ಭಾರತದ ಪ್ರಾಕೃತಿಕ ಲಕ್ಷಣಗಳು (GEO)

ಭಾರತದ ಪ್ರಾಕೃತಿಕ ಲಕ್ಷಣಗಳು (GEO)

1. ಹಿನ್ನಲೆ.
2. ಭಾರತದ ಪ್ರಾಕೃತಿಕ ವಿಭಾಗಗಳು:
3.1 ಉತ್ತರದ ಪರ್ವತಗಳು:

3.2  ಉತ್ತರದ ಮೈದಾನಗಳು:

3.3  ಪರ್ಯಾಯ ಪ್ರಸ್ಥ ಭೂಮಿ:

3.3  ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು:
ಮುಖ್ಯಾಂಶಗಳು:
• ಭಾರತದ ಭೂಸ್ವರೂಪವನ್ನು 4 ಪ್ರಧಾನ ವಿಭಾಗಗಳಾಗಿ ವಿಂಗಡಿಸಲಾಗಿದೆ.
• ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುವರು.
• ಪ್ರಪಂಚದಲ್ಲಿಯೇ ಮೌಂಟ್ ಎವರೆಸ್ಟ (8848 ಮೀ) ಅತ್ಯುನ್ನತ ಶಿಖರವಾಗಿದೆ.
• ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ.
• ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ಸಹ್ಯಾದ್ರಿ ಎಂದು ಕರೆಯುವರು.
• ಹಿಮಾಲಯ ಪಾದ ಬೆಟ್ಟಗಳಿಗಿರುವ ಮತ್ತೊಂದು ಹೆಸರು ಶಿವಾಲಿಕ್ ಬೆಟ್ಟಗಳು.
• ಹಿಮಾಲಯ ಪರ್ವತ ಶ್ರೇಣಿಯು ಪಾಮೀರ ಗ್ರಂಥಿಯಿಂದ ಪ್ರಾರಂಭವಾಗಿ ಪೂರ್ವದಲಿ ್ಲಅರುಣಾಚಲ ಪ್ರದೇಶದವರೆಗೆ ಸುಮಾರು 2500 ಕಿ.ಮೀ.ಉದ್ದವಾಗಿ ಹಬ್ಬಿದೆ.
• ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತಗೊಂಡಿರುವ ಸರಣಿ ಹಿಮಾದ್ರಿ.
• ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ ನೇಪಾಳ & ಟಿಬೇಟ್ ಮಧ್ಯದಲ್ಲಿದೆ.
• ಗಂಗಾನದಿಯ ಉಗಮ ಸ್ಥಾನ ಗಂಗೋತ್ರಿ ಹಿಮನದಿ.
• ಭಾರತದ ಅತ್ಯುನ್ನತವಾದ ಶಿಖರ -  ಕೆ2 ಅಥವಾ ಮೌಂಟ ಗಾಡ್ವಿನ್ ಅಸ್ಟಿನ್
• ಉತ್ತರ ಮಹಾ ಮೈದಾನವನ್ನು ಸತ್ಲಜ್‍ಗಂಗಾ ಮೈದಾನವೆಂತಲೂ ಕರೆಯುವರು.
• ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಪರ್ಯಾಯ ಪ್ರಸ್ಥಭೂಮಿ.
• ಭಾರತದ ಅತಿ ಪುರಾತನ ಭೂಭಾಗ ಪರ್ಯಾಯ ಪ್ರಸ್ಥಭೂಮಿ.
• ಪರ್ಯಾಯ ಪ್ರಸ್ಥಭೂಮಿಯ ಒಟ್ಟು ವಿಸ್ತೀರ್ಣ 16 ಲಕ್ಷ ಚ.ಕಿ.ಮೀ.
• 16. ಅಣ್ಣಾಮಲೈ ಸರಣಿಯ ಅನೈಮುಡಿ ಶಿಖರ ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಪ್ರದೇಶವಾಗಿದೆ.
• ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.
• ಪಶ್ಚಿಮ ಕರಾವಳಿಯನ್ನು ಕರ್ನಾಟಕದಲ್ಲಿ ಕೊಂಕಣ ತೀರ ಎಂದು ಕರೆಯುವರು.
• ಒರಿಸ್ಸಾದ ಚಿಲ್ಕಾ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರಗಳು ಉಪ್ಪುನೀರಿನ ಸರೋವರಗಳಾಗಿವೆ.
• ಭಾರತಕ್ಕೆ ಸೇರಿದ 247 ದ್ವೀಪಗಳಿವೆ. ಇವುಗಳಲ್ಲಿ 204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು ಅರಬ್ಬಿ ಸಮುದ್ರದಲ್ಲಿವೆ.
• ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ.
• ಲಕ್ಷದ್ವೀಪಗಳು ಹವಳಗಳಿಂದ ನಿರ್ಮಿತವಾಗಿವೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಸಿವಾಲಿಕ್ ಶ್ರೇಣಿಯನ್ನು ಕುರಿತು ಬರೆಯಿರಿ.
ಶಿವಾಲಿಕ್ ಶ್ರೇಣಿಯು ಅತಿ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಹಿಮಾಲಯದ ಪಾದಬೆಟ್ಟಗಳೆಂದು ಕರೆಯುವರು. ಇಲ್ಲಿ ಕಿರಿದಾದ ಮೈದಾನಗಳಿವೆ. ಇವುಗಳಿಗೆ ಡೂನ್‍ಗಳೆಂದು ಕರೆಯುವರು.
ಉದಾ : ಡೆಹರಾಡೂನ್. ಇವು ಸಮುದ್ರ ಮಟ್ಟದಿಂದ 600 ರಿಂದ 1500 ಮೀ. ಎತ್ತರವಾಗಿವೆ.

2. ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
ಉತ್ತರದ ಮಹಾಮೈದಾನ ಭಾರತದ ¨Àೂs ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.

3. ಹಿಮಾಲಯ ಪರ್ವತಗಳ ಮೂರು ಶ್ರೇಣಿಗಳನ್ನು ತಿಳಿಸಿ.
ಎತ್ತರಕ್ಕನುಗುಣವಾಗಿ ಹಿಮಾಲಯ ಪರ್ವತಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ
1. ಶಿವಾಲಿಕ್ ಶ್ರೇಣಿ 2. ಹಿಮಾಚಲ ( ಮಧ್ಯ ಹಿಮಾಲಯ )
   3. ಮಹಾ ಹಿಮಾಲಯ ( ಹಿಮಾದ್ರಿ ).

4. ಹಿಮಾಲಯ ಪರ್ವತದಿಂದಾಗುವ ಪ್ರಯೋಜನಗಳೇನು?
• ಭಾರತಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.
• ಮಧ್ಯೆ ಏಷ್ಯಾದಿಂದ ಬೀಸುವ ಶೀತಗಾಳಿಯನ್ನು ತಡೆಹಿಡಿಯುತ್ತವೆ.
• ನದಿಗಳ ಉಗಮ ಪ್ರದೇಶವಾಗಿವೆ.
• ಜಲವಿದುಚ್ಛಕ್ತಿ ಉತ್ಪಾದನೆಗೆ ಅನುಕೂಲವಾಗಿವೆ.
• ವೈವಿದ್ಯಮಯ ಸಸ್ಯ & ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿವೆ.
• ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಒಳಗೊಂಡಿವೆ.

5. ಡೂನ್‍ಗಳೆಂದರೇನು?
ಶಿವಾಲಿಕ್ ಶ್ರೇಣಿಯಲ್ಲಿರುವ ಸಮತಟ್ಟಾದ ಕಿರಿದಾದ ಮೈದಾನಗಳಿಗೆ ಡೂನ್‍ಗಳೆಂದು ಕರೆಯುತ್ತಾರೆ.

6. ಪರ್ಯಾಯ ಪ್ರಸ್ಥಭೂಮಿಯು ಹೊಂದಿರುವ ವ್ಯಾಪ್ತಿಯನ್ನು ವಿವರಿಸಿ.
1. ಪರ್ಯಾಯ ಪ್ರಸ್ಥಭೂಮಿಯು ಉತ್ತರದಲ್ಲಿ ಸತ್ಲಜ್ ಗಂಗಾ ಮೈದಾನದಿಂದ ದಕ್ಷಿಣದಲ್ಲಿ ಹಿಂದುಮಹಾಸಾಗರದಲ್ಲಿ ಚಾಚಿಕೊಂಡಿದೆ.
2. ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳಿಂದ ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ ಕೂಡಿಕೊಂಡಿದೆ.
3. ಈ ಪ್ರಸ್ಥಭೂಮಿಯು ತ್ರಿಕೋನಾಕೃತಿಯಲ್ಲಿದ್ದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿದೆ.
4. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲಿ ಬಂಗಾಳಕೊಲ್ಲಿ & ದಕ್ಷಿಣದಲ್ಲಿ ಹಿಂದೂಮಹಾಸಾಗರವನ್ನು ಹೊಂದಿದೆ.

7. ಉತ್ತರದ ಮೈದಾನವನ್ನು ಸಂಚಯನ ಮೈದಾನವೆಂದು ಕರೆಯುತ್ತಾರೆ. ಏಕೆ? ಅಥವಾ ಉತ್ತರದ ಮೈದಾನ ಪ್ರದೇಶಗಳು ಹೇಗೆ ರಚಿತವಾಗಿವೆ?
  ಉತ್ತರ ಭಾರತದ ಮೈದಾನಗಳು ಹಿಮಾಲಯದಿಂದ ತುಂಬಿ ಹರಿಯುವ ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವದರಿಂದ ಇದನ್ನು ಸಂಚಯನ
ಮೈದಾನವೆಂದು ಕರೆಯುತ್ತಾರೆ.

8. ಭಾರತದ ವಾಯುಗುಣದ ಮೇಲೆ ಹಿಮಾಲಯ ಪರ್ವತಗಳು ಹೇಗೆ ಪ್ರಭಾವ ಬೀರುತ್ತದೆ?
  ಹಿಮಾಲಯ ಪರ್ವತಗಳು ಮಧ್ಯ ಏಶಿಯಾದಿಂದ ಬೀಸುವ ಶೀತ ಮಾರುತಗಳನ್ನುತಡೆಗಟ್ಟುತ್ತವೆ. ನೈರುತ್ಯ ಮಾರುತಗಳನ್ನು ತಡೆಗಟ್ಟಿ ಹೆಚ್ಚು ಮಳೆ ಸುರಿಯುವಂತೆ ಮಾಡುತ್ತದೆ.

9. ಪೂರ್ವ & ಪಶ್ಚಿಮ ಘಟ್ಟಗಳ ವ್ಯತ್ಯಾಸವನ್ನು ತಿಳಿಸಿ.
ಪೂರ್ವ ಘಟ್ಟಗಳು
• ಪೂರ್ವ ಘಟ್ಟಗಳು ಹೆಚ್ಚು ಎತ್ತರವಾಗಿಲ್ಲ. ಮತ್ತು ನಿರಂತರವಾಗಿಲ್ಲ.
• ಈ ಘಟ್ಟಗಳು ನದಿ ಕಣಿವೆಗಳಿಂದ
ಅಲ್ಲಲ್ಲಿ ಪ್ರತ್ಯೇಕಿಸಲ್ಪಟ್ಟಿವೆ. ಸಮುದ್ರದಿಂದ ದೂರದಲ್ಲಿ ಹರಡಿವೆ.
• ವಿಶಾಲವಾದ ನದಿಮುಖಜ ಭೂಮಿಯನ್ನು ಒಳಗೊಂಡಿವೆ.
ಪಶ್ಚಿಮ ಘಟ್ಟಗಳು
• ಪಶ್ಚಿಮ ಘಟ್ಟಗಳು ಅತ್ಯಂತ ಹೆಚು ್ಚಎತ್ತರವಾಗಿವೆ. ಮತ್ತು ನಿರಂತರವಾಗಿವೆ.
• ಇವು ಕರಾವಳಿಗೆ ಹೊಂದಿಕೊಂಡು ತುಂಬಾ ಕಡಿದಾಗಿವೆ.
• ಅನೇಕ ಜಲವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸೃಷ್ಟಿಸಿವೆ.

10. ಪಶ್ಚಿಮ ಕರಾವಳಿ ಮತ್ತು ಪೂರ್ವ ಕರಾವಳಿಗೂ ಇರುವ  ವ್ಯತ್ಯಾಸವೇನು?
        ಪಶ್ಚಿಮ ಕರಾವಳಿ
• ಪಶ್ಚಿಮ ಕರಾವಳಿಯು ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ
• ಗುಜರಾತಿನ ಕಛ್‍ನಿಂದ ಕನ್ಯಾಕುಮಾರಿಯವರೆಗೆ ಹಬ್ಬಿದೆ.
• ಇದು ಇಕ್ಕಟ್ಟಾಗಿದ್ದು ಸಮುದ್ರಕ್ಕೆ ಹೊಂದಿಕೊಂಡಿದೆ.

ಪೂರ್ವ ಕರಾವಳಿ
• ಪೂರ್ವ ಕರಾವಳಿಯು ಪೂರ್ವ ಘಟ್ಟ ಹಾಗೂ ಬಂಗಾಳಕೊಲ್ಲಿ ನಡುವೆ ಕನ್ಯಾಕುಮಾರಿ ಯಿಂದ ಉತ್ತರದಲ್ಲಿ ಗಂಗಾನದಿ ಮುಖಜ ಭೂಮಿಯವರೆಗೆ ಹಬ್ಬಿದೆ.
• ಇದು ಈ ಮೈದಾನವು ಹೆಚ್ಚು ಅಗಲ & ಒಂದೇ ರೀತಿ ಸಮತಟ್ಟಾಗಿದೆ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments