ್ರೇಟ್ ನಿಕೋಬಾರ್ ದ್ವೀಪ
• ಭಾರತವು ಪ್ರಪಂಚದ 7 ನೇ ದೊಡ್ಡ ದೇಶವಾಗಿದೆ.
• ಭಾರತದಲ್ಲಿ ಒಟ್ಟು 29 ರಾಜ್ಯಗಳು & 6 ಕೇಂದ್ರಾಡಳಿತ ಪ್ರದೇಶಗಳಿವೆ.
• 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ.
• ಭಾರತವು 8º4′ ಉತ್ತರ ಅಕ್ಷಾಂಶದಿಂದ 37º6ꞌ ಉತ್ತರ ಅಕ್ಷಾಂಶದವರೆಗೆ ಹರಡಿದೆ.
• ಭಾರತವು ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವರೆಗೆ 3214 ಕಿ.ಮೀ.ಉದ್ದವಾಗಿದೆ. (ಭಾರತದ ದಕ್ಷೀಣೋತ್ತರ ಉದ್ದ)
• ದ್ವೀಪಗಳನ್ನು ಪರಿಗಣಿಸಿದಾಗ ಗ್ರೇಟ್ ನಿಕೋಬಾರ್ ದ್ವೀಪದ ಇಂದಿರಾ ಪಾಯಿಂಟ್ ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ.
• ಭಾರತವು 68º7ꞌ ಪೂರ್ವ ರೇಖಾಂಶದಿಂದ 97º25ꞌ ಪೂರ್ವ ರೇಖಾಂಶದವರೆಗೆ ಹಬ್ಬಿದೆ.
• ಭಾರತವು ಪೂರ್ವ-ಪಶ್ಚಿಮವಾಗಿ 2933 ಕಿ.ಮೀ.ಅಗಲವಾಗಿದೆ.
• 82ಳಿº ರೇಖಾಂಶವನ್ನಾಧರಿಸಿ ಭಾರತದ ಪ್ರಮಾಣ ವೇಳೆಯನ್ನು ನಿಗದಿಪಡಿಸಲಾಗಿದೆ.
• ಭಾರತದ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ 5:30 ಗಂಟೆ ಮುಂದೆ ಇರುವುದು.
• ಭಾರತದ ಭೂಗಡಿಯ ಉದ್ದ 15200 ಕಿ.ಮೀ.ಗಳು.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಭಾರತವನ್ನು ಉಪಖಂಡ ಎಂದು ಕರೆಯಲು ಕಾರಣಗಳೇನು?
ಭಾರತದಲ್ಲಿನ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿದ್ಯತೆಗಳನ್ನು ಗಮನಿಸಿದಾಗ ಇದನ್ನು ಒಂದು ಉಪಖಂಡ ಎಂದು ಕರೆಯಬಹುದಾಗಿದೆ.
2. ಭಾರತದ ನೆರಹೊರೆ ರಾಷ್ಟ್ರಗಳಾವವು?
• ಭಾರತದ ವಾಯುವ್ಯದಲ್ಲಿ ಪಾಕಿಸ್ತಾನ & ಅಫಘಾನಿಸ್ತಾನ, ಉತ್ತರದಲ್ಲಿ ಚೀನಾ, ನೇಪಾಳ &
• ಭೂತಾನ್, ಪೂರ್ವದಲ್ಲಿ ಮಯನ್ಮಾರ್(ಬರ್ಮಾ) ಹಾಗೂ ಬಾಂಗ್ಲಾದೇಶ, ದಕ್ಷಿಣದಲ್ಲಿ ಶ್ರೀಲಂಕಾ ಹಾಗೂ
• ನೈರುತ್ಯದಲ್ಲಿರುವ ಮಾಲ್ದೀವ್ಸ್ ದ್ವೀಪಗಳು ಭಾರತದ ನೆರೆಯ ರಾಷ್ಟ್ರಳಾಗಿವೆ.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments