ಹಿರಾಕುಡ್ ಅಣೆಕಟ್ಟು
# ಹಿರಾಕುಡ್ ಅಣೆಕಟ್ಟನ್ನು "ಮಹಾನದಿ"ಗೆ ಕಟ್ಟಲಾಗಿದೆ. ಇದು ಒಡಿಸ್ಸಾ ರಾಜ್ಯದ ಸಂಬಾಲ್ ಪುರದಿಂದ 15 ಕಿ.ಮೀ ದೂರದಲ್ಲಿದೆ.
# ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಮಹಾನದಿಯ ವಿವಿಧೋದ್ದೇಶದ ಬಳಕೆಯ ಬಗ್ಗೆ ಅಧ್ಯಯನ ಮಾದಲಾಯಿತು.
# 1937 ರಲ್ಲಿ ಮಹಾನದಿಯ ಪ್ರವಾಹವನ್ನು ತಡೆಯಲು ಸರ್. ಎಂ ವಿಶ್ವೇಶ್ವರಯ್ಯನವರು ಜಲಾಶಯ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ್ದರು.
# ಮುಂದೆ ಎಪ್ರೀಲ್ 12, 1948 ರಂದು ಮೊದಲ ಬ್ಯಾಚಿನ ಕಾಂಕ್ರೀಟ್ ನ್ನು ಜವಾಹರ್ ಲಾಲ್ ನೆಹರು ರವರು ಹಾಕಿದರು. ಮತ್ತು ಅಣೆಕಟ್ಟನ್ನು 1957 ರ ಜನೆವರಿ 13 ರಂದು ಉದ್ಘಾಟಿಸಿದರು.
# ಇದು ಜಗತ್ತಿನ ಅತಿ ಉದ್ದವಾದ ಮಾನವ ನಿರ್ಮಿತ ಅಣೆಕಟ್ಟಾಗಿದ್ದು, ಇದು 26 ಕಿ.ಮೀ ಉದ್ದವಿದ್ದು ನಾಲೆಗಳು ಸೇರಿ 55 ಕಿ.ಮೀ ಉದ್ದವಿದೆ.
# ಇದು ಭಾರತ ದೇಶದ ಅತಿ ಉದ್ದವಾದ ಅಣೆಕಟ್ಟಾಗಿದೆ.
# ಇದು ಜಲವಿದ್ಯುತ್ ಗೆ ಸಹಕಾರಿಯಾಗಿದೆ.
# ಹಿರಾಕುಡ್ ಅಣೆಕಟ್ಟು ಮಹಾನದಿಯ ಪ್ರವಾಹದಿಂದ ಒರಿಸ್ಸಾ ರಾಜ್ಯವನ್ನು ರಕ್ಷಿಸುತ್ತದೆ.
# ಸ್ವಾತಂತ್ರ್ಯಾನಂತರ ಭಾರತದಲ್ಲಿ ಸ್ಥಾಪಿಸಲಾದ ವಿವಿಧೋದ್ದೇಶ ಯೋಜನೆಗಳಲ್ಲಿ ಇದು ಒಂದಾಗಿದೆ.
# ಮಹಾನದಿಯನ್ನು ’ಒರಿಸ್ಸಾದ ಕಣ್ಣೀರಿನ ನದಿ’ ಎಂದು ಕರೆಯಲಾಗುತ್ತದೆ.
# ಈ ಮಹಾನದಿಯು ಛತ್ತೀಸಘಡ್ ರಾಜ್ಯದ ಧಮತ್ರಿ ಸಿಹವಾದಲ್ಲಿ ಉಗಮವಾಗಿ ಛತ್ತೀಸಘಡ್ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಹರಿಯುತ್ತದೆ.
# ತೇಲನ್, ಐಬಿ, ಶಿವನಾಥ ಇವು ಮಹಾನದಿಯ ಉಪನದಿಗಳು. ಶಿವನಾಥ ನದಿಯು ಮಹಾನದಿಯ ಅತಿದೊಡ್ದ ಉಪನದಿಯಾಗಿದೆ.
# ಮಹಾನದಿಯು ಛತ್ತೀಸಘಡ ಮತ್ತು ಒರಿಸ್ಸಾ ರಾಜ್ಯಗಳಿಗೆ ಕುಡಿಯುವ ನೀರು, ನೀರಾವರಿಗೆ ಮತ್ತು ಜಲ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಿದೆ.
# ಮಹಾನದಿಯ ಪ್ರವಾಹವನ್ನು ನಿಯಂತ್ರಿಸಲು ಒರಿಸ್ಸಾದಲ್ಲಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ.
ಇದರ ಮೇಲೆ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳೆಂದರೇ :-
1) ಹಿರಾಕುಡ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
2) ಜಗತ್ತಿನ ಅತಿ ಉದ್ದವಾದ ಮಾನವ ನಿರ್ಮಿತ ಅಣೆಕಟ್ಟು ಯಾವುದು?
3) ಭಾರತ ದೇಶದ ಅತಿ ಉದ್ದವಾದ ಅಣೆಕಟ್ಟು ಯಾವುದು?
4) ಯಾವ ನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ?
5) ಮಹಾನದಿಯ ಅತಿ ದೊಡ್ಡ ಉಪನದಿ ಯಾವುದು?
6) ಮಹಾನದಿಯು ಯಾವ ರಾಜ್ಯಗಳಲ್ಲಿ ಹರಿಯುತ್ತದೆ?
2 Comments
Thank You sir..
ReplyDeleteThank you very much sir
ReplyDelete