ಭೂಗೋಳ ಎಂದರೆ ಗ್ರೀಕ್ ನಲ್ಲಿ ಭೂಮಿಯ ಅಧ್ಯಯನ ಎಂದರ್ಥ.ಭೂಗೋಳ ಪದವನ್ನು ಮೊದಲು ಎರಟೊಸ್ಥನೀಸ್ ಪ್ರಯೋಗಿಸಿದನು. ಇವನನ್ನು ಭೂಗೋಳಶಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಭೂಗೋಳವು ವಿವಿಧಾಯಾಮಗಳ ವಿಜ್ಞಾನ. ಹಮ್ ಬೋಲ್ಟ ಎಂಬ ಜರ್ಮನಿಯ ಪ್ರಸಿದ್ದ ಭೂಗೋಳ ಶಾಸ್ತ್ರಜ್ಞನನ್ನು ಆಧುನಿಕ ಭೂಗೋಳ ಶಾಸ್ತ್ರದ ಪಿತಾಮಹ ನೆಂದು ಕರೆಯುತ್ತಾರೆ. ಭೂಗೋಳವನ್ನು ಪ್ರಮುಖವಾಗಿ ಎರಡು ಶಾಖೆಗಳಾಗಿ ಅಧ್ಯಯನ ಮಾಡುತ್ತೇವೆ. ಅವುಗಳೆಂದರೆ ಪ್ರಾಕೃತಿಕ ಭೂಗೋಳ ಶಾಸ್ತ್ರ ಮತ್ತು ಮಾನವ ಭೂಗೋಳ ಶಾಸ್ತ್ರ.
ವಿಶ್ವ ( Universe) : ವಿಶ್ವವೆಂದರೆ ಎಲ್ಲವನ್ನು ಒಳಗೊಂಡಿರುವುದು ಎಂದರ್ಥ.ಇದರಲ್ಲಿ ಅಸಂಖ್ಯಾತ ನಕ್ಷತ್ರಗಳು, ಆಕಾಶಕಾಯಗಳು ಸೇರಿವೆ. ವಿಶ್ವವು ಒಳಗೊಂಡಿರುವ ಇತರ ಮುಖ್ಯ ಆಕಾಶ ಕಾಯಗಳೆಂದರೆ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು, ಉಲ್ಕೆಗಳು, ಧೂಮಕೇತು ಮುಂತಾದವುಗಳು. ಇವುಗಳ ಗಾತ್ರ, ದೂರ, ಚಲನೆ ಮುಂತಾದ ಗುಣ ಲಕ್ಷಣಗಳ ಅಧ್ಯಯನವನ್ನೇ ಖಗೋಳ ಶಾಸ್ತ್ರ ಎಂದು ಕರೆಯಲಾಗಿದೆ. ವಿಶ್ವದ ಸೃಷ್ಠಿ ಸ್ಥಿತಿ ಲಯ ವ್ಯಾಪ್ತಿ ಮುಂತಾದವುಗಳನ್ನು ಕುರಿತು ಅಧ್ಯಯನ ಮಾಡುವುದನ್ನೆ ವಿಶ್ವ ಸೃಷ್ಠಿ ಶಾಸ್ತ್ರ ಎಂದು ಕರೆಯಲಾಗಿದೆ.
ಈ ನಮ್ಮ ಬ್ರಹ್ಮಾಂಡವು ಸುಮಾರು ೧೪ ಬಿಲಿಯನ್ ವರ್ಷಗಳ ಹಿಂದೆ ಸೃಷ್ಠಿಯಾಗಿರಬಹುದೆಂದು ಬಿಗ್ ಬ್ಯಾಂಗ್ ಸಿದ್ದಾಂತದ ಪ್ರಕಾರ ನಮಗೆ ತಿಳಿಯುತ್ತದೆ.
ಬ್ರಹ್ಮಾಂಡದಲ್ಲಿ ನಕ್ಷತ್ರಗಳು ಗುಂಪುಗುಂಪಾಗಿ ಕಂಡುಬರುತ್ತದೆ. ಇಂತಹ ಅಸಂಖ್ಯಾತ ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎಂದು ಕರೆಯುತ್ತೇವೆ. ನಮ್ಮ ಭೂಮಿಯು ಕ್ಷೀರ ಫಥ / ಮಿಲ್ಕಿವೇ ಎಂಬ ನಕ್ಷತ್ರ ಪುಂಜಕ್ಕೆ ಸೇರಿವೆ. ನಕ್ಷತ್ರಗಳು ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳು. ನಕ್ಷತ್ರಗಳ ಪರಸ್ಪರ ದೂರಳನ್ನು ಜ್ಯೋತಿರ್ವರ್ಷದಿಂದ ಅಳೆಯುತ್ತೇವೆ. ಬೆಳಕು ಒಂದು ಸೆಕೆಂಡಿಗೆ ೩ ಲಕ್ಷ ಕಿ.ಮೀ ವೇಗದಲ್ಲಿ ಒಂದು ವರ್ಷ ಎಷ್ಟು ದೂರ ಸಂಚರಿಸುತ್ತದೆಯೊ ಅದನ್ನೇ ಜ್ಯೋತಿರ್ವರ್ಷ ಎಂದು ಕರೆಯಲಾಗಿದೆ. ಸೂರ್ಯನೂ ಒಂದು ನಕ್ಷತ್ರ ಇದು ಭೂಮಿಗೆ ಅತ್ಯಂತ ಸಮೀಪವಾದದ್ದು ಸೂರ್ಯನಿಗೆ ಬಹು ಸಮೀಪದಲ್ಲಿರುವ ಪ್ರಾಕ್ಸಿಮ ಸೆಂಚುರಿ ನಕ್ಷತ್ರವು ಸುಮಾರು ೪.೩ ಜ್ಯೋತಿರ್ವರ್ಷ ಗಳಷ್ಟು ದೂರದಲ್ಲಿದೆ. ನಕ್ಷತ್ರಗಳು ಒಂದು ನಿರ್ದಿಷ್ಟವಾದ ವ್ಯವಸ್ಥಿತ ಹಾದಿಯಲ್ಲಿ ಬೆಳವಣಿಗೆ ಹೊಂದುತ್ತದೆ. ಈ ನಕ್ಷತ್ರಗಳು ಹೀಲಿಯಂನಿಂದ ಕೂಡಿದ್ದು ಇವುಗಳು ಕೆಳಕಂಡಂತೆ ಬೆಳವಣಿಗೆ ಹೊಂದುತ್ತದೆ.
ಸೌರವ್ಯೂಹ : ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ ಎಂಟು ಗ್ರಹಗಳು, ಅವುಗಳ ಉಪಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ ಪರಿಹಾರವನ್ನು ಸೌರವ್ಯೂಹ ಎಂದು ಕರೆಯುತ್ತಾರೆ.
ಸೂರ್ಯ : ಸೂರ್ಯನು ಸೌರಮಂಡಲದ ಆಧಾರ ಬಿಂದು. ಇದು ಸೌರವ್ಯೂಹದ ಒಟ್ಟು ದ್ರವ್ಯರಾಶಿ 99% ರಷ್ಟನ್ನು ಒಳಗೊಂಡಿದೆ. ಸೂರ್ಯನು ಬೃಹತ್ ಗಾತ್ರದ ಅಗ್ನಿ ಜ್ವಾಲೆಯಿಂದ ಕೂಡಿದ, ಅತ್ಯುಷ್ಣತೆ ಒಂದು ಅನಿಲರೂಪದ ರಾಶಿ ಸೂರ್ಯನು 71% ರಷ್ಟು ಭಾಗ ಜಲಜನಕ 27%, ಹೀಲಿಯಂ ಗಳಿಂದ ಕೂಡಿದೆ. ಇದರ ವಸ್ತು ರಾಶಿಯು ಭೂಮಿಯ ವಸ್ತು ರಾಶಿಗಿಂತ 3,30,000ದಷ್ಟು ಹಾಗೂ ಭೂಮಿಯ ತ್ರಿಜ್ಯಕ್ಕಿಂತ ಇದು 109 ಪಟ್ಟು ಅಧಿಕವಾಗಿರುವುದು ಸೂರ್ಯನ ಉಗಮ ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಎಂದು ಊಹಿಸಲಾಗಿದೆ. ಸೂರ್ಯನು ತನ್ನ ಅಕ್ಷದ ಸುತ್ತಲೂ ಪೂರ್ವದಿಂದ ಪಶ್ಚಿಮಕ್ಕೆ 27 ದಿನಗಳಿಗೊಮ್ಮೆ ಸುತ್ತುತ್ತಾನೆ. ಸೂರ್ಯನು ತನ್ನ ನಕ್ಷತ್ರಪುಂಜದ ಸುತ್ತಲು ಸುತ್ತು ಹಾಕಲು ಸುಮಾರು 250 ಮಿಲಿಯನ್ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಇದನ್ನು ” ಕಾಸ್ಮಿಕ್ ವರ್ಷ” ಎಂದು ಕರೆಯಲಾಗಿದೆ.
ಸೂರ್ಯನನ್ನು 5 ವಲಯಗಳಾಗಿ ವಿಂಗಡಿಸಿದ್ದಾರೆ. ಸೂರ್ಯನ ಮಧ್ಯ ಭಾಗವನ್ನು ಕೇಂದ್ರಗೋಳವೆಂದು ಕರೆಯುತ್ತಾರೆ. ಈ ಭಾಗದಲ್ಲಿ ಅತಿಹೆಚ್ಚು ಉಷ್ಣಾಂಶವಿರುತ್ತದೆ. ಸುಮಾರು 20 ಮಿಲಿಯನ್ ಸೆಂಟಿಗ್ರೇಡ್ ನಷ್ಟಿರುತ್ತದೆ. ಇದರ ಸುತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ ಸುತ್ತುವರಿದಿದೆ. ಇದರ ಮೇಲೆ, ಸುತ್ತಲೂ ನಮಗೆ ಕಂಡುಬರುವ ಬಳೆಯಾಕಾರದ ವಲಯವನ್ನು ಪೋಟೊಸ್ಪಿಯರ್ ಎಂದು ಕರೆಯುತ್ತಾರೆ. ಇದರ ಮೇಲ್ಭಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೋಸ್ಪಿಯರ್ ಎಂದು ಕರೆಯಲಾಗಿದೆ. ಇಲ್ಲಿನ ತಾಪಮಾನ ಸುಮಾರು 6000 ಡಿಗ್ರಿ ಸೆಲ್ಸಿಯಸ್. ಇದು ಸಾಮಾನ್ಯವಾಗಿ ಸೂರ್ಯ ಮುಳುಗುವಾಗ ಮತ್ತು ಉದಯಿಸುವಾಗ ಕಂಡುಬರುತ್ತದೆ.
1. ಬುಧಗ್ರಹ : ಸೂರ್ಯನಿಗೆ ಅತ್ಯಂತ ಸಮೀಪವಾದ ಗ್ರಹ. ಇದಕ್ಕೆ ಯಾವುದೇ ಉಪಗ್ರಹಗಳಿಲ್ಲ. ಈ ಗ್ರಹವು ತನ್ನದೇ ಆದ ವಾತಾವರಣವನ್ನು ಹೊಂದಿಲ್ಲ.ಇದು ಅತ್ಯಂತ ಚಿಕ್ಕದಾದ ಗ್ರಹ.
2. ಶುಕ್ರಗ್ರಹ : ಇದು ಭೂಮಿಗೆ ಅತ್ಯಂತ ಸಮೀಪದ ಗ್ರಹ. ಇದನ್ನು ಮುಂಜಾನೆ ಮತ್ತು ಸಂಜೆಯ ಗ್ರಹ ಎಂದು ಕರೆಯುತ್ತಾರೆ. ಇದು ಅತ್ಯಂತ ಉಷ್ಣವಾದ ಗ್ರಹ, ಇದರ ವಾತಾವರಣದಲ್ಲಿ 90-95% ಭಾಗ ಇಂಗಾಲದ ಡೈ ಆಕ್ಸೈಡ್ ಗಳಿಂದ ಕೂಡಿದೆ. ಇದರಲ್ಲಿ ಹಸಿರು ಮನೆ ಪರಿಣಾಮವನ್ನು ಕಾಣಬಹುದು. ಇದಕ್ಕೆ ಯಾವುದೇ ಉಪಗ್ರಹವಿಲ್ಲ. ಇದರ ಲಕ್ಷಣಗಳು ಭೂಮಿಯನ್ನು ಹೋಲುವುದರಿಂದ ಶುಕ್ರಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯುತ್ತಾರೆ. ಇದು ಹಿಮ್ಮುಖ ಚಲನೆಯನ್ನು ಹೊಂದಿದೆ. ಹಾಗೂ ಈ ಗ್ರಹವು ಅತ್ಯಂತ ಹೊಳಪುಳ್ಳ ಗ್ರಹವಾಗಿದೆ.
3. ಭೂಮಿ: ಇದನ್ನು ನೀಲಿಗ್ರಹ ಎಂದೂ ಕರೆಯುತ್ತಾರೆ.
4. ಮಂಗಳ : ಇದನ್ನು ಕೆಂಪು ಗ್ರಹವೆಂದೂ ಸಹ ಹೆಸರಿಸಲಾಗಿದೆ. ಮಂಗಳಕ್ಕೆ ಎರಡು ಉಪಗ್ರಹಗಳಿವೆ. ಪೊಬೋಸ್ ಮತ್ತು ಡಿಮೋಸ್. ಇದು ತೆಳುವಾದ ವಾತಾವರಣವನ್ನು ಹೊಂದಿದ್ದು ಇದರಲ್ಲಿ ಆರ್ಗಾನ್ ಮತ್ತು ನೈಟ್ರೋಜನ್ ಅನಿಲಗಳು ಮುಖ್ಯವಾದವುಗಳು.
5. ಗುರು : ಇದು ಸೌರಮಂಡಲದಲ್ಲೇ ಅತ್ಯಂತ ದೊಡ್ಡಗ್ರಹ. ಸೂರ್ಯನಿಂದ ಐದನೇ ಸ್ಥಾನದಲ್ಲಿದ್ದು, ಸೌರವ್ಯೂಹದ ಮದ್ಯಭಾಗವನ್ನು ಆವರಿಸುತ್ತದೆ. ಈ ಗ್ರಹವೂ ಇಪ್ಪತ್ತಕ್ಕೂ ಹೆಚ್ಚು ಉಪಗ್ರಹಗಳನ್ನು ಒಳಗೊಂಡಿದೆ. ಅದರಲ್ಲಿ ಗ್ಯಾನಿಮೇಡ ಎಂಬ ಉಪಗ್ರಹವೂ ಅತಿದೊಡ್ಡ ಉಪಗ್ರಹವಾಗಿದೆ. ಶೂಮೇಕರ್ ಧೂಮಕೇತುವು ಗುರುಗ್ರಹವನ್ನು 1994ರಲ್ಲಿ ಅಪ್ಪಳಿಸಿ ಗುರುತುಗಳಿವೆ. ಗುರುವಿನ ವಾತಾವರಣವೂ ಜಲಜನಕ, ಹೀಲಿಯಂ, ಮಿಥೇನ್ ಮತ್ತು ಅಮೋನಿಯ ಅನಿಲಗಳಿಂದ ಅವೃತವಾಗಿದೆ.
6. ಶನಿ: ಸೌರವ್ಯೂಹದ ಎರಡನೇ ದೊಡ್ಡ ಗ್ರಹ. ಇದರ ಉಂಗುರ ವ್ಯವಸ್ಥೆಯು ಇದನ್ನು ಸುಂದರವಾಗಿ ಮಾಡಿದೆ. ಇದಕ್ಕೆ ಮೂರು ಉಂಗುರಗಳಿವೆ. ಇದು ಅತೀ ಹೆಚ್ಚು ಉಪಗ್ರಹಗಳನ್ನು ಹೊಂದಿದೆ. ಟೈಟಾನ್ ಉಪಗ್ರಹವೂ ಸೌರಮಂಡಲದಲ್ಲೇ ಅತ್ಯಂತ ದೊಡ್ಡದಾದ ಉಪಗ್ರಹ. ಇದರ ವಾತಾವರಣವೂ ಹೆಚ್ಚಾಗಿ ಮಿಥೇನ್ ಅನಿಲದಿಂದ ಕೂಡಿದೆ.
7. ಯುರೇನಸ್ : ಈ ಗ್ರಹಕ್ಕೂ ಉಂಗುರ ವ್ಯವಸ್ಥೆ ಇದ್ದು ಸುಮಾರು 9 ಕಪ್ಪು ಬಣ್ಣದ ದಟ್ಟವಾದ ಉಂಗುರಗಳಿಂದ ಸುತ್ತುವರೆದಿದೆ. ಇದಕ್ಕೆ ಸುಮಾರು 15 ಉಪಗ್ರಹಗಳಿದ್ದು, ಮುಖ್ಯವಾದವುಗಳು ಏರಿಯಲ್, ಟೈಟಾನಿಯ, ಒಬೆರಾನ್, ಮತ್ತು ಮಿರಿಡ್
8. ನೆಪ್ಚೂನ್:ಇದು ಸೂರ್ಯನಿಗೆ ಅತ್ಯಂತ ದೂರದಲ್ಲಿರುವ ಗ್ರಹ. ಇದಕ್ಕೆ ಐದು ಉಂಗುರ ವ್ಯವಸ್ಥೆಗಳಿವೆ. ಇದರ ವಾತಾವರಣವೂ ಮಿಥೇನ್ ಜಲಜನಕ ಹಾಗೂ ಹೀಲಿಯಂಗಳಿಂದ ಅವರಿಸಿದೆ. ಮಿಥೇನ್ ಅನಿಲಗಳಿಂದಾಗಿ ಇದಕ್ಕೆ ನೀಲಿಬಣ್ಣ ಬಂದಿದೆ.
9. ಪ್ಲೂಟೋ : ವರದಿಗಳಂತೆ ಗ್ರಹಗಳ ಗುಂಪಿನಿಂದ ಹೊರಹಾಕಲಾಗಿದೆ. ಇದಕ್ಕೆ ತನ್ನದೇ ಆದ ಸ್ವಂತ ಪರಿಭ್ರಮಣ ಕಕ್ಷೆ ಇಲ್ಲದಿರುವುದು, ಗ್ರಹಗಳಿಗೆ ಇರಬೇಕಾದ ಕನಿಷ್ಟ ದ್ರವ್ಯ ರಾಶಿ ಇಲ್ಲದಿರುವುದು. ಈ ಕಾರಣಗಳಿಂದಾಗಿ ಇದನ್ನು ಗ್ರಹಗಳ ಗುಂಪಿನಿಂದ ತೆಗೆದು ಚಿಕ್ಕಗ್ರಹಗಳ ಗುಂಪಿಗೆ ಹಾಕಲಾಗಿದೆ.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments