ಅಮೆಜಾನ್ ಕಾಡು

🌴ಅಮೆಜಾನ್ ಕಾಡು🌳

❄️ಅಮೆಜೋನಿಯಾ ಅಥವಾ ಅಮೆಜಾನ್ ಕಾಡು ಎಂದು ಹೆಸರಾಗಿದೆ. ಇದು ದಕ್ಷಿಣ ಅಮೆರಿಕಾದ ಅಮೆಜಾನ್ ಜಲಾನಯನ ಪ್ರದೇಶದ ಬಹಳಷ್ಟು ಭಾಗವನ್ನು ಆವರಿಸಿರುವ ತೇವ ಹಾಗೂ ಅಗಲ ಎಲೆಗಳುಳ್ಳ ಕಾಡು.

❄️ಈ ಜಲಾನಯನ ಪ್ರದೇಶವು ಏಳು ದಶಲಕ್ಷ ಚದರ ಕಿಲೋಮೀಟರ್ಗಳಷ್ಟು ವಿಸ್ತೀರ್ಣ (1.7 ಶತಕೋಟಿ ಎಕರೆಗಳು) ಆವರಿಸಿದೆ. ಇದರಲ್ಲಿ ಐದೂವರೆ ದಶಲಕ್ಷ ಚದರ ಕಿಲೋಮೀಟರ್ಗಳಷ್ಟು (1.4 ಶತಕೋಟಿ ಎಕರೆಗಳು) ಭಾಗವನ್ನು ಮಳೆಕಾಡು ಆವರಿಸಿದೆ.

❄️ಅಮೆಜಾನ್ ಮಳೆಕಾಡು ಪ್ರದೇಶವು ಒಂಭತ್ತು ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ.
ಈ ಕಾಡಿನ ಬಹುತೇಕ ಭಾಗ, ಅಂದರೆ 60%ರಷ್ಟು ಭಾಗವು ಬ್ರೆಜಿಲ್ ‌ ದೇಶದಲ್ಲಿ,
13%ರಷ್ಟು ಪೆರು ದೇಶದಲ್ಲಿ, ಹಾಗೂ ಕೊಲಂಬಿಯಾ, ವೆನಿಜೂಯೆಲಾ ,
ಇಕ್ವೆಡಾರ್ , ಬೊಲಿವಿಯಾ , ಗಯಾನಾ ,
ಸೂರಿನಾಮ್ ಹಾಗೂ ಫ್ರೆಂಚ್ ಗಯಾನಾ ದೇಶಗಳಲ್ಲಿ ಸ್ವಲ್ಪ ಭಾಗಗಳು ಆವರಿಸಿವೆ. ನಾಲ್ಕು ರಾಷ್ಟ್ರಗಳಲ್ಲಿನ ರಾಜ್ಯಗಳು ಅಥವಾ ಇಲಾಖೆಗಳು ಈ ಕಾಡು ಪ್ರದೇಶದ ಹೆಸರಿಗೆ ಅನುಗುಣವಾಗಿ ಅಮೆಜೊನಾಸ್ ಎಂಬ ಹೆಸರು ಪಡೆದಿವೆ.
❄️ಭೂಮಿಯಲ್ಲಿ ಉಳಿದಿರುವ ಮಳೆಕಾಡುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲನ್ನು ಅಮೆಜಾನ್ ಪ್ರತಿನಿಧಿಸುತ್ತದೆ.

❄️ ಇಡೀ ವಿಶ್ವದ ಉಷ್ಣವಲಯದ ಮಳೆಕಾಡಿನ ಅತಿ ವಿಶಾಲ ಹಾಗೂ ಹಲವು ಸಮೃದ್ಧ ಪ್ರಭೇದಗಳನ್ನು ಅಮೆಜಾನ್ ಮಳೆಕಾಡು ಒಳಗೊಂಡಿದೆ.

❄️ವಿಶ್ವದ ಏಳು ಹೊಸ ಅದ್ಭುತಗಳ ಪ್ರತಿಷ್ಠಾನವು ಪ್ರಕೃತಿಯ ಏಳು ಹೊಸ ಅದ್ಭುತಗಳ ಒಂದು ನಾಮನಿರ್ದೇಶನವಾಗಿ 2008ರಲ್ಲಿ ಅಮೆಜಾನ್ ಮಳೆಕಾಡುಗಳನ್ನು ಪಟ್ಟಿ ಮಾಡಿತ್ತು.

❄️2009ರ ಫೆಬ್ರವರಿಯಲ್ಲಿ, ಕಾಡುಗಳು ರಾಷ್ಟ್ರೀಯ ಉದ್ಯಾನಗಳು ಮತ್ತು ನೈಸರ್ಗಿಕ ವನ್ಯಧಾಮಗಳ ವಿಭಾಗವಾದ ಗ್ರೂಪ್ ಇ ನಲ್ಲಿ ಅಮೆಜಾನ್ ಕಾಡು ಅಗ್ರಶ್ರೇಣಿಯಲ್ಲಿತ್ತು

🌏ಇತಿಹಾಸ

☀️ಈಯಸೀನ್ ಯುಗದಲ್ಲಿ ಭೂಮಿ.
ಈಯೊಸೀನ್ ಯುಗದಲ್ಲಿ ಈ ಮಳೆಕಾಡು ಉದ್ಭವವಾಯಿತು ಎನ್ನಲಾಗಿದೆ.

☀️ಅಟ್ಲಾಂಟಿಕ್ ಸಾಗರ ವು ಸಾಕಷ್ಟು ಅಗಲ ಹೊಂದಿ, ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಬೆಚ್ಚನೆಯ, ತೇವವುಳ್ಳ ಹವಾಗುಣವುಂಟಾಯಿತು. ಇದರಿಂದಾಗಿ, ಉಷ್ಣವಲಯದ ಉಷ್ಣಾಂಶವು ವಿಶ್ವದಾದ್ಯಂತ ಕಡಿಮೆಯಾಗಿ, ಮಳೆಕಾಡುಗಳು ಉದ್ಭವವಾದವು.

☀️ಕನಿಷ್ಠ ಪಕ್ಷ 55 ದಶಲಕ್ಷ ವರ್ಷಗಳಿಂದಲೂ ಈ ಮಳೆಕಾಡು ಅಸ್ತಿತ್ವದಲ್ಲಿದೆ.

☀️ಪ್ರಚಲಿತ ಹಿಮ ಯುಗದ ತನಕ ಹವಾಗುಣವು ಇನ್ನಷ್ಟು ಶುಷ್ಕವಾಗಿದ್ದು, ಹುಲ್ಲುಗಾಡು ಹೆಚ್ಚು ವ್ಯಾಪಿಸಿತ್ತು.

☀️ಈ ಯುಗದ ನಂತರ, ಅಮೆಜಾನ್ ಜಲಾನಯನ ಪ್ರದೇಶದ ಬಹಳಷ್ಟು ಭಾಗವು ಹುಲ್ಲುಗಾವಲುತರಹದ ಪರಿಸರ ವ್ಯವಸ್ಥೆಯಿಂದ ಮುಕ್ತವಾಗಿದೆ.

☀️ಕ್ರಿಟೇಷಿಯಾ–ತೃತೀಯಕ ಅಳಿಯುವ ವಿದ್ಯಮಾನ ದ ನಂತರ ಡೈನೊಸಾರ್ಗಳ ಅವನತಿ ಹಾಗೂ ತೇವವುಳ್ಳ ಹವಾಗುಣದಿಂದಾಗಿ ಉಷ್ಣವಲಯದ ಮಳೆಕಾಡು ಖಂಡದುದ್ದಕ್ಕೂ ಹರಡಿಕೊಳ್ಳಲು ಅವಕಾಶ ನೀಡಿರಬಹುದು.

🌐ಜೀವವೈವಿಧ್ಯ

🦅🐗🐍🐘🦏🦍

🌝ತೇವವುಳ್ಳ ಉಷ್ಣವಲಯ ಕಾಡುಗಳಲ್ಲಿ ಸಮೃದ್ಧ ಪ್ರಭೇದಗಳಪರಿಸರ ವ್ಯವಸ್ಥೆಯಿದೆ. ಆಫ್ರಿಕಾ ಹಾಗೂ ಏಷ್ಯಾ ಖಂಡಗಳ ತೇವ ಕಾಡುಗಳಿಗಿಂತಲೂ, ಅಮೆರಿಕಾದ ಎರಡೂ ಉಷ್ಣವಲಯ ಕಾಡುಗಳಲ್ಲಿ ಸತತ ಸಮೃದ್ಧ ಪ್ರಭೇದಗಳಿವೆ.  ಅಮೆರಿಕಾ ಖಂಡಗಳಲ್ಲಿ ಅತಿಹೆಚ್ಚು ವಿಸ್ತೀರ್ಣದ ಉಷ್ಣವಲಯ ಮಳೆಕಾಡಾದ ಅಮೆಜಾನ್ ಮಳೆಕಾಡುಗಳಲ್ಲಿರುವ ಜೀವವೈವಿಧ್ಯ ವಿಶಿಷ್ಠವಾಗಿದೆ. ವಿಶ್ವದಲ್ಲಿರುವ ಹತ್ತು ಜ್ಞಾತ ಪ್ರಭೇದಗಳಲ್ಲಿ ಒಂದು ಅಮೆಜಾನ್ ಮಳೆಕಾಡಿನಲ್ಲಿದೆ.  ಅಮೆಜಾನ್ ಮಳೆಕಾಡು ಸಜೀವ ಸಸ್ಯ-ಪ್ರಾಣಿವರ್ಗ ಪ್ರಭೇದಗಳ ದೊಡ್ಡ ಸಮೂಹವನ್ನೇ ಒಳಗೊಂಡಿದೆ.

💥ಅಮೇಜಾನ್ ಮಳೆಕಾಡು ಸುಮಾರು 2.5 ದಶಲಕ್ಷ ಕೀಟ ಪ್ರಭೇದಗಳು,

💥ಹತ್ತು ಸಾವಿರಕ್ಕಿಂತಲೂ ಹೆಚ್ಚು ಸಸ್ಯಗಳು

💥2,000 ಪಕ್ಷಿಗಳು

💥ಸಸ್ತನಿಗಳಿಗೆ ಆವಾಸಸ್ಥಾನವಾಗಿದೆ. ಇದುವರೆಗೂ, ಈ ಪ್ರದೇಶದಲ್ಲಿ ಕನಿಷ್ಠ 40,000 ಸಸ್ಯಪ್ರಭೇದಗಳು

💥3,000 ಮೀನುಗಳು

💥1,294 ಹಕ್ಕಿಗಳು

💥427 ಸಸ್ತನಿಗಳು

💥428 ಉಭಯಚರಿಗಳು

💥378 ಸರಿಸೃಪಗಳನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗಿದೆ.

💥ವಿಶ್ವದ ಪ್ರತಿ ಐದು ಹಕ್ಕಿ ಪ್ರಭೇದಗಳಲ್ಲಿ ಒಂದು ಅಮೆಜಾನ್ ಮಳೆಕಾಡುಗಳಲ್ಲಿ ವಾಸಿಸುತ್ತದೆ.

💥ವಿಜ್ಞಾನಿಗಳು ಬ್ರೆಜಿಲ್ ಒಂದರಲ್ಲೇ ಸುಮಾರು 96,660ರಿಂದ 128,843 ಅಕಶೇರುಕ ಪ್ರಭೇದಗಳನ್ನು ವಿವರಿಸಿದ್ದಾರೆ.
ಇಲ್ಲಿನ ಸಸ್ಯಪ್ರಭೇದಗಳ ವೈವಿಧ್ಯತೆಯು ಇಡೀ ಭೂಮಿಯಲ್ಲೇ ಅತಿ ಹೆಚ್ಚು. ಒಂದು ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ 75,000 ವಿಧದ ಮರಗಳು ಹಾಗೂ 150,000 ಪ್ರಭೇದಗಳ ದೊಡ್ಡ ಗಿಡಗಳಿವೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

💥ಅಮೆಜಾನ್ ಮಳೆಕಾಡಿನ ಒಂದು ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಸುಮಾರು 90,790 ಟನ್ಗಳಷ್ಟು ಸಜೀವ ಸಸ್ಯಗಳನ್ನು ಒಳ ಗೊಂಡಿವೆ.

💥ಸಸ್ಯ ಜೀವರಾಶಿಯ ಸರಾಸರಿಯು ಸುಮಾರು
356 ± 47 tonnes ha −1 ಎಂದು ಅಂದಾಜು ಮಾಡಲಾಗಿದೆ.

Post a Comment

0 Comments